ಚುನಾವಣೆ ಜರೂರು ಅಧಿಸೂಚನೆ. ಪುರಸಭೆ ಚುನಾಯಿತ ಮತದಾರರ ಪಟ್ಟಿಯಲ್ಲಿ ಲೋಪ ದೋಷಗಳಿದ್ದರೆ ಕೂಡಲೇ ತಿದ್ದುಪಡಿ ಮಾಡಿಸಿಕೊಳ್ಳಿ
ವರದಿ ಸುಂದರರಾಜ್ BA ಕಾರಟಗಿ

ಚುನಾವಣೆ ಜರೂರು ಅಧಿಸೂಚನೆ.
ಪುರಸಭೆ ಚುನಾಯಿತ ಮತದಾರರ ಪಟ್ಟಿಯಲ್ಲಿ ಲೋಪ ದೋಷಗಳಿದ್ದರೆ ಕೂಡಲೇ ತಿದ್ದುಪಡಿ ಮಾಡಿಸಿಕೊಳ್ಳಿ.. ಸಾಬಣ್ಣ ಕಟ್ಟಿಕಾರ್ ಮುಖ್ಯಾಧಿಕಾರಿಗಳು
ಕಾರಟಗಿ : ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 (ಜಿಲ್ಲಾ ಯೋಜನಾ ಸಮಿತಿಯ ಸದಸ್ಯರುಗಳ ಚುನಾವಣೆ) ನಿಯಮಗಳು, 1996ರ ಅಡಿಯಲ್ಲಿ ಜಿಲ್ಲಾ ಯೋಜನಾ ಸಮಿತಿಗೆ ನಗರ ಸ್ಥಳೀಯ ಸಂಸ್ಥೆ ಮತ ಕ್ಷೇತ್ರದಿಂದ 6 ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಸಬೇಕಾಗಿರುವುದರಿಂದ, ಸದರಿ ಚುನಾವಣೆಗೆ ಸದಸ್ಯರುಗಳನ್ನು ಆಯ್ಕೆ ಮಾಡಲು ನಡೆಸುವ ಚುನಾವಣೆಗೆ ಸದರಿ ನಿಯಮಗಳ ನಿಯಮ 5 ರಡಿಯಲ್ಲಿ ಮತದಾರರ ಪಟ್ಟಿಯನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು, ಪುರಸಭಾ ಮತ ಕ್ಷೇತ್ರಕ್ಕೆ ಸಿದ್ಧಪಡಿಸಬೇಕಾಗಿರುವುದರಿಂದ, ಅಧಿಸೂಚನೆಗೆ ಲಗತ್ತಿಸಿರುವ ಅನುಬಂಧ-1 ರಲ್ಲಿ ಪುರಸಭಾ ಮತಕ್ಷೇತ್ರದ ಮತದಾರರ ಪಟ್ಟಿಯನ್ನು ಪಕಟಿಸಲಾಗಿದೆ.

ಜಿಲ್ಲಾ ಯೋಜನಾ ನಗರ ಸ್ಥಳೀಯ ಸಂಸ್ಥೆ ಮತ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಯಾವುದೇ ನಮೂದು ತಪ್ಪಾಗಿದ್ದರೂ, ಅಥವಾ ದೋಷ ಪೂರ್ಣವಾಗಿದ್ದರೂ ಅಂತಹ ನಮೂದುಗಳನ್ನು ಕರ್ನಾಟಕ ಪಂಚಾಯತ್ ರಾಜ್ (ಜಿಲ್ಲಾ ಯೋಜನಾ ಸಮಿತಿಗಳ ಸದಸ್ಯರುಗಳ ಚುನಾವಣೆ) ನಿಯಮಗಳು, 1996ರ ನಿಯಮ ರ ಪ್ರಕಾರ ದಿನಾಂಕ:05-01-2026 ರಂದು ತಿದ್ದುಪಡಿ ಮಾಡಬಹುದಾಗಿದೆ. ಆದ್ದರಿಂದ ಯಾವುದೇ ಮತದಾರರ : ನಮೂದುಗಳನ್ನು ತಿದ್ದುಪಡಿ ಮಾಡಬೇಕೆಂದಾದರೆ ದಿನಾಂಕ: 05-01-2026 ರ ಅಪರಾಹ್ನ 3.00 ಗಂಟೆಯೊಳಗೆ ಸಂಬಂಧಿಸಿದವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ನೇರವಾಗಿ ಲಿಖಿತವಾಗಿ ಸಲ್ಲಿಸಲು ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ಜಿಲ್ಲಾ ಯೋಜನಾ ಸಮಿತಿ 2025 ಚುನಾವಣೆಯ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರ ಮತದಾರ ಪಟ್ಟಿಯಲ್ಲಿ ಯಾವುದಾದರೂ ದೋಷಗಳಿದ್ದರೆ ಕೂಡಲೇ ತಿದ್ದುಪಡಿ ಮಾಡಿಕೊಳ್ಳಲು ಪುರಸಭೆಯ ಮುಖ್ಯಾಧಿಕಾರಿಗಳು ಈ ಮೂಲಕ ಸೂಚಿಸಿದ್ದಾರೆ.




