ಕಾರಟಗಿ

ರಾಷ್ಟ್ರಪಿತ ಹಾಗೂ ಸಂವಿಧಾನ ಶಿಲ್ಪಿ ಬಿ.ಆರ್ ಅಂಬೇಡ್ಕರ ಅವರ ಪೂಜಾ ಭಾವ ಚಿತ್ರ ಪಕ್ಕದಲ್ಲಿಯೇ ಬೂಟು ಧರಿಸಿ ನಿಂತ ಪಿಡಿಓ. ದಲಿತ ಮುಖಂಡ ತೀವ್ರ ಖಂಡನೆ ಕ್ರಮಕ್ಕೆ ಆಗ್ರಹ

ರಾಷ್ಟ್ರಪಿತ ಹಾಗೂ ಸಂವಿಧಾನ ಶಿಲ್ಪಿ ಬಿ.ಆರ್ ಅಂಬೇಡ್ಕರ ಅವರ ಪೂಜಾ ಭಾವಚಿತ್ರದ ಪಕ್ಕದಲ್ಲಿಯೇ ಬೂಟು ಧರಿಸಿ ನಿಂತ ಪಿಡಿಓ. ದಲಿತ ಮುಖಂಡ ತೀವ್ರ ಖಂಡನೆ ಕ್ರಮಕ್ಕೆ ಆಗ್ರಹ

ಕಾರಟಗಿ ಜನವರಿ 26.: ತಾಲೂಕಿನ ಚಳ್ಳೂರು ಗ್ರಾಮ ಪಂಚಾಯಿತಿಯಲ್ಲಿ 77 ನೆಯ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗಣರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಪಂಚಾಯಿತಿಯ ಆವರಣದಲ್ಲಿ ಧ್ವಜಾರೋಹಣ ಜೊತೆಗೆ ಸಂವಿಧಾನ ಶಿಲ್ಪಿ ಬಿ.ಆರ್ ಅಂಬೇಡ್ಕರ್ ಅವರ ಮತ್ತು ಮಹಾತ್ಮ ಗಾಂಧಿ ಅವರ ಭಾವಚಿತ್ರಗಳನ್ನು ಇರಿಸಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಗಿತ್ತು. ಕಾರ್ಯಕ್ರಮಕ್ಕೆ ಪಂಚಾಯತಿ ಸಿಬ್ಬಂದಿ ಜನಪ್ರತಿನಿಧಿಗಳು ಮತ್ತು ಗ್ರಾಮಸ್ಥರು ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮತ್ತು ಸಡಗರ ಸಂತೋಷದಿಂದ ನೆರವೇರಿಸಲಾಗಿತ್ತು.

ಆದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಗೌರವಾನ್ವಿತ ರಾಮು ನಾಯಕ್ ಅವರು ಅಂಬೇಡ್ಕರ್ರರ ಮತ್ತು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪೂಜಾ ಕಾರ್ಯಕ್ರಮ ಸಲ್ಲಿಸಿದ ನಂತರ ಅವರ ಬೂಟುಗಳನ್ನು ಧರಿಸಿಯೇ  ಬಿ ಆರ್ ಅಂಬೇಡ್ಕರ್ ಮತ್ತು ಮೋಹನ್ ದಾಸ ಕಾರಂ ಚಂದ್ ಗಾಂಧಿ ಅವರ ಭಾವಚಿತ್ರಗಳು ಇರುವ ಕುರ್ಚಿಗೆ ಅಂಟಿಕೊಂಡೆ ಪಿಡಿಒ ಇವರು ನಿಂತು ಗಣ್ಯ ವ್ಯಕ್ತಿಗಳಿಗೆ ಅಪಮಾನ ಮಾಡಿದ್ದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ದಲಿತ ಮುಖಂಡ ಶರಣಪ್ಪ ವಣಿಗೇರಿ ಅವರು ಆರೋಪಿಸಿ ಖಂಡಿಸಿದ್ದಾರೆ.

ಈ ವಿಚಾರ ತಿಳಿದ ಪಿ.ಡಿ.ಓ ಗೌರವಾನ್ವಿತ ರಾಮುನಾಯಕ್ ಅವರು ದಲಿತ ಮುಖಂಡ ಶರಣಪ್ಪ ವಣಗೇರಿ ಅವರಿಗೆ ಕರೆ ಮಾಡಿ ಈ ವಿಚಾರವನ್ನು ಇಲ್ಲಿಗೆ ಬಿಟ್ಟುಬಿಡಿ ನನ್ನದು ತಪ್ಪಾಗಿದೆ ಕ್ಷಮೆ ಇರಲಿ ಎಂದಿದ್ದಾರೆ . ಇದಕ್ಕೆ ಪ್ರತಿಕ್ರಿಯೆ ನೀಡಿದ ದಲಿತ ಮುಖಂಡ ಶರಣಪ್ಪ ವಣಗೇರಿಯವರು ನೀವು ಅಂಬೇಡ್ಕರ್ ಅವರ ಭಾವಚಿತ್ರದ ಹತ್ತಿರ ಬೂಟುಗಳನ್ನು ಹಾಕಿಕೊಂಡು ನಿಲ್ಲೋದಕ್ಕೆ ನಿಮಗೆ ಕಾನೂನಿನ ಅರಿವಿಲ್ಲವೇ ? ಎಂದು ಖಡಕ್ ಆಗಿ ಉತರಿಸಿದ್ದಾರೆ.ಇನ್ನು ಮುಂದೆ ಯಾವುದೇ ಅಧಿಕಾರಿಗಳು ಅಂಬೇಡ್ಕರ್ ಅವರ ಭಾವಚಿತ್ರದ ಹತ್ತಿರ ಚಪ್ಪಲ್ ಗಳನ್ನು ಬೂಟು ಹಾಕಿಕೊಂಡು ನಿಲ್ಲಬಾರದು ಆ ಕಾರಣಕ್ಕಾಗಿ ಇದನ್ನು ನಾನು ಅಧಿಕಾರಿಗಳ ಗಮನಕ್ಕೆ ತಂದೆ ತರುತ್ತೇನೆ ಎಂದು ಉತ್ತರಿಸಿದ್ದಾರೆ. ಕೂಡಲೇ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ರಾಮು ನಾಯಕ ಅವರ ಮೇಲೆ ಕ್ರಮ ಜರುಗಿಸಬೇಕೆಂದು ಶರಣಪ್ಪ ವಣಗೇರಿ ಒತ್ತಾಯಿಸಿದ್ದಾರೆ. ಅಧಿಕಾರಿಗಳು ಆರೋಪವನ್ನು ಕೂಲಂಕುಷವಾಗಿ ಪರಿಶೀಲಿಸಬೇಕಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!