ಅಧಿಕಾರಿಗಳ ನಾಮ್ ಕೆ ವಾಸ್ತೆ ಭೇಟಿ. ಹೋಟೆಲ್ ತೆರವಿಗೆ ಮೀನಾ ಮೇಷ ! ಸಂಚಾರಕ್ಕೆ ತೊಂದರೆ. ಸಾರ್ವಜನಿಕ ಹಿತಾಶಕ್ತಿಗೆ ಧಕ್ಕೆ

ಅಧಿಕಾರಿಗಳ ನಾಮ್ ಕೆ ವಾಸ್ತೆ ಭೇಟಿ. ಹೋಟೆಲ್ ತೆರವಿಗೆ ಮೀನಾ ಮೇಷ ! ಸಂಚಾರಕ್ಕೆ ತೊಂದರೆ. ಸಾರ್ವಜನಿಕ ಹಿತಾಶಕ್ತಿಗೆ ಧಕ್ಕೆ

ಕಾರಟಗಿ; ಶಾಲಾ ವಾಹನಗಳು ಇತರೆ ವಾಹನಗಳು ಸಂಚಾರಕ್ಕೆ ಆಗುತ್ತಿರುವ ತೊಂದರೆ ನಿವಾರಣೆ ಮಾಡಲು ರಸ್ತೆ ತಿರುವು ಆಗಲೀಕಣ ಮಾಡುವ ಬಗ್ಗೆ ಬಸವಣ್ಣ ಕ್ಯಾಂಪಿನ ಗ್ರಾಮಸ್ಥರು ತಹಸೀಲ್ದಾರರಿಗೆ ಆಗಸ್ಟ್ 04 ರಂದು ದೂರು ನೀಡಿದ್ದರು. ಮನವಿಗೆ ಸ್ಪಂದಿಸಿದ ತಹಸೀಲ್ದಾರರಾದ ಕುಮಾರಸ್ವಾಮಿ ಆಗಸ್ಟ್ 06 ರಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ಇಲಾಖೆ ಗಂಗಾವತಿ ಹಾಗೂ ನೀರಾವರಿ ನಿಗಮ ನಿಯಮಿತ 02 ಉಪ ವಿಭಾಗದ ಕಾರಟಗಿ ಕಾರ್ಯ ಪಾಲಕ ಅಭಿಯಂತರರಿಗೆ ಪತ್ರ ಬರೆದು ಕ್ರಮ ಕೈಗೊಳ್ಳಲು ತಿಳಿಸಿದ್ದರು.

ಆದರೆ ಪಿಡಬ್ಲ್ಯೂಡಿ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಬೇವಿನಹಾಳ ಗ್ರಾಮ ಲೆಕ್ಕಾಧಿಕಾರಿಗಳು ಕಂದಾಯ ನಿರೀಕ್ಷಕರು ನಾಮಕೆ ಅವಸ್ಥೆ ಭೇಟಿಕೊಟ್ಟು ಯಾವುದೇ ಕ್ರಮ ಕೈಗೊಳ್ಳದೆ ಅಂಗಡಿ ಮಾಲಕನ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಬಗ್ಗೆ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ರಸ್ತೆಯ ತಿರುವಿನಲ್ಲಿರುವ ಹೋಟೆಲ್ ನಿಂದ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಈಗಾಗಲೇ ಗ್ರಾಮಸ್ಥರು ಜಿಲ್ಲಾಧಿಕಾರಿಗಳು ದೂರು ನೀಡಿದ್ದಾರೆ. ಕೆಳ ಹಂತದ ಅಧಿಕಾರಿಗಳು ಮಸ್ಯೆಯನ್ನು ಗಂಭೀರವಾಗಿ ಪರಿಗಣಿಸೇರುವುದಿಲ್ಲ. ಆದರೆ ಅಧಿಕಾರಿಗಳು ಕೇವಲ 03 ಫೀಟ್ ಅಂಗಡಿಯ ಮುಂಭಾಗದ ಗೋಡೆಯನ್ನು ಅಂಗಡಿ ಮಾಲಕನ ಜೊತೆ ತೆರವುಗೊಳಿಸಲು ಮುಂದಾಗಿದ್ದಾರೆ. ಆದರೂ ತಿರುವಿನಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಪಿಡಬ್ಲ್ಯೂಡಿ ಮತ್ತು ನೀರಾವರಿ ಅಧಿಕಾರಿಗಳು ಕಂಡು ಕಾಣದಂತಿರುವುದು ಯಾಕೆ ಅನ್ನುವಂತ ಅನುಮಾನ ಮೂಡಿದೆ

ಬಸವಣ್ಣ ಕ್ಯಾಂಪ್ ಗ್ರಾಮದ ಪಿಡಬ್ಲೂಡಿ ಮತ್ತು ನಿರಾವರಿ ನಿಗಮ ಮತ್ತು 32 ಕಾಲುವ ರಸ್ತೆ ಸರಹದ್ದಿನಲ್ಲಿ ಬಸ್ ಸ್ಟ್ಯಾಂಡ್ ಹತ್ತಿರದ ರಾಮ ದೇವರ ಗುಡಿಯ ಮುಂಭಾಗದ ಇರುವ ಹೋಟಲ್ ಅಂಗಡಿಯಿಂದ ವಾಹನಗಳ ಓಡಾಟಕ್ಕೆ ತೊಂದರೆ ಆಗುತ್ತಿದ್ದು ಇದರಿಂದ ಸಾರ್ವಜನಿಕರಿಗೆ ಹಾಗೂ ಶಾಲಾ ವಾಹನಗಳಿಗೆ ತೊಂದರೆ ಆಗುತ್ತಿದೆ ಇದರಿಂದ ವಾಹನಗಳನ್ನು ಟರ್ನ್ (ತಿರುವು, ಮಾಡಲು ಆಗದೇ ಅಪಘಾತಗಳು ಆಗುವ ಸಂಭವ ಇದ್ದು ಸದರಿ ತಿರುವಿನಲ್ಲಿ ಇರುವ ಹೋಟಲ್‌ಗೆ ಜನರು ಬರುತ್ತಿದ್ದು ಇದರಿಂದ ಹಲವಾರು ಬಾರಿ ಅಪಘಾತವಾಗುವುದರಿಂದ ತಪ್ಪಿಸಿಕೊಂಡಿರುತ್ತಾರೆ. ಕಾರಣ ಶಾಲಾ ವಾಹನಗಳಲ್ಲಿ ಓಡಾಡುವ ಮಕ್ಕಳು ಹಾಗೂ ಸಾರ್ವಜನಿಕರು ಹಿತರಕ್ಷಣೆಯ ಸಲುವಾಗಿ ತಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಸ್ತೆಯ ತಿರುವಿನಲ್ಲಿರುವ ಒತ್ತುವರಿ ಮಾಡಿ ನಡೆಸುತ್ತಿರುವ ಹೋಟೆಲನ್ನು ಮತ್ತು ಹೋಟೆಲ್ ಗೆ ನಿರ್ಮಿಸಿದ ಸೌಚಾಲಯ ತೆರವುಗೊಳಿಸಿ ಹಾಗೂ ರಸ್ತೆಯ ತಿರುವನ್ನು ಅಗಲೀಕರಣ ಮಾಡಿಕೊಡುವಂತೆ ನಾಗರೀಕರು ನೀಡಿದ್ದರು
ಗ್ರಾಮದ ಸಾರ್ವಜನಿಕರ ಸಂಬಂಧಿಸಿದಂತೆ ಇಲಾಖೆಯ ನಿಯಮಗಳನ್ನು ಪರಿಶೀಲಿಸಿ ನಿಯಮಾನುಸಾರ ಅಗತ್ಯ ಕ್ರಮ ಜರುಗಿಸುವಂತೆ ಹಾಗೂ ತೆಗೆದುಕೊಂಡ ಕ್ರಮದ ಬಗ್ಗೆ ಇಲಾಖೆಗೆ ವರದಿ ನೀಡಲು ಕಾರಟಗಿ ತಹಸಿಲ್ದಾರರು ಸೂಚನೆ ನೀಡಿದ್ದರು. ಸುಮಾರು 20 ದಿನಗಳು ಕಳೆದರೂ ಲೋಕೋಪಯೋಗಿ ಇಲಾಖೆ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಸಾರ್ವಜನಿಕ ಹಿತಾಸಕ್ತಿಯನ್ನು ಬದಿಗೊತ್ತಿದ್ದಲ್ಲದೆ ತಹಶೀಲ್ದಾರರ ಸೂಚನೆಯನ್ನು ಧಿಕ್ಕರಿಸಿರುವುದು ಮೇಲ್ನೋಟಕ್ಕೆಕಂಡುಬಂದಿದೆ.ಆದ್ದರಿಂದ ಈ ಕೂಡಲೇ ಸಾರ್ವಜನಿಕ ಶಕ್ತಿಗೆ ಅಗತ್ಯ ಕ್ರಮ ಕೈಗೊಳ್ಳದೆ ನಿರ್ಲಕ್ಷ ವಹಿಸಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು ಮತ್ತು ಗ್ರಾಮದ ರಾಮದೇವರ ಮುಂದೆ ಇರುವ ತಿರುವಿನಲ್ಲಿ ರಸ್ತೆ ಅಗಲೀಕರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ