ಕಾರಟಗಿ

ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಪೂರ್ವಭಾವಿ ಸಭೆ ! ವಿಶೇಷ ಹಾಗೂ ಅರ್ಥ ಪೂರ್ಣ ಆಚರಣೆಗೆ ಸರ್ವಾನುಮತ

ವರದಿ ಸುಂದರರಾಜ್ BA ಕಾರಟಗಿ 

ಕಾರಟಗಿ ಸೆಪ್ಟೆಂಬರ್ 30,2025 ; ಕಾರಟಗಿ ತಾಲೂಕ ಆಡಳಿತ ವತಿಯಿಂದ ಅಕ್ಟೋಬರ್ 07 ರಂದು ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕುರಿತು ತಹಸಿಲ್ ಕಾರ್ಯಾಲಯದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಕಾರಟಗಿ ತಹಸೀಲ್ದಾರರಾದ ಕುಮಾರಸ್ವಾಮಿ ವಹಿಸಿಕೊಂಡಿದ್ದರು. ವಾಲ್ಮೀಕಿ ಜಯಂತಿಯ ಆಚರಣೆ ಕುರಿತು ಚರ್ಚಿಸಲು ವಾಲ್ಮೀಕಿ ಸಮುದಾಯದ ಎಲ್ಲಾ ಮುಖಂಡರುಗಳು ಸಂಘ ಸಂಸ್ಥೆಯ ಪದಾಧಿಕಾರಿಗಳು ಸೇರಿದಂತೆ ತಾಲೂಕ ಆಡಳಿತದ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು. 2025 ರ ಅಕ್ಟೋಬರ್ 07 ನೆಯ ತಾರೀಖಿನಂದು ತಾಲೂಕ ಆಡಳಿತ ವತಿಯಿಂದ ಸಾಂಕೇತಿಕವಾಗಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲು ನಿರ್ಧರಿಸಲಾಯಿತು.

ವಾಲ್ಮೀಕಿ ಜಯಂತಿ ವಿಶೇಷವಾಗಿ ಆಚರಿಸಲು ಸಭೆಯಲ್ಲಿರುವ ಮುಖಂಡರುಗಳಸರ್ವಾನುಮತ

ಅಕ್ಟೋಬರ್ 07 ರಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಕಚೇರಿಯಲ್ಲಿ ಸಾಂಕೇತಿಕವಾಗಿ ಆಚರಿಸಿದ ನಂತರ ವಿಶೇಷವಾಗಿಯೂ ಆಚರಿಸಲು ಸಭೆಯಲ್ಲಿನ ಮುಖಂಡರುಗಳು ತಹಸೀಲ್ದಾರರಾದ ಕುಮಾರಸ್ವಾಮಿ ಅವರಿಗೆ ವಿನಂತಿಸಿಕೊಂಡರು. ಮುಖಂಡರುಗಳ ವಿನಂತಿಗೆ ತಹಸಿಲ್ದಾರರು ಒಪ್ಪಿಗೆಯನ್ನು ಸೂಚಿಸಿದರು.
ವಾಲ್ಮೀಕಿ ಜಯಂತಿಯನ್ನು ವಿಶೇಷವಾಗಿ ಆಚರಿಸಲು ಸಭೆಯಲ್ಲಿರುವ ಮುಖಂಡರುಗಳು
ವಾಲ್ಮೀಕಿ ಕಲ್ಯಾಣ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ತಾಲೂಕ ಆಡಳಿತದ ಎಲ್ಲಾ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಿಕೆ.

ಸಮಾಜದ ಗುರುಗಳಿಗೆ ಕಾರ್ಯಕ್ರಮಕ್ಕೆ ಆಹ್ವಾನ, ಕಾರ್ಯಕ್ರಮದಲ್ಲಿ ಸ್ತಬ್ಧ ಚಿತ್ರ ಮೆರವಣಿಗೆ, ಸಂಪನ್ಮೂಲ ವ್ಯಕ್ತಿಯಿಂದ ವಿಶೇಷ ಉಪನ್ಯಾಸ ಆಯೋಜನೆ, ವಾಲ್ಮೀಕಿ ಮಹರ್ಷಿಗಳ ಭವ್ಯ ಚಿತ್ರ ಪಟಕ್ಕೆ ಹೂವಿನ ಅಲಂಕಾರದೊಂದಿಗೆ ಎಪಿಎಂಸಿ ಯಿಂದ ಕಲಾ ತಂಡಗಳಿಂದ ಮೆರವಣಿಗೆ, ಪನ್ನಾಪುರ ಕ್ರಾಸ್ ನಲ್ಲಿ ರುವ ವಾಲ್ಮೀಕಿ ಫಲಕಕ್ಕೆ ಹೂವಿನ ಹಾರ ಹಾಕಿ ಮುಖ್ಯ ರಸ್ತೆಯ ಹಳೆಯ ಬಸ್ ನಿಲ್ದಾಣ ಮೂಲಕ ಮೆರವಣಿಗೆ ಸಾಗಿಸಿ ಪದ್ಮಶ್ರೀ ಕಲ್ಯಾಣ ಮಂಟಪದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ವೇದಿಕೆ ಕಾರ್ಯಕ್ರಮ ಹಾಗೂ ಕಾರ್ಯಕ್ರಮದಲ್ಲಿ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನದೊಂದಿಗೆ ಅರ್ಥಪೂರ್ಣ ಆಚರಣೆಗೆ ವಿಂತಿಕೊಂಡರು.

 

ಮುಖಂಡರುಗಳ ವಿನಂತಿಗೆ ಸ್ಪಂದಿಸಿದ ತಹಸೀಲ್ದಾರರಾದ ಕುಮಾರಸ್ವಾಮಿ ಅವರು ಮಾತನಾಡಿ ನಿಮ್ಮೆಲ್ಲರ ಆಶೆಯಂತೆ ವಾಲ್ಮೀಕಿ ಮಹರ್ಷಿಗಳ ಜಯಂತಿ ಆಚರಣೆಗೆ ತಾಲೂಕ ಆಡಳಿತ ಬದ್ಧವಾಗಿದೆ,ಈ ಬಗ್ಗೆ ಎಲ್ಲಾ ಅಧಿಕಾರಿಗಳ ಜೊತೆ ಮತ್ತೊಮ್ಮೆ ಸಭೆಯನ್ನು ಏರ್ಪಡಿಸಲಾಗುವುದು, ಹಾಗೆ ಸಚಿವರಾದ ಶಿವರಾಜ್ ಎಸ್ ತಂಗಡಗಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಿಕೆಯ ನಿಗದಿತ ದಿನಾಂಕದಂದು ಕಾರ್ಯಕ್ರಮ ಜರುಗಿಸೋಣ ಎಂದು ಹೇಳಿದರು. ಸಭೆಯ ಎಲ್ಲಾ ಮುಖಂಡರುಗಳು ತಹಸೀಲ್ದಾರ ಮಾತಿಗೆ ಸಮ್ಮತಿ ಸೂಚಿಸಿದರು. ಈ ಸಂದರ್ಭದಲ್ಲಿ ತಾಲೂಕ ಆಡಳಿತದ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ವಾಲ್ಮೀಕಿ ಸಮುದಾಯದ ಮುಖಂಡರು ಭಾಗವಹಿಸಿದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!