ಕಾರಟಗಿತಾಲೂಕ ಸುದ್ದಿಗಳು

ಸಚಿವ ತಂಗಡಗಿ ಒತ್ತಡದಿಂದ ನನ್ನ ಮೇಲೆ ಪ್ರಕರಣ ದಾಖಲು

ವರದಿ- ಸುಂದರ್ ರಾಜ್ ಕಾರಟಗಿ

ನಾನು ದೇವದಾಸಿಯರ ಆಸ್ತಿ ಕಬಳಿಸಿಲ್ಲ ದಾಖಲೆ ಮುಂದಿಟ್ಟ ದಢೇಸೂಗೂರು, ನಮ್ಮ ಕುಟುಂಬದ ಮೇಲೆ ಕೇಸ್ ಹಾಕ್ಸಿ ಅರೆಸ್ಟ್ ಮಾಡಲು ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದೆ ಸಚಿವ ತಂಗಡಗಿ.. ದಢೇಸುಗೂರು ನೇರ ಆರೋಪ

ಕಾರಟಗಿ ; ಕನಕಗಿರಿ ಕ್ಷೇತ್ರದಲ್ಲಿ ಹಾಲಿ ಮತ್ತು ಮಾಜಿಗಳ ನಡುವೆ ವಾಕ್ಸಮರ ಆರೋಪ ಮತ್ತು ಪ್ರತ್ಯಾರೋಪಗಳ ಯುದ್ಧ ಸದ್ಯಕ್ಕೆ ನಿಲ್ಲುವ ಸೂಚನೆ ಕಾಣ್ತಾ ಇಲ್ಲ , ಇತ್ತೀಚಿಗಷ್ಟೇ ಸಚಿವ ಶಿವರಾಜ್ ತಂಗಡಗಿಯವರು ಕಾರಟಗಿ ಪುರಸಭೆಯ ಕಚೇರಿಯಲ್ಲಿ ಹಮ್ಮಿಕೊಂಡ ಸರ್ಕಾರಿ ಕಾರ್ಯಕ್ರಮದಲ್ಲಿ ನಿಯಮ ಉಲ್ಲಂಘಿಸಿ ರಾಜಕೀಯವಾಗಿ ಮಾತನಾಡಿದ್ದರು. ಮಾಜಿ ಶಾಸಕ ಬಸವರಾಜ್ ದಡೆಸುಗೂರು ಬಿಜೆಪಿಯ ಜಿಲ್ಲಾಧ್ಯಕ್ಷ ಆಗಬೇಕಾ ? ಸರಿಯಾಗಿ ಮೊದಲು ಕನ್ನಡ ಮಾತನಾಡೋಕೆ ಕಲಿಯಲಿ, ಎಂದು ವ್ಯಂಗ್ಯ ಮಾಡಿದ್ದರು. ಹಾಗೂ ದಡೆಸುಗುರು ಗ್ರಾಮದ ದೇವದಾಸಿಯರ 64 ಎಕರೆ ಭೂಮಿಯನ್ನು ಲಪಟಾಯಿಸಿದ್ದಾರೆ ಎಂದು ಆರೋಪ ಮಾಡಿದ್ದರು

 

ಈ ನಡುವೆ ಮಾಜಿ ಶಾಸಕ ದಡೇಸುಗೂರು ಅವರ ಮೇಲೆ ಜಾತಿ ನಿಂದನಾ ಪ್ರಕರಣ ದಾಖಲಾಗಿತ್ತು, ಪೋಲಿಸ್ ಇಲಾಖೆ ಅವರನ್ನು ಬಂಧಿಸಲು ಮುಂದಾಗಿತ್ತು ಅದರ ಬೆನ್ನಲ್ಲೇ ರಾಜ್ಯ ಹೈಕೋರ್ಟ್ ನಲ್ಲಿ ಜಾಮೀನು ಪಡೆದ ಮಾಜಿ ಶಾಸಕ ದಡೆಸುಗೂರು ಕಾರಟಗಿ ಪಟ್ಟಣದ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಕ್ಷೇತ್ರದ ಶಾಸಕ ಶಿವರಾಜ್ ಎಸ್ ತಂಗಡಗಿ ಅವರ ವಿರುದ್ಧ ಕೆಂಡಮಂಡಲರಾದರು ರಾಜಕೀಯ ಮಾಡಬೇಕು. ಆದರೆ ಅಧಿಕಾರ ದುರುಪಯೋಗಪಡಿಸಿಕೊಂಡು ವೈಶ್ಯಮದಿಂದ ರಾಜಕೀಯ ಮಾಡಬಾರದು. ಅಭಿವೃದ್ಧಿಗಾಗಿ ರಾಜಕೀಯ ಮಾಡಿ.ಸಚಿವರೆ ನಮ್ಮ ಕುಟುಂಬದ ಅಣ್ಣ ತಮ್ಮಂದಿರ ಜಗಳದೊಳಗೆ ನೀನು ಬೇಳೆ ಬೇಯಿಸಿಕೊಳ್ಳಲು ಬಂದಿದ್ದೀಯಾ ? ಖಾಸಗಿ ವ್ಯಕ್ತಿಗಳಿಗೆ ಹಣ ನೀಡಿ ನನ್ನ ವಿರುದ್ಧ ಎತ್ತಿ ಕಟ್ಟಿದ್ದೀಯಾ ? ಇಡೀ ನಮ್ಮ ಕುಟುಂಬದವರ ಮೇಲೆ ಪ್ರಕಣ ದಾಖಲು ಮಾಡಿಸಿದ್ದೀಯಾ ? ಮುಖ್ಯಮಂತ್ರಿಗಳ ಜೊತೆ ಗೃಹ ಇಲಾಖೆ ಮೇಲೆ ಒತ್ತಡ ಹಾಕಿಸಿ ನನ್ನನ್ನು ಬಂಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಿಯಾ ? ಅಧಿಕಾರ ಶಾಶ್ವತ ಅಲ್ಲ ಅನ್ನೋದು ನೆನಪಿನಲ್ಲಿಟ್ಟುಕೊಳ್ಳಿ ನೀನು ಕ್ಷೇತ್ರಕ್ಕೆ ಬಂದಾಗ ಎಷ್ಟು ಆಸ್ತಿ ಇತ್ತು ಬಂದ ಮೇಲೆ ಎಷ್ಟು ಕೋಟಿ ಅಕ್ರಮವಾಗಿ ಆಸ್ತಿ ಮಾಡಿದ್ದೀಯಾ ? ಪ್ರತಿಯೊಂದು ದಾಖಲೆ ನನ್ನ ಹತ್ತಿರ ಇದೆ ಸಮಯ ಎಲ್ಲರಿಗೂ ಬರುತ್ತೆ ಬಂದಾಗ ಅವುಗಳನ್ನು ಹೊರಗೆ ಇಡುತ್ತೀನಿ ಎಂದು ಸಚಿವ ಶಿವರಾಜ್ ತಂಗಡಗಿ ವಿರುದ್ಧ ಗುಡುಗಿದರು

 

ನಾನು ಯಾವುದೇ ರೀತಿಯ ದೇವದಾಸಿಯರ ಆಸ್ತಿಯನ್ನು ಕಬಳಿಸಿಲ್ಲ ನಾನು ಕಬಳಿಸಿದ್ದೆ ನಿಜವಾದರೆ ರಾಜಕೀಯ ನಿವೃತ್ತಿ ಮಾಡುತ್ತೇನೆ. ದೇವದಾಸಿಯರ ಆಸ್ತಿಗಳನ್ನು ನಾನು ಕಬಳಿಸಿದ್ದು ನೀನು ರುಜು ಮಾಡದಿದ್ದರೆ ನೀನು ರಾಜಕೀಯ ನಿವೃತ್ತಿ ಮಾಡ್ತೀಯಾ ? ಎಂದು ಸವಾಲ್ ಎಸೆದರು

 

ಸಚಿವ ತಂಗಡಗಿ ಸಾಹೇಬರು ಹೇಳೋದೆಲ್ಲ ಬರೀ ಸುಳ್ಳು ! ಯಾವುದೇ ದಾಖಲೆಗಳಿಲ್ಲದೆ ಆರೋಪ ಮಾಡುವುದು ಅವರ ಜಾಯಮಾನದಲ್ಲಿ ಬಂದುಬಿಟ್ಟಿದೆ ಆದರೆ ನಾನು ದಾಖಲೆಗಳ ಜೊತೆ ಮಾತನಾಡುತ್ತಿದ್ದೇನೆ ಸೋಮಲಾಪುರ ಹೋಬಳಿಯ ದಡೇಸೂಗುರು ಗ್ರಾಮದ ಸರ್ವೆ ನಂಬರ್ 84 ರಲ್ಲಿ ಹಿಸ್ಸಾ ಅದಲಿ ಬದಲಿಯಾಗಿದ್ದರಿಂದ ರಸ್ತೆಗೆ ಹೊಂದಿಕೊಂಡಿರುವ ಭೂಮಿಯ ಕುರಿತು ನಮ್ಮ ಎರಡು ಕುಟುಂಬಗಳ ನಡುವೆ ತಕರಾರು ಬಂದಿದೆ ಅಷ್ಟೇ ! ಆದರೆ ನಾನು ಯಾವುದೇ ದೇವದಾಸಿಯರ ಭೂಮಿಯನ್ನು ಕಬಳಿಸಿಲ್ಲ ಇದನ್ನು ತಿಳಿಯದೆ ಸಚಿವ ಸಾಹೇಬರು ಬಾಯಿಗೆ ಬಂದೆ ಅಂತೆ ಮಾತನಾಡುತ್ತಿದ್ದಾರೆ. ಅಧಿಕಾರದ ಅಹಂನಲ್ಲಿ ಇಷ್ಟ ಬಂದಂತೆ ಮಾತನಾಡುತ್ತಿದ್ದಾರೆ

 

ಬ್ರಾಹ್ಮಣರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ ಬ್ರಾಹ್ಮಣರು ಕೂಡ ಕಲ್ಲು ಹೊಡೆಯುತ್ತಿದ್ದಾರೆ ಎಂದು ಬ್ರಾಹ್ಮಣರ ಬಡತನವನ್ನು ವ್ಯಂಗ್ಯವಾಡಿದ್ದಾರೆ ಬ್ರಾಹ್ಮಣರೆಂದರೆ ವೇದಗಳನ್ನು ಪಾರಾಯಣ ಮಾಡಿ ಲೋಕ ಕಲ್ಯಾಣ ಮಾಡುವಂಥವರು ಆದರೆ ಅವರ ಬಗ್ಗೆ ಈ ರೀತಿ ಮಾತನಾಡಬಾರದು ಎಂದರು ಇನ್ನು ನಿಮಗೆ ಕನ್ನಡ ಉಚ್ಚಾರಣೆ ಸರಿಯಾಗಿ ಬರುವುದಿಲ್ಲ ಅಂತ ಸಚಿವರು ಹೇಳುತ್ತಿದ್ದಾರೆ ಎನ್ನುವ ಪತ್ರಕರ್ತರ ಮಾತಿಗೆ ಪ್ರತಿಕ್ರಿಯೆ ನೀಡಿದ ದಡೆಸೂಗುರವರು ಕನ್ನಡವನ್ನೇ ಬರೆಯೋಕೆ ಬಾರದ ಮಂತ್ರಿಯನ್ನು

ಮೀಡಿಯದಾಗ ನೀವೆಲ್ಲಾ ನೋಡ್ದೀರಿ ! ಕನ್ನಡದ ಶಬ್ದವನ್ನು ಬರೆಯಲು ಕೈ ಗಧ ! ಗಧ ! ಗಧ ! ನಡುಗುತೈತಿ. ಪಾಪ ಶಿವಾರೆಡ್ಡಿ ವಕೀಲರು ಹೇಳ್ತಾಯಿದ್ರು ಸರ್ ಹಿಂಗ ಬರೆಯಿರಿ ಅಂತಾ, ಆದ್ರೂ ತಪ್ಪು ತಪ್ಪಾಗಿ ಬರೆದಿದ್ದು ಇಡೀ ರಾಜ್ಯದ ಜನ ನೋಡಿದ್ದಾರೆ. ಹೌದು ! ನನಗೆ ಕನ್ನಡ ಮಾತಾಡೋಕೆ ಬರೋದಿಲ್ಲ ಆಗ ನನ್ನ ಬಡತನ ಹಾಗಿತ್ತು ! ಹೀಗಾಗಿ ನಾನು ಶಾಲೆ ಕಲಿತಿಲ್ಲ ನಿಜ, ನೀನು ಶಾಲೆ ಕಲಿತ ಮನುಷ್ಯ ಸರ್ಟಿಫಿಕೇಟ್ ಬೇರೆ ತಗೊಂಡಿದ್ದಿಯಾ ! ರಾಜ್ಯದ ಮಂತ್ರಿ ಬೇರೆ ನಿನಗೇನಾಗಿದೆ ಬರೆಯೋಕೆ ? ಕನ್ನಡನೇ ಬರೆಯೋಕೆ ಬರಲ್ಲ ಕನ್ನಡ ಮಂತ್ರಿ ಖಾತೆ ತಗೊಂಡಿ ! ನಿನ್ನಂಗ ಎಲ್ಲರಿಗೆ ಕಲಿಸ್ತೀ ಅಂತ ಅನುಮಾನ ಮೂಡ್ತಾ ಇದೆ ಅಂತ ವ್ಯಂಗ್ಯವಾಡಿದರು

Related Articles

Leave a Reply

Your email address will not be published. Required fields are marked *

Back to top button
error: Content is protected !!