*ಫೆ.14 ರೊಳಗೆ ಮಾರುಕಟ್ಟೆಗೆ ವ್ಯಾಪಾರಸ್ಥರ ಸ್ಥಳಾಂತರಿಸಿ*
*ಶಾಸಕ ಜನಾರ್ಧನ ರೆಡ್ಡಿ ಗಡುವು*
*ಮಾರುಕಟ್ಟೆಗೆ ರೆಡ್ಡಿ ದಿಢೀರ್ ಭೇಟಿ, ಅಧಿಕಾರಿಗಳಿಗೆ ತರಾಟೆ*
*ಗಂಗಾವತಿ* ನಗರದ ಗುಂಡಮ್ಮ ಕ್ಯಾಂಪ್ ನಲ್ಲಿರುವ ನಗರಸಭೆಯ ಮಾರುಕಟ್ಟೆ ಸ್ಥಳಕ್ಕೆ ಶಾಸಕರಾದ ಜನಾರ್ಧನ ರೆಡ್ಡಿ ಅವರು ಗುರುವಾರ ದಿಢೀರ್ ಭೇಟಿ ನೀಡಿ ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರದಲ್ಲಿ ವಿವಿಧ ರಸ್ತೆಗಳಲ್ಲಿ ತಲೆಯೆತ್ತಿರುವ ಮಾಂಸ ಹಾಗೂ ತರಕಾರಿ ಅಂಗಡಿಗಳಿಂದ ಬೀದಿ ನಾಯಿಗಳ ಉಪಟಳ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾದ ದೂರುಗಳು ಹೆಚ್ಚಿದ್ದರಿಂದ ಶಾಸಕರು ಮಾರುಕಟ್ಟೆಗೆ ಭೇಟಿ ನೀಡಿದರು.
ನಂತರ ಶಾಸಕರು ಮಾತನಾಡಿ, ಈ ಹಿಂದೆಯೇ ನಗರಸಭೆ ಅಧಿಕಾರಿಗಳ ಸಭೆ ನಡೆಸಿ ಮಾಂಸ ಹಾಗೂ ತರಕಾರಿ ಅಂಗಡಿಗಳನ್ನು ಗುಂಡಮ್ಮ ಕ್ಯಾಂಪ್ ನಲ್ಲಿರುವ ನಗರಸಭೆಯ ಮಾರುಕಟ್ಟೆಗೆ ಸ್ಥಳಾಂತರಿಸಲು ಸೂಚಿಸಿದ್ದರೂ ಏಕೆ ಕ್ರಮಕೈಗೊಂಡಿಲ್ಲ. ಕೂಡಲೇ ಮಾರುಕಟ್ಟೆಯನ್ನು ಶೀಘ್ರವೇ ದುರಸ್ತಿ ಕಾರ್ಯಕೈಗೊಂಡು ಮಾಂಸ ಹಾಗೂ ತರಕಾರಿ ಅಂಗಡಿಗಳನ್ನು ಫೆಬ್ರುವರಿ14 ರ ಒಳಗೆ ಮಾರುಕಟ್ಟೆಗೆ ಸ್ಥಳಾಂತರಿಸಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ನಗರಸಭೆ ಪೌರಾಯುಕ್ತರಿಗೆ ಗಡುವು ನೀಡಿದರು.
ರಸ್ತೆ ಅತಿಕ್ರಮಣ ಮಾಡಿ ಬೀದಿ ಬದಿ ವ್ಯಾಪಾರ ಮಾಡುವುದರಿಂದ ಸಂಚಾರಕ್ಕೆ ಸವಾರರಿಗೆ ತೊಂದರೆ ಆಗುತ್ತಿದೆ. ನಗರಸಭೆ ಅಧಿಕಾರಿಗಳು ವ್ಯಾಪಾರಸ್ಥರಿಗೆ ಈ ಬಗ್ಗೆ ಮೈಕ್ ಮೂಲಕ ವ್ಯಾಪಕ ಜಾಗೃತಿ ಮೂಡಿಸಿ ಮಾರುಕಟ್ಟೆಗೆ ಸ್ಥಳಾಂತವಾಗುವಂತೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ನಗರಠಾಣೆ ಪಿಐ ಪ್ರಕಾಶ ಮಾಳೆ ಅವರಿಗೆ ಶಾಸಕರು ಪೋನ್ ಕರೆ ಮಾಡಿ, “ಮಾರುಕಟ್ಟೆಯಲ್ಲಿ ಪುಂಡರು ಅನೈತಿಕೆ ಚಟುವಟಿಕೆ ಹಾಗೂ ಮದ್ಯಪಾನ ಮಾಡುವ ದೂರುಗಳು ಇದ್ದು, ಕೂಡಲೇ ಪೊಲೀಸರು ಕಾರ್ಯ ಪ್ರವೃತ್ತರಾಗಿ ಮಾರುಕಟ್ಟೆ ವ್ಯವಸ‍್ಥೆ ಹಾಳಾಗದಂತೆ ನೋಡಿಕೊಳ್ಳಲು’ ಶಾಸಕರು ಸೂಚಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಮೌಲಸಾಬ್, ಉಪಾಧ್ಯಕ್ಷರಾದ ಪಾರ್ವತಿ ದುರುಗೇಶ್ ದೊಡ್ಮನಿ, ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ರಮೇಶ್ ಚೌಡ್ಕಿ, ನಗರಸಭೆ ಸದಸ್ಯರಾದ ಪರಶುರಾಮ್ ಮಡ್ಡೆರ್, ಮುಸ್ತಾಕ್ ಆಲಿ, ಮುಖಂಡರಾದ ಚನ್ನವೀರಗೌಡ್ರು, ಯಮನೂರು ಚೌಡ್ಕಿ, ಚಂದ್ರು ಹೀರೂರು, ರಮೇಶ್ ಹೊಸಮಲಿ, ವೀರೇಶ್ ಬಲಕುಂದಿ, ವೀರೇಶ್ ಸೂಳಿಕಲ್, ಪಂಪಣ್ಣ ನಾಯಕ್, ದುರ್ಗಪ್ಪ ದಳಪತಿ, ಪುಂಡನಗೌಡ , ಶರಣು, ಹಾಗೂ ಇತರರು ಇದ್ದರು.