ಗಂಗಾವತಿಜಿಲ್ಲಾ ಸುದ್ದಿರಾಜ್ಯ ಸುದ್ದಿ
ಗಂಗಾವತಿ ಬಿಜೆಪಿ ನಗರ ಯುವ ಮೋರ್ಚ ಮಾಜಿ ಅಧ್ಯಕ್ಷನ ಭೀಕರ ಕೊಲೆ

ಗಂಗಾವತಿ.
ನಗರದ ಬಿಜೆಪಿ ಯುವ ಮೊರ್ಚಾ ನಗರ ಮಾಜಿ ಅಧ್ಯಕ್ಷ ಕೆ. ವೆಂಕಟೇಶ ಎಂಬ ಯುವಕನನ್ನು ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಕಳೆದ ದಿನ ಮಧ್ಯರಾತ್ರಿ ನಗರದ ರಾಯಚೂರು ರಸ್ತೆಯ ರಿಲೈನ್ಸ್ ಮಾರ್ಟ್ ಹತ್ತಿರ ಘಟನೆ ನಡೆದಿದೆ. ರಾತ್ರಿ 1.ಗಂಟೆ ಸುಮಾರಿಗೆ ಬೈಕ್ ಹೊರಟಿದ್ದ ಸಮಯದಲ್ಲಿ ಮನಾಲ್ಕೈದು ಯುವಕರ ತಂಡ ಬಂದು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೊಲೆಗೆ ಕಾರಣ ಗೊತ್ತಾಗಿಲ್ಲ. ಮತ್ತು ಕೊಲೆ ಮಾಡಿದವರು ಯಾರು ಎಂಬ ಮಾಹಿತಿ ಲಭ್ಯವಾಗಿಲ್ಲ. ವಿಷಯ ತಿಳಿಯುತ್ತಿದ್ದಂತೆ ರಾತ್ರಿ ಎಸ್.ಪಿ. ಡಾ.ರಾಮ ಅರಸಿದ್ದಿ ಗಂಗಾವತಿಯಲ್ಲೆ ಬಿಡುಬಿಟ್ಟಿದ್ದು ಕೊಲೆ ಮಾಡಿದ ದುಷ್ಕರ್ಮಿಗಳ ಪತ್ತೆಗೆ ಬಲೆ ಬಿಸಿದ್ದಾರೆ. ಘಟನೆಗೆ ಗಂಗಾವತಿ ಜನತೆ ಬೆಚ್ಚಿಬಿದ್ದಿದ್ದು, ಗಂಭಿರ ಪರಿಸ್ಥಿತಿ ನಿರ್ಮಾಣವಾಗಿದೆ.