ಮುಕುಂಪಿ ಗ್ರಾಮದ ಕೆರೆಗೆ ಬಾಗಿನ ಅರ್ಪಿಸಿದ ಶಾಸಕ ಗಾಲಿ ಜನಾರ್ದನ ರೆಡ್ಡಿ
*ಮುಕ್ಕುಂಪಿ ಗ್ರಾಮದ ಕೆರೆ ಭರ್ತಿ ಹಿನ್ನೆಲೆ ಶಾಸಕರಾದ ಗಾಲಿ ಜನಾರ್ಧನ ರೆಡ್ಡಿ ಅವರು ಗಂಗಾ ಮಾತೆಗೆ ಬಾಗಿನ ಅರ್ಪಿಸಿದರು*
ಇಂದು ಗಂಗಾವತಿಯ ಮುಕ್ಕುಂಪಿ ಗ್ರಾಮದ ಕೆರೆಯು ಭರ್ತಿಗೊಂಡಿರುವ ಹಿನ್ನೆಲೆ ಶಾಸಕರಾದ ಗಾಲಿ ಜನಾರ್ಧನ ರೆಡ್ಡಿ ಅವರು ಮೊದಲಿಗೆ ಹೇಮಗುಡ್ಡ ಗ್ರಾಮದ ಗ್ರಾಮದೇವತೆ ಶ್ರೀ ದುರ್ಗಾದೇವಿ ಹಾಗೂ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ತದನಂತರ ಮುಕ್ಕುಂಪಿ ಕೆರೆಗೆ ತೆರಳಿ ತಾಯಿ ಗಂಗಾಮಾತೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ್, ಮಾಜಿ ವಿಧಾನಪರಿಷತ್ ಸದಸ್ಯರಾದ ಎಚ್.ಆರ್. ಶ್ರೀನಾಥ್, ಹಾಗೂ ಕರಿಯಣ್ಣ ಸಂಗಟಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಲಕ್ಷ್ಮಮ್ಮ, ಜೋಗದ ಹನುಮಂತಪ್ಪ ನಾಯಕ್, ಮನೋಹರ ಗೌಡ ಹೇರೂರು, ದುರ್ಗಪ್ಪ ದಳಪತಿ, ಆನಂದ ಗೌಡ, ಯಮನೂರ್ ಚೌಡ್ಕಿ, ನೀರಲೋಟಿ ಸಿದ್ದಪ್ಪ, ಹನುಮಂತಪ್ಪ ತಳವಾರ್, ಚಂದ್ರೇಗೌಡ, ಗಾದಿಲಿಂಗಪ್ಪ, ಅಮರೇಶ್ ಕೂಕನಪಲ್ಲಿ ಬೆಣಕಲ್ ಹಾಗೂ ಮುಕ್ಕುಂಪಿ ಗ್ರಾಮದ ಪ್ರಮುಖರು, ಹಿರಿಯರು ಉಪಸ್ಥಿತರಿದ್ದರು.