
ಕಾರಟಗಿ : ಕಾರಟಗಿ ನಗರದಲ್ಲಿ ಶಾಲಾ ಅಪ್ರಾಪ್ತ ಬಾಲಕನೊಬ್ಬನಿಗೆ ಕಾರಟಗಿ ಪಟ್ಟಣದ ವ್ಯಕ್ತಿಯೋರ್ವ ಮನಸೋ ಇಚ್ಛೆ ಥಳಿಸಿ ಕಪಾಳಕ್ಕೆ ಹಿಗ್ಗಾಮುಗ್ಗ ಬಾರ್ ಮೂಡುವ ಹಾಗೆ ದೌರ್ಜನ್ಯ ಎಸಗಿದ ಘಟನೆಗೆ ಸಂಬಂಧಿಸಿದಂತೆ ಮಕ್ಕಳ ಸಹಾಯವಾಣಿ ಮತ್ತು ಮಕ್ಕಳ ರಕ್ಷಣಾ ಘಟಕದ ಅನುರಾಧ ರವರು ಕಾರಟಗಿ ಪಟ್ಟಣದ ಬಾಲಕರ ಮೆಟ್ರಿಕ್ ಪೂರ್ವ ವಸತಿ ನಿಲಯಕ್ಕೆ ಭೇಟಿ ನೀಡಿದ್ದಾರೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಹುಲುಗಪ್ಪ ಮತ್ತು ಶಿಕ್ಷಣ ಸಂಯೋಜಕರಾದ ಶಶಿಧರ ಸ್ವಾಮಿ ಹಾಗೂ ಸಿಆರ್ಪಿ ತಿಮ್ಮಣ್ಣ ನಾಯಕ್ ಇವರು ಹಾಸ್ಟೆಲ್ ಗೆ ಭೇಟಿ ನೀಡಿ ಘಟನೆಗೆ ಸಂಬಂಧಿಸಿದಂತೆ ಹಾಸ್ಟಲ್ ವಾರ್ಡನ್ ಗಂಗಪ್ಪ ಅವರಿಂದ ಮಾಹಿತಿಯನ್ನು ಪಡೆದರು.
ಹಲ್ಲೆಗೆ ಒಳಗಾದ ಬಾಲಕ 07 ನೆಯ ತರಗತಿ ವಿಧ್ಯಾಭಾಸ ಮಾಡುತ್ತಿದ್ದು ಸಂವಿಧಾನ ದಿನಾಚರಣೆ ಆಚರಣೆ ಕಾರ್ಯಕ್ರಮಕ್ಕೆ ಮಗು ಸಹಪಾಠಿಗಳೊಂದಿಗೆ ಕಾರ್ಯಕ್ರಮಕ್ಕೆ ಬರುವಾಗ ದಾರಿಯಲ್ಲಿ ಬರುವ ಕ್ಯಾದಿಗಿ ಪಾಳ್ಯ ಹತ್ತಿರದ ನಿವಾಸಿಯೊಬ್ಬ ಮಗುವಿನ ಮೇಲೆ ಹಲ್ಲೆ ಮಾಡಿದ್ದಾನೆ. ಮಗು ನೇರವಾಗಿ ಕೆಪಿಎಸ್ ಶಾಲಾ ಆವರಣಕ್ಕೆ ಬಂದಿದ್ದು ಆ ಸಂದರ್ಭದಲ್ಲಿ ಬಾಲಕ ಅಳುತ್ತಿರುವುದು ಸ್ಥಳಿಯ ಜಿ ಬಿ ನ್ಯೂಸ್ ವರದಿಗಾರ ನೋಡಿದ್ದು ಮಗುವಿನ ಹತ್ತಿರ ಹಾಸ್ಟಲ್ ಅಡುಗೆ ದಾರ ಶಿವಕುಮಾರ್ ಕೂಡ ಜೊತೆಯಲ್ಲಿ ಇದ್ದ. ಮಗು ಅಳುವುದನ್ನು ವರದಿಗಾರ ಮಾತನಾಡಿಸಿ ಘಟನೆಯ ಮಾಹಿತಿ ಪಡೆದು ಸುದ್ದಿ ಪ್ರಸಾರ ಮಾಡಲಾಗಿದೆ ಎನ್ನುವ ಮಾಹಿತಿ ಪಡೆದಿದ್ದಾರೆ.
ಅಧಿಕಾರಿಗಳು ಹಲ್ಲೆ ಮಾಡಿರುವ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮಾಹಿತಿ ನೀಡಿದ್ದು. ಹಲ್ಲೆಗೆ ಒಳಗಾದ ಬಾಲಕನಿಗೆ ಕೌನ್ಸಿಂಗ್ ನೀಡುತ್ತೇವೆ. ಬಾಲಕನ ಮೇಲೆ ದೌರ್ಜನ್ಯ ಮಾಡಿರುವ ವ್ಯಕ್ತಿಗೆ ಕಾನೂನು ರೀತ್ಯಾ ಕ್ರಮ ಜರುಗಿಸುತ್ತೇವೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಹುಲುಗಪ್ಪ ಅವರು ಹೇಳಿದ್ದಾರೆ.




