ಕಾರಟಗಿ

ನ್ಯಾಷನಲ್ ಪ್ರಾಥಮಿಕ ಹಾಗು ಗ್ರೀನ್ ವ್ಯಾಲಿ ರೂರಲ್ ಪ್ರೌಢಶಾಲೆಯಲ್ಲಿ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆ.!ಯೋಗ ವಿದ್ಯಾರ್ಥಿಗಳ ಮನಸ್ಸಿನ ಏಕಾಗ್ರತೆ ಮತ್ತು ಸಾಧನೆಗೆ ಸಹಕಾರಿಯಾಗಿದೆ…..ಎಸ್ ಕಲ್ಲಪ್ಪ

ನ್ಯಾಷನಲ್ ಪ್ರಾಥಮಿಕ ಹಾಗು ಗ್ರೀನ್ ವ್ಯಾಲಿ ರೂರಲ್ ಪ್ರೌಢಶಾಲೆಯಲ್ಲಿ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆ
ಯೋಗ ವಿದ್ಯಾರ್ಥಿಗಳ ಮನಸ್ಸಿನ ಏಕಾಗ್ರತೆ ಮತ್ತು ಸಾಧನೆಗೆ ಸಹಕಾರಿಯಾಗಿದೆ…..ಎಸ್ ಕಲ್ಲಪ್ಪ

ಕಾರಟಗಿ : ಪಟ್ಟಣದ ನ್ಯಾಷನಲ್ ಪ್ರಾಥಮಿಕ ಹಾಗು ಗ್ರೀನ್ ವ್ಯಾಲಿ ರೂರಲ್ ಪ್ರೌಢಶಾಲೆಯಲ್ಲಿ 11ನೆಯ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು ಶಾಲೆಯ ಸುಮಾರು 700 ವಿಧ್ಯಾರ್ಥಿಗಳು ಏಕ ಕಾಲದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯೋಗ ಮಾಡಿದರು
ಪತಂಜಲಿಯ ಜಿಲ್ಲಾ ಅಧ್ಯಕ್ಷರು ಸಿ ಎಚ್. ಶರಣಪ್ಪ ಮತ್ತು ಶರಣಪ್ಪ ಹುರಕಡ್ಲಿ ಯೋಗ ಸಮಿತಿ ಅವರ ಮಾರ್ಗದರ್ಶನದಲ್ಲಿ ಯೋಗ ದಿನಾಚರಣೆಯನ್ನು ಯಶಸ್ವಿಯಾಗಿ ಆಚರಿಸಲಾಯಿತು, ನ್ಯಾಷನಲ್ ಪ್ರಾಥಮಿಕ ಹಾಗು ಗ್ರೀನ್ ವ್ಯಾಲಿ ರೂರಲ್ ಪ್ರೌಢಶಾಲೆಯ ಆಡಳಿತ ಅಧಿಕಾರಿ ಎಸ್ ಕಲ್ಲಪ್ಪ ಅವರು ಮಾತನಾಡಿ ಯೋಗದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರುಯೋಗ ದೇಹ ಮತ್ತು ಮನಸ್ಸು ಸಾಧೃದವಾಗಿಡುತ್ತದೆ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಯೋಗದಿಂದ ಏಕಾಗ್ರತೆಯನ್ನು ಸಾಧಿಸಬಹುದು ಏಕಾಗ್ರತೆಯಿಂದ ಅಭ್ಯಾಸದಲ್ಲಿ ತೊಡಗಿಕೊಂಡಾಗ ಮಾತ್ರ ಹೆಚ್ಚಿನ ಅಂಕಗಳನ್ನು ಪಡೆಯಲು ಅವಕಾಶವಿರುತ್ತದೆ ಆದ್ದರಿಂದ ವಿದ್ಯಾರ್ಥಿಗಳು ಏಕಾಗ್ರತೆಯನ್ನು ಸಾಧಿಸಬೇಕಾದರೆ ಯೋಗವು ಪ್ರತಿದಿನವೂ ಮಾಡಬೇಕು ಯೋಗವು ನಿಮ್ಮ ಮನಸ್ಸು ಮತ್ತು ದೇಹವನ್ನು ಪುನರುಜ್ಜೀವನಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿದಿನ ಯೋಗ ಮಾಡುವ ಜನರು ಯೋಗದ ಅವಧಿಯ ನಂತರ ಚೈತನ್ಯವನ್ನು ಅನುಭವಿಸುತ್ತಾರೆ. ಯೋಗವು ನಿಮ್ಮ ಮನಸ್ಸನ್ನು ಸಂಪೂರ್ಣವಾಗಿ ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ.

ಸಂಸ್ಥಾಪಕ ಪತಂಜಲಿ “ಸ್ಥಿರಂ ಸುಖಂ ಆಸನಂ” ಎಂದು ಹೇಳಿದ್ದಾರೆ. ಇದರರ್ಥ ದೃಢ ಮತ್ತು ಆರಾಮದಾಯಕವಾದ ಭಂಗಿಯು ನಿಮ್ಮ ಆಸನವಾಗಿದೆ.ಇದು ಹೆಚ್ಚಿನ ಒಳಿತನ್ನು ಸಾಧಿಸಲು ನಿಮ್ಮನ್ನು ಪ್ರೋತ್ಸಾಹಿಸುವ ಒಂದು ಮಾರ್ಗವಾಗಿದೆ. ಯೋಗವು ನಿಮ್ಮ ಮನಸ್ಸು, ದೇಹ ಮತ್ತು ಆತ್ಮದ ನಡುವಿನ ಸಾಮರಸ್ಯವನ್ನು ಆದರ್ಶೀಕರಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ನಿಮ್ಮೊಳಗೆ ಎಲ್ಲವೂ ಅದ್ಭುತವಾಗಿ ಕಾರ್ಯನಿರ್ವಹಿಸುವಂತೆ ನೀವು ನಿಮ್ಮನ್ನು ಹೊಂದಿಸಿಕೊಂಡಾಗ, ನೀವು ನಿಮ್ಮ ಸಾಮರ್ಥ್ಯಗಳಲ್ಲಿ ಅತ್ಯುತ್ತಮವಾದದ್ದನ್ನು ಹೊರತೆಗೆಯುತ್ತೀರಿ ಎಂದು ವಿದ್ಯಾರ್ಥಿಗಳಿಗೆ ಯೋಗದ ಮಹತ್ವವನ್ನು ವಿವರಿಸಿದ್ದರು

ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಕೆ ರಾಮರಾವ್, ಮುಖ್ಯೋಪಾಧ್ಯಾಯರಾದ ರಂಜಿತ್ ಕುಮಾರ್, ಆಡಳಿತಾಧಿಕಾರಿಯಾದ ಎಸ್ ಕಲ್ಲಪ್ಪ ,ಎಚ್ ಓ ಡಿ ಕೆ ವಿ ಶ್ರೀನಿವಾಸ್, ಸೇರಿದಂತೆ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!