ಕೊಪ್ಪಳ ಇತಿಹಾಸದಲ್ಲಿ ಇದೇ ಮೊದಲು..ಕನಕದಾಸರ ಮೂರ್ತಿ ಭಗ್ನ ಮಾಡಿದ ದುಷ್ಕರ್ಮಿಗಳು. ತಂಬೂರಿ ಹೊತ್ತೊಯ್ದು ಮೂರ್ತಿ ವಿರೂಪಗೊಳಿಸಿ ಹಾಲುಮತ ದೇವರಿಗೆ ಅಪಮಾನ
ವರದಿ ಸುಂದರರಾಜ್ BA ಕಾರಟಗಿ

ಕೊಪ್ಪಳ ಇತಿಹಾಸದಲ್ಲಿ ಇದೇ ಮೊದಲು..ಕನಕದಾಸರ ಮೂರ್ತಿ ಭಗ್ನ ಮಾಡಿದ ದುಷ್ಕರ್ಮಿಗಳು. ತಂಬೂರಿ ಹೊತ್ತೊಯ್ದು ಮೂರ್ತಿ ವಿರೂಪಗೊಳಿಸಿ ಹಾಲುಮತ ದೇವರಿಗೆ ಅಪಮಾನ
ಕಾರಟಗಿ : ಕೊಪ್ಪಳ ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಘಾತಕಾರಿ ಘಟನೆ ನಡೆದಿದೆ ಭಕ್ತ ಶ್ರೇಷ್ಠ ಕವಿ ಶ್ರೀ ಕನಕದಾಸರ ಮೂರ್ತಿಯನ್ನು ಭಗ್ನ ಮಾಡಿ ಕನಕದಾಸರು ನುಡಿಸುವ ತಂಬೂರಿಯನ್ನು ಹೊತ್ತೊಯ್ದು ಮೂರ್ತಿಯನ್ನು ವಿರೂಪಗೊಳಿಸಿದ ಘಟನೆ ಕಾರಟಗಿ ತಾಲೂಕಿನ ಬೇವಿನ ಹಾಳ ಪಂಚಾಯತಿಯ ವ್ಯಾಪ್ತಿಯ ಬೇವಿನಹಾಳ ಗ್ರಾಮದಲ್ಲಿ ಜೂನ್ 24 ರಾತ್ರಿ (ಬೆಳಗಾದರೆ ಮಣ್ಣೆತ್ತಿನ ಅಮಾವಾಸ್ಯೆ) ಯಂದು ನಡೆದಿದೆ. ಗ್ರಾಮದ ಶ್ರೀಮತಿ ದುರ್ಗಮ್ಮ ಎನ್ನುವ ಮಹಿಳೆಗೆ ಕನಕದಾಸರ ಮೇಲೆ ಅಪಾರ ಭಕ್ತಿ,ಪ್ರತಿ ಅಮಾವಾಸ್ಯೆಗೂ ಕನಕದಾಸರ ಮೂರ್ತಿಯ ಹತ್ತಿರ ಬಂದು ಹೂವಿನ ಹೂ ಮಾಲೆ ಹಾಕಿ ದೀಪಾರಾಧನೆ ಮಾಡಿ ಕಾಯಿ ಕರ್ಪೂರ ಸಮರ್ಪಿಸಿ ಪೂಜೆ ಮಾಡಿಕೊಂಡು ಬರುವುದು ರೂಡಿಯನ್ನು ಬೆಳೆಸಿಕೊಂಡಿದ್ದರು. ಅದರಂತೆ ಜೂನ್ 25ನೇ ತಾರೀಖು ಬೆಳಗ ಮುಂಜಾನೆ 5:00 ಸುಮಾರಿಗೆ ಕನಕದಾಸರ ಮೂರ್ತಿಗೆ ಪೂಜೆ ಮಾಡಲು ಬಂದಿದ್ದರು.
ಆ ಸಂದರ್ಭದಲ್ಲಿ ಕನಕದಾಸರ ಮೂರ್ತಿ ಭಗ್ನ ವಾಗಿರುವುದು ಮತ್ತು ಮೂರ್ತಿಯ ಸಿಮೆಂಟ್ನ ತುಂಡುಗಳು ಕೆಳಗಡೆ ಬಿದ್ದಿರುವುದನ್ನು ಕಂಡಿರುತ್ತಾರೆ ಹಾಗೂ ಮೂರ್ತಿಯನ್ನು ನೋಡಿ ವಿಚಲಿತರಾಗಿದ್ದಾರೆ. ಆದರೂ ಕನಕದಾಸರ ಮೇಲಿನ ಅಪಾರ ಭಕ್ತಿ ಹೊಂದಿರುವ ದುರ್ಗಮ್ಮ ಮೂರ್ತಿಯ ಮುಂದೆ ಬಿದ್ದಿರುವ ಸಿಮೆಂಟ್ ನ ತುಂಡುಗಳನ್ನು ಸ್ವಚ್ಛ ಮಾಡಿ ಕಸಗೂಡಿಸಿ ಪೂಜೆ ಮಾಡಿ ಹೋಮಾಲೆಯನ್ನು ಹಾಕಿ ಮನೆಗೆ ಹೋಗಿರುತ್ತಾರೆ. ಬೆಳಗಾಗುತ್ತಿದ್ದಂತೆ ಕನಕದಾಸರ ಮೂರ್ತಿ ವಿರೋಪ ಗೊಂಡಿದ್ದು ಬೆಳಕಿಗೆ ಬಂದಿದೆ,
ಕನಕದಾಸರ ಮೂರ್ತಿಗೆ ಆಗಿರುವ ಅಪಮಾನ ಎಲ್ಲೆಡೆ ಹರಡಿದ್ದು ಹಾಲುಮತ ಸಮಾಜದ ಪ್ರಮುಖರುಗಳು ಘಟನೆಯನ್ನು ಖಂಡಿಸಿದ್ದಾರೆ ಅಲ್ಲದೆ ಕಾರಟಗಿ ಪೊಲೀಸ್ ಠಾಣೆಗೆ ವಿಷಯವನ್ನು ತಿಳಿಸಿದ್ದಾರೆ ಮತ್ತು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಪೊಲೀಸ್ ಇಲಾಖೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಕಾರಟಗಿ ಪೊಲೀಸ್ ಇನ್ಸ್ಪೆಕ್ಟರ್ ಸುಧೀರ್ ಬೆಂಕಿಯವರು ಹಾಗೂ ಎ ಎಸ್ ಐ ಬೋರಣ್ಣ ಇವರು ಪರಿಶೀಲನೆ ಮಾಡಿದರು ಹಾಗೂ ಆರೋಪಿಗಳನ್ನು ಆದಷ್ಟು ಬೇಗ ಪತ್ತೆ ಹಚ್ಚಿ ಬಂಧಿಸುವ ಭರವಸೆಯನ್ನು ನೀಡಿದ್ದಾರೆ. ಕೊಪ್ಪಳ ಜಿಲ್ಲೆ ಇತಿಹಾಸದಲ್ಲಿ ಇದೇ ಮೊದಲಾಗಿದ್ದು ಭಕ್ತ ಶ್ರೇಷ್ಠ ಕನಕದಾಸರ ಮೂರ್ತಿ ವಿರೂಪ ಗೊಂಡಿರುವ ಘಟನೆ ಇದೀಗ ಜಿಲ್ಲಾದ್ಯಾಂತ ಹಾಲುಮತ ಸಮಾಜದವರ ಕೆಂಗಣ್ಣಿಗೆ ಗುರಿಯಾಗಿದೆ, ಘಟನೆ ಸ್ಥಳಕ್ಕೆ ಬೇವಿನ ಹಾಳ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಪ್ರಕಾಶ್ ಹಿರೇಮಠ್ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಪ್ರಕಾಶ್ ಹಿರೇಮಠ್ ಮತ್ತು ಅಧ್ಯಕ್ಷರ ಪತಿಯವರಾದ ಭೀಮಣ್ಣ ಇವರು ಹಾಗೂ ತಾಲೂಕ ಪಂಚಾಯಿತಿಯ ಸಹಾಯಕ ನಿರ್ದೇಶಕರಾದ ಶ್ರೀಮತಿ ವನಜಾಕ್ಷಿ ಇವರು ಭೇಟಿ ನೀಡಿದ್ದಾರೆ.
