ಅಧಿಕ ಶಾಲಾ ಶುಲ್ಕ ವಸೂಲಿ ವಿದ್ಯಾ ಸಂಸ್ಥೆಗಳಿಗೆ ಖಡಕ್ ಎಚ್ಚರಿಕೆ, ನಿಯಮ ಉಲ್ಲಂಘಿಸುವ ಶಾಲೆಗಳ ಮಾನ್ಯತೆ ಮುಲಾಜಿ ಇಲ್ಲದೆ ರದ್ದುಗೊಳಿಸುತ್ತೇವೆ….. ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ್
ವರದಿ ಸುಂದರರಾಜ್ B A ಕಾರಟಗಿ

ಖಾಸಗಿ ವಿದ್ಯಾ ಸಂಸ್ಥೆಗಳಿಗೆ ಖಡಕ್ ಎಚ್ಚರಿಕೆ, ನಿಯಮ ಉಲ್ಲಂಘಿಸುವ ಶಾಲೆಗಳ ಮಾನ್ಯತೆ ಮುಲಾಜಿ ಇಲ್ಲದೆ ರದ್ದುಗೊಳಿಸುತ್ತೇವೆ….. ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ್
ಕಾರಟಗಿ : ಶಿಕ್ಷಣ ಇಲಾಖೆಯಿಂದ ಸೋಮವಾರ ಪಟ್ಟಣದ ನ್ಯಾಷನಲ್ ಸ್ಕೂಲ್ ನಲ್ಲಿ 2025/26 ನೇ ಸಾಲಿನ ಅನುದಾನ ರಹಿತ ಶಾಲೆಗಳ ಶೈಕ್ಷಣಿಕ ಪ್ರಗತಿ ಪರಿಶೀಲನ ಕಾರ್ಯಕ್ರಮಗಳ ಕುರಿತು ಅನುದಾನ ರಹಿತ ಶಾಲಾ ಮುಖ್ಯೋಪಾಧ್ಯಾಯರ ಸಭೆ ಜರುಗಿತು. ಕಾರ್ಯಕ್ರಮದಲ್ಲಿ ಕಾರಟಗಿ ತಾಲೂಕ ವ್ಯಾಪ್ತಿಯ ಅನುದಾನ ರಹಿತ ಖಾಸಗಿ ಶಾಲೆಗಳ ಮುಖ್ಯೋಪಾಧ್ಯಾಯರು ಪಾಲ್ಗೊಂಡಿದ್ದರು. ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಟೇಶ್ ಇವರು ಮಾತನಾಡಿ ತಾಲೂಕ ವ್ಯಾಪ್ತಿಯ ಖಾಸಗಿ ವಿದ್ಯಾಸಂಸ್ಥೆಗಳು 2025 ಮತ್ತು 26 ನೇ ಸಾಲಿನ ಮಾನ್ಯತಾ ನವೀಕರಣ ಮಾಡಿಸಿಕೊಳ್ಳಬೇಕು.
ಖಾಸಗಿ ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಗಳ ನೋಂದಣಿಯನ್ನು SATS ನಲ್ಲಿ ಖಡ್ಡಾಯವಾಗಿ ಅಪ್ಲೋಡ್ ಮಾಡಬೇಕು ಹಾಗೂ ವಿದ್ಯಾರ್ಥಿಗಳಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡಬಾರದು. ಪ್ರತಿಯೊಂದು ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಂದ ಮಾಡುವ ಶುಲ್ಕದ ಮಾಹಿತಿಯ ಫಲಕ ಪ್ರದರ್ಶಿಸಬೇಕು, ಖಾಸಗಿ ವಿದ್ಯಾಸಂಸ್ಥೆಗಳಿಗೆ ಪ್ರವೇಶ ಪಡೆಯಲಿಚ್ಚಿಸುವ ವಿದ್ಯಾರ್ಥಿಗಳ ಪಾಲಕರ ಆರ್ಥಿಕ ಹಿನ್ನಲೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಖಾಸಗಿ ವಿದ್ಯಾಸಂಸ್ಥೆಗಳಿಗೆ ಕೇವಲ ಹಣ ಗಳಿಕೆ ಮಾತ್ರ ಗುರಿಯಾಗಿರಿಸಿಕೊಳ್ಳಬಾರದು. ವಿದ್ಯಾಸಂಸ್ಥೆಗಳು ಅಗತ್ಯ ಸೌಲಭ್ಯಗಳು ನೀಡುವ ಮಾತ್ರಕ್ಕೆ ಸಂಸ್ಥೆಯ ಪ್ರತಿಶತ ಉತ್ತಮ ಫಲಿತಾಂಶ ಬರಲು ಸಾಧ್ಯವಿಲ್ಲ ಸೌಲಭ್ಯಗಳ ಜೊತೆಗೆ ಗುಣಮಟ್ಟ ಶಿಕ್ಷಣ ಸಿಗುವಂತಾಗಬೇಕು ಆನಿಟ್ಟಿನಲ್ಲಿ ಖಾಸಗಿ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಸುಧಾರಣೆಗೆ ಬೇಕಾಗಿರುವ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ವಿದ್ಯಾರ್ಥಿಗಳ ಅನುತ್ತೀರ್ಣದ ಬಗ್ಗೆ ವಿದ್ಯಾಸಂಸ್ಥೆಗಳೇ ನೇರಹೂಣೆ, ಶುಲ್ಕ ,ಪಠ್ಯಪುಸ್ತಕ, ಮತ್ತು ಸಮವಸ್ತ್ರದ ಹೆಸರಲ್ಲಿ ಪಾಲಕರ ಮೇಲೆ ಒತ್ತಡ ಹೇರುವುದು ಕಾನೂನು ರೀತಿಯ ಶಿಕ್ಷಾರ್ಹ ಅಪರಾಧವಾಗಿದೆ, ಒಂದುವೇಳೆ ಖಾಸಗಿ ವಿದ್ಯಾ ಸಂಸ್ಥೆಗಳು ನಿಯಮಾವಳಿಗಳ ವಿರುದ್ಧ ನಡೆದುಕೊಂಡರೆ ಅಂಥಹ ಶಾಲೆಗಳ ಮಾನ್ಯತೆಯನ್ನು ರದ್ದು ಗೊಳಿಸುತ್ತೇವೆ ಎಂದರು
ನಂತರ ಶಿಕ್ಷಣ ಸಂಯೋಜಕರಾದ ರಾಘವೇಂದ್ರ ಇವರು ಮಾತನಾಡಿ ಪ್ರಸ್ತುತ ಸಾಲಿನಲ್ಲಿ ಎಲ್ಲಾ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಕುರಿತಾಗಿ ತಮ್ಮ ಶಾಲಾ ಹಂತದಲ್ಲಿ ಮಕ್ಕಳ ಕಲಿಕೆ ಆಧರಿಸಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿಕೊಂಡು ಎಲ್ಲಾ ಶಿಕ್ಷಕರು ಮತ್ತು ಮುಖ್ಯ ಗುರುಗಳು, ಅನು ಪಾಲಿಸಬೇಕು ಎಂದರು ಅದೇ ರೀತಿ ಇಲಾಖೆಯಿಂದ ನೀಡುವ ಸುತ್ತೋಲೆಗಳ ಅನುಸಾರ ಶೈಕ್ಷಣಿಕ ಚಟುವಟಿಕೆಗಳ ಆಯೋಜನೆಗೆ ಕ್ರಮ ಕೈಗೊಳ್ಳಲು ಮಾಹಿತಿ ನೀಡಿದರು. ಎಸ್ ಎಸ್ ಎಲ್ ಸಿ ಫಲಿತಾಂಶ ಉತ್ತಮ ಪಡಿಸುವ ನಿಟ್ಟಿನಲ್ಲಿ ತಾಲೂಕ ಹಂತದಲ್ಲಿ ಅನುದಾನ ರಹಿತ ಶಾಲಾ ವಿಷಯವಾರು ಶಿಕ್ಷಕರಿಗೆ ಕಾರ್ಯಗಾರಗಳನ್ನು ಹಮ್ಮಿಕೊಂಡು ಪುನಶ್ಚೇತನ ಗೊಳಿಸುವ ಯೋಜನೆಯನ್ನು ಇಲಾಖೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಇಲಾಖೆಯ ಗೌರವಾನ್ವಿತ ಶಿಕ್ಷಣ ಸಂಯೋಜಕರಾದ ರಾಘವೇಂದ್ರ, ಕಚೇರಿಯ ವಿಷಯ ನಿರ್ವಾಹರಾದ ಶ್ರೀ ವಿನಾಯಕ, ಸಿ ಆರ್ ಪಿ ಗಳಾದ ತಿಮ್ಮಣ್ಣ ನಾಯಕ್ ಮಂಜುನಾಥ ಚಿಕ್ಕೇನಕೊಪ್ಪ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳಾದ ನ್ಯಾಷನಲ್ ಪಬ್ಲಿಕ್ ಶಾಲೆ, ಶರಣಬಸವೇಶ್ವರ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆ ಕಾರಟಗಿ ಹಾಗೂ ಯರಡೋಣ, ಶಾಂತಿನಿಕೇತನ, ಎಕ್ಸಲೆಂಟ್, ಚಾಲೆಂಜಿಂಗ್, ಏಕಲವ್ಯ ಗುರುಕುಲ, ವಿಜ್ಞಾನ ಜ್ಯೋತಿ, ಸೆಂಟ್ರಲ್ ಪಬ್ಲಿಕ್ ಸ್ಕೂಲ್, ರಾಜಾರಾಮಣ್ಣ ಪೂ. ಕಿ ಪ್ರಾ ಶಾಲೆ,ಸವೋದಯ ಹಿ. ಪ್ರಾ. ಶಾಲೆ, ಜ್ಞಾನಜ್ಯೋತಿ ಎಲ್‌ಪಿಎಸ್ ಉಳೇನೂರ್, ಸ್ವಾಮಿ ವಿವೇಕಾನಂದ ಯರಡೋಣ ಕ್ಯಾಂಪ್,ಎಮ್ ವೈ ಎಸ್ ಎನ್, ಅಪ್ಪಾರಾವ್ ಮೆಮೋರಿಯಲ್ ಸ್ಕೂಲ್, ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್, ಅಕ್ಷರಧಾಮ ಪ,ಪ್ರ ಶಾಲೆ ಹಾಲ ಸಮುದ್ರ, ಪ್ರತಿಭಾ ಶಾಲೆ, ಮಾನಸ ಫ್ರೀ ಎಲ್ ಪಿ ಎಸ್ ನಾಗನಕಲ್, ಉಣ್ಣಿ ಬಸವೇಶ್ವರ ಪ್ರಾಥಮಿಕ ಶಾಲೆ ಬಸವಣ್ಣ ಕ್ಯಾಂಪ್, ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್,ಎಸ್ ಡಿ ಎಮ್ ಪಬ್ಲಿಕ್ ಸ್ಕೂಲ್,ಗ್ಲೋಬಲ್ ಸ್ಕೂಲ್ ಗಳು ಭಾಗವಹಿಸಿದ್ದವು