ಕಾರಟಗಿ

ಕಾರಟಗಿಯಲ್ಲೊಂದು  ಅಮಾನವೀಯ ಘಟನೆ ! ಮನಸೋ ಇಚ್ಛೆ ಥಳಿಸಿ ಅಪ್ರಾಪ್ತ ಮಗುವಿನ ಮೇಲೆ ದೌರ್ಜನ್ಯ

ಕಾರಟಗಿ : ಕಾರಟಗಿ ನಗರದಲ್ಲಿ ಶಾಲಾ ಅಪ್ರಾಪ್ತ ಬಾಲಕನೊಬ್ಬನಿಗೆ ವ್ಯಕ್ತಿಯೋರ್ವ ಮನಸೋ ಇಚ್ಛೆ ಥಳಿಸಿದ ಘಟನೆ ನಡೆದಿದೆ. ಕಳ್ಳತನದ ಆರೋಪ ಹೊರಿಸಿ ಬಾಲಕನನ್ನು ಕಪಾಳಕ್ಕೆ ಹಿಗ್ಗಾಮುಗ್ಗ ಥಲಿಸಿ ಬಾರ್ ಮೂಡುವ ಹಾಗೆ ದೌರ್ಜನ್ಯ ಎಸಗಿದ್ದು ಮಗು ಅಳುತ್ತಾ ಭಯದಿಂದಕೆ ಪಿ ಎಸ್ ಆವರಣಕ್ಕೆ ಓಡೋಡಿ ಬಂದಿದ್ದಾನೆ. ಆದರೂ ಬೆನ್ನು ಬಿಡದ ಆ ವ್ಯಕ್ತಿ ಕೆಪಿಎಸ್ ಶಾಲಾ ಆವರಣದಲ್ಲಿ ಬಂದು ಆ ಮಗುವಿಗೆ ಹೆದರಿಸಿದ್ದಾನೆ. ಕೆಪಿಎಸ್ ಶಾಲಾ ಆವರಣದೊಳಗೆ ಸಂವಿಧಾನ ದಿನಾಚರಣೆಯ ಕಾರ್ಯಕ್ರಮ ಮುಗಿದಿತ್ತು. ಎಲ್ಲರೂ ಉಪಹಾರ ಸೇವಿಸುತ್ತಿದ್ದರು. ಆ ಸಂದರ್ಭದಲ್ಲಿ ದೌರ್ಜನ್ಯಕ್ಕೆ ಒಳಗಾದ ಮಗು ಅಧಿಕಾರಿಗಳ ಹತ್ತಿರ ಬಂದಿರುತ್ತಾನೆ. ಅಧಿಕಾರಿಗಳು ಆ ಮಗು ಅಳುವುದನ್ನು ಕಂಡು ಯಾಕೆ ಅಳುತ್ತೀರುವೆ ಎಂದು ಕೇಳಿದ್ದಾರೆ. ಮಗು ಥಳಿಸಿದ ವ್ಯಕ್ತಿಯನ್ನು ತೋರಿಸಿ ಈ ವ್ಯಕ್ತಿ ವಿನಾಕಾರಣ ನನ್ನ ಮೇಲೆ ಹಲ್ಲೆ ಮಾಡಿ ನನಗೆ ಬಡಿಯುತ್ತಿದ್ದಾನೆ ಎಂದು ಅಳುತ್ತಾ ಹೇಳಿದೆ. ಆಗ ಥಳಿಸಿದ ವ್ಯಕ್ತಿ ಈ ಮಗು ನಮ್ಮ ಮನೆ ಹತ್ತಿರ ಕಬ್ಬಿಣದ ರಾಡ್ ಕಳುವು ಮಾಡಿ ಓಡಿ ಬಂದಿದ್ದಾನೆ ಎಂದು ಹೇಳಿದ್ದಾನೆ ಇದಕ್ಕೆ ಪ್ರತಿಕ್ರಿಸಿದ ಅಧಿಕಾರಿಗಳು ಮಗುವಿನ ಮೇಲೆ ಹಲ್ಲೆ ಮಾಡಿದ್ದು ತಪ್ಪು ಎಂದಿದ್ದಾರೆ ಕಾನೂನು ಸಂಘರ್ಷಕ್ಕೆ ಒಳಗಾದ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ಮಾಡಿರುವುದು ಕಾನೂನುಬಾಹಿರ ಎಂದು ಹೇಳಿದಾಗ ಆ ವ್ಯಕ್ತಿ ಪಟ್ಟಣದ ಆಸ್ಪತ್ರೆ ಯೊಂದರಲ್ಲಿ ಚಿಕಿತ್ಸೆ ನೀಡಲು ಕರೆದುಕೊಂಡು ಹೋಗಿದ್ದಾನೆ.

ಕರ್ನಾಟಕ ರಾಜ್ಯ ಮಕ್ಕಳ ಸುರಕ್ಷತಾ ನೀತಿ 2016 ರ ಪ್ರಕಾರ ಮಕ್ಕಳ ರಕ್ಷಣೆ ಮತ್ತು ಮಕ್ಕಳ ಮೇಲೆ ದೌರ್ಜನ್ಯದಂತಹ ಘಟನೆಗಳು ನಡೆಯದಂತೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಮಕ್ಕಳ ರಕ್ಷಣಾ ಆಯೋಗ ಆದೇಶದ ಸುತ್ತೋಲೆಗಳನ್ನು ಹೊರಡಿಸಿರುತ್ತದೆ. ಆದರೂ ರಾಜ್ಯದ್ಯಂತ ಮಕ್ಕಳ ಮೇಲೆ ಹಲ್ಲೆಗಳು ನಡೆಯುತ್ತಿರುವ ಬಗ್ಗೆ ವರದಿಯಾಗುತ್ತಲೇ ಇವೆ. ಹಾಗೂ ಹಲ್ಲೆಗಳನ್ನು ನಡೆಸಿದವರ ವಿರುದ್ಧ ಕಠಿಣ ಕ್ರಮಗಳು ಕೂಡ ಜರಗಿಸಲಾಗುತ್ತಿದೆ, ಆದಾಗ್ಯೂ ಕಾರಟಗಿ ನಗರದಲ್ಲಿ ಅಪ್ರಾಪ್ತ ಬಾಲಕನ ಮೇಲೆ ನಡೆದಿರುವ ಹಲ್ಲೆ ಖಂಡನಾರ್ಹ, ಕೂಡಲೆ ಮಕ್ಕಳ ರಕ್ಷಣಾ ಇಲಾಖೆ ಹಲ್ಲೆಗೊಳಗಾದ ಮಗುವಿಗೆ ಆತ್ಮಸ್ಥೈರ್ಯ ನೀಡಿ ಆ ಮಗು ಮಾನಸಿಕವಾಗಿ ಕುಗ್ಗಿ ಹೋಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ ಮತ್ತು ಹಲ್ಲೆ ಮಾಡಿದ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸಬೇಕಾಗಿದೆ

Related Articles

Leave a Reply

Your email address will not be published. Required fields are marked *

Back to top button
error: Content is protected !!