ಕಾರಟಗಿ ಪಟ್ಟಣದಲ್ಲಿ ಅಪಘಾತಗಳು ನಡೆಯದಂತೆ ಸುಗಮ ಸಂಚಾರ ವ್ಯವಸ್ಥೆಗೆ ಆಗ್ರಹಿಸಿದ ಜಾಗೃತಿ ಯುವಕ ಸಂಘ

ಕಾರಟಗಿ ಪಟ್ಟಣದಲ್ಲಿ ಅಪಘಾತಗಳು ನಡೆಯದಂತೆ ಸುಗಮ ಸಂಚಾರ ವ್ಯವಸ್ಥೆಗೆ ಆಗ್ರಹಿಸಿದ ಜಾಗೃತಿ ಯುವಕ ಸಂಘ
ಕಾರಟಗಿ ; ಪಟ್ಟಣದಲ್ಲಿ ವಾಹನದಟ್ಟ ಸಂಚಾರದಿಂದಾಗಿ ಪಾದಾಚಾರಿಗಳು ವಾಹನ ಸವಾರರು ನಿತ್ಯವು ಕಿರುಕುಳ ಅನುಭವಿಸುತ್ತಿದ್ದಾರೆ ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸಿದೆ ಇರುವುದರಿಂದ ಒಂದಲ್ಲ ಒಂದು ಅವಘಡಗಳು ಸಂಭವಿಸುತ್ತಿವೆ, ಸಂಚಾರ ವ್ಯವಸ್ಥೆಯನ್ನು ಸುಗಮ ಮತ್ತು ಸವಾರರ ಸುರಕ್ಷತೆಯನ್ನು ಪುರಸಭೆ ಇಲಾಖೆ ನಿರ್ಲಕ್ಷ ವಹಿಸುತ್ತಿದೆ ಮತ್ತು ಸಾರ್ವಜನಿಕರ ಹಿತಾಸಕ್ತಿಯನ್ನು ಗಾಳಿಗೆ ತೂರಿವೆ
ಪೋಲಿಸ್ ಇಲಾಖೆ ಮತ್ತು ಪುರಸಭೆ ಇಲಾಖೆಗಳು ಜಂಟಿಯಾಗಿ ಪಟ್ಟಣದ ಸಾರ್ವಜನಿಕರ ಹಿತರಕ್ಷಣೆಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಾಗೃತಿ ಯುವಕ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ
ಇತ್ತೀಚಿಗಷ್ಟೇ ಪಟ್ಟಣದ ಗಂಗಾವತಿ ಸಿಂಧನೂರು ಮುಖ್ಯ ರಸ್ತೆಯ ಸಾಲೋನಿಯ ಕ್ರಾಸ್ ಹತ್ತಿರ ಸೈಕಲ್ ಸವಾರಿ ಮಾಡುತ್ತಿದ್ದ ಬಾಲಕ ಮೌನೇಶ್ ಲಾರಿ ಅಪಘಾತದಿಂದ ಮೃತ ಪಟ್ಟಿದ್ದು ರಸ್ತೆ ಸುರಕ್ಷಾ ನಿಯಮಗಳು ಪಾಲಿಸದೆ ಚಾಲಕನ ನಿರ್ಲಕ್ಷದಿಂದಾಗಿ ಸಂಭವಿಸಿದೆ ಈ ಘಟನೆಯಿಂದ ಎಚ್ಚೆತ್ತುಕೊಂಡ ಕಾರಟಗಿ ಜಾಗೃತಿ ಯುವಕ ಸಂಘ ಈ ರೀತಿಯ ಘಟನೆಗಳು ನಗರದಲ್ಲಿ ಪಟ್ಟಣದಲ್ಲಿ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳನ್ನು ಒತ್ತಾಯಿಸಿದೆ
ಸಾರ್ವಜನಿಕರ ಹಿತದೃಷ್ಟಿಯಿಂದ ಒತ್ತಾಯಿಸಿರುವ ಹಕ್ಕೊತ್ತಾಯಗಳು; ಪಟ್ಟಣದಲ್ಲಿ ಅಪ್ರಾಪ್ತ ಮಕ್ಕಳು ವಾಹನ ಚಾಲನೆ ಮಾಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನಗರದ ಹಳೆಬಸ್‌ನಿಲ್ದಾಣದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂದೆ ದ್ವಿಚಕ್ರವಾಹನಗಳನ್ನು ಪಾರ್ಕಿಂಗ್ ಮಾಡಲು ಕ್ರಮಕೈಗೊಳ್ಳಬೇಕು.
ನವಲಿ ವೃತ್ತದಲ್ಲಿ ಹಾಗೂ ಆರ್.ಜಿ. ರಸ್ತೆಯಲ್ಲಿ ನಿಲ್ಲಿಸುತ್ತಿರುವ ದ್ವಿಚಕ್ರ ಹಾಗೂ ನಾಲ್ಕುಚಕ್ರ ವಾಹನಗಳನ್ನು ಹಳೆ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಿಲುಗಡೆ ಕಲ್ಪಿಸಬೇಕು.
ರಸ್ತೆ ಮೆಲೆ ನಿಲ್ಲಿಸಲಾಗುವ ವಾಹನಗಳಿಗೆ ಹೆಚ್ಚಿನ ಪ್ರಮಾಣದ ದಂಡ ಸ್ಥಳದಲ್ಲಿಯೇ ವಿಧಿಸಬೇಕು.
ದ್ವಿಚಕ್ರ ವಾಹನದಲ್ಲಿ 3-4 ಜನ ಪ್ರಮಾಣಿಸುವದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು.
A.P.M.Cಯಿಂದ ಪೋಲಿಸ್ ಸ್ಟೇಷನ್‌ವರೆಗೆ ಕೆರೆಬಸವೇಶ್ವರ ದೇವಸ್ಥಾನದಿಂದ ಚಿನಿವಾಲ ಕಾಂಪ್ಲೆಕ್ಸ್ ಬೂದುಗುಂಪಾ ರಸ್ತೆವರೆಗೆ ವಾಹನಗಳ ವೇಗದ ಮಿತಿಯನ್ನು ಕೆವಲ 20-30 ಕಿಲೊ.ಮಿಗೆ ನಿರ್ಬಂಧಿಸಬೇಕು.
ಆರ್.ಜಿ. ರಸ್ತೆ, ನವಲಿ ರಸ್ತೆ, A.P.M.C ಹತ್ತಿರ ಪುರಸಭೆ ಹತ್ತಿರ ಹೊಸಬಸ್‌ನಿಲ್ದಾಣ, ಮುಂತಾದ ಕಡೆ ಸಿಸಿ ಕ್ಯಾಮರಾ ಅಳವಡಿಸಬೇಕು.
ದ್ವಿಚಕ್ರವಾಹನಗಳು ಕರ್ಕಶ ಶಬ್ದ ಮಾಡುವ ವಾಹನಗಳನ್ನು ಸೀಜ್ ಮಾಡಬೇಕು.ಕಾರಟಗಿಯ ಪ್ರವೇಶದಿಂದ ಸಿದ್ದಲಿಂಗ ನಗರದವರೆಗೆ ರಸ್ತೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳಬೇಕು..
ಇಲ್ಲವಾದಲ್ಲಿ ಕಾರಟಗಿ ವಿವಿಧ ಸಂಘಟನೆಗಳೊಂದಿಗೆ ಮುಂದಿನ ದಿನಗಳಲ್ಲಿ ತೀವ್ರ ಹೊರಾಟ ರೂಪಿಸಬೇಕಾಗುತ್ತದೆ ಎಂದು ಇಲಾಖೆಗಳಿಗೆ ಒತ್ತಾಯಿಸಿದ್ದಾರೆ
ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ, ಮುಖ್ಯಾಧಿಕಾರಿ ಸುರೇಶ್ ಹಾಗೂ ಪಿಎಸ್ಐ ಕಾಮಣ್ಣ ನಾಯ್ಕ ಸೇರಿದಂತೆ ಪುರಸಭೆ ಉಪಾಧ್ಯಕ್ಷೆ ದೇವಮ್ಮ ಗಂಗಪ್ಪ, ಸೇರಿದಂತೆ
ಜಾಗೃತಿ ಯುವಕ ಸಂಘದ ಗೌರವಾಧ್ಯಕ್ಷ ಶರಣಪ್ಪ ಕೋಟ್ಯಾಳ, ಮಾಜಿ ಅಧ್ಯಕ್ಷರಾದ ತಾಯಪ್ಪ ಕೋಟ್ಯಾಳ, ಪ್ರಹ್ಲಾದ್ ಜೋಷಿ, ಉಪಾಧ್ಯಕ್ಷ ಅಯ್ಯಪ್ಪ ಉಪ್ಪಾರ, ಸದಸ್ಯ ಶರಣಪ್ಪ ಕುಂಬಾರ, ದಲಾಲಿ ವರ್ತಕರ ಸಂಘದ ಅಧ್ಯಕ್ಷ ಬಸವರಾಜ ಪಗಡದಿನ್ನಿ, ರೈತ ಮುಖಂಡ ನಾರಾಯಣ ಈಡಿಗೇರ್, ಯುವ ಮುಖಂಡ ಪ್ರಭುರಾಜ ಬೂದಿ, ಪ್ರಧಾನ ಕಾರ್ಯದಶರ್ಿ ಶರಣಪ್ಪ ಕಾಯಿಗಡ್ಡಿ, ಪದಾಧಿಕಾರಿಗಳಾದ ರುದ್ರೇಶ ಮಂಗಳೂರು, ಯಮನಪ್ಪ ಮೂಲಿಮನಿ, ಅನಿಲ್ ಪಾಟೀಲ್, ಹುಚ್ಚಪ್ಪ ಕುರಿ, ಶರಣಯ್ಯಸ್ವಾಮಿ ಖಾನಾವಳಿ, ಅಮರೇಶಗೌಡ ಮಾನ್ವಿ, ವೀರನಗೌಡ ಮಾಲಿ ಪಾಟೀಲ್, ಶಂಕ್ರಪ್ಪ ಸುರಪುರ, ರಮೇಶ ಕೋಟ್ಯಾಳ, ಸಿದ್ದು ವಳಕಲದಿನ್ನಿ, ಶರಣು ಸಾ ನಗಾರಿ, ಆನಂದ ಕುಲಕಣರ್ಿ, ಹೆಚ್. ಮಂಜುನಾಥಗೌಡ, ಬಸವರಾಜ ಬಿಜಕಲ್, ಆನಂದ ಹೊಳಗುಂದಿ, ಶರಣಪ್ಪ ಬೆನಕನಾಳ, ಮಹಿಬೂಬ್ ಹಂಚಿ ಇನ್ನಿತರರು ಇದ್ದರು.