ಭೂ ಮಾಫಿಯಾ ಕ್ರಿಮಿಗಳ ನಿದ್ದೆ ಗೆಡಿಸಿದ ತಹಸೀಲ್ದಾರ್ ಕುಮಾರಸ್ವಾಮಿಯವರ ತೇಜೋವಧೆಗೆ ಹುನ್ನಾರ ?

ವರದಿ ಸುಂದರರಾಜ್ BA ಕಾರಟಗಿ
ಕಾರಟಗಿ : ಕಾರಟಗಿ ತಹಸೀಲ್ದಾರಾದ ಕುಮಾರಸ್ವಾಮಿ ಅವರು ಆಂಗ್ಲರ ಕುರಿತು ಹೊಗಳಿಕೆ ಮಾತುಗಳನ್ನಾಡಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇದರ ಹಿಂದೆ ಕಾಣದ ಕೈಗಳು ತಹಸೀಲ್ದಾರರ ತೇಜೋವಧೆಯ ಹುನ್ನಾರ ನಡೆಸಿವೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ತಾಹಸಿಲ್ದಾರರ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಪೋಸ್ಟ್ ಗಳ ಬಗ್ಗೆ ವಾಸ್ತವಾಂಶವನ್ನು ತಿಳಿದುಕೊಳ್ಳಲು ಜಿಬಿ ನ್ಯೂಸ್ ಕನ್ನಡ ಸೆಪ್ಟಂಬರ್ 17ರಂದು ನಡೆದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಪಾಲ್ಗೊಂಡ ಕೆಲವು ವ್ಯಕ್ತಿಗಳ ಜೊತೆ ಚರ್ಚಿಸಲಾಯಿತು, ತಹಶಿಲ್ದಾರರು ವಾಸ್ತವವಾಗಿ ಆಂಗ್ಲರನ್ನು ಹಾಡಿ ಹೊಗಳಿದ್ದಾರೆಯೇ ? ಎಂದು ಕೇಳಲಾಯಿತು.ಅದರಲ್ಲಿ ಹೆಸರು ಹೇಳಲು ಇಚ್ಚಿಸದ ವ್ಯಕ್ತಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ
ತಹಶಿಲ್ದಾರರು ಭಾಷಣ ಮಾಡುವಾಗ ನಾನು ಅಲ್ಲೇ ಇದ್ದೆ ! ಅವರು ಮಾತನಾಡಿದ್ದು ಹೈದರಾಬಾದ್ ಕರ್ನಾಟಕ ಮುಂಬೈ ಕರ್ನಾಟಕ ಮದ್ರಾಸ್ ಕರ್ನಾಟಕ ಕುರಿತು ಭಾರತದ ಬಗ್ಗೆ ಮತ್ತು ಸ್ವತಂತ್ರ ಹೋರಾಟಗಾರರ ಬಗ್ಗೆ ಮಾತನಾಡಿಲ್ಲ ಯಾವುದೇ ತಾಲೂಕ ಜಿಲ್ಲಾ ಭೌಗೋಳಿಕವಾಗಿ ಪ್ರದೇಶಾಭಿವೃದ್ಧಿಯಾಗಬೇಕಾದರೆ ಭೂ ದಾಖಲೆಗಳು ಸರಿಯಾಗಿರಬೇಕು,ಮೂಲಭೂತ ಸೌಕರ್ಯಗಳು ಸರಿಯಾಗಿ ಜನಗಳಿಗೆ ಸಿಗುವಂತಿರಬೇಕು. ಮೂಲಭೂತ ಸೌಕರ್ಯಗಳ ನೀಡುವಲ್ಲಿ ಬ್ರಿಟಿಷರು ನಿಜಾಮರಿಗಿಂತಲೂ ಉತ್ತಮವಾಗಿದ್ದರು, ನಿಜಾಮರಿಗಿಂತ ಬ್ರಿಟಿಷರು ಚೆನ್ನಾಗಿ ಆಳ್ವಿಕೆ ಮಾಡಿದ್ದಾರೆ ಅಂತ ಅವರು ಹೇಳಿದರು. ಈಗಿನ ಸ್ವತಂತ್ರ ಭಾರತದ ಬಗ್ಗೆ ಮತ್ತು ಸ್ವತಂತ್ರ ಹೋರಾಟಗಾರರಿಗೆ ಹೋಲಿಕೆ ಮಾಡಿ ಅವರು ಮಾತನಾಡಿಲ್ಲ, ನಿಜಾಮರ ಕಾಲದಲ್ಲಿ ನಿರ್ಮಾಣಗೊಂಡ ರಸ್ತೆಗಳು ಕಟ್ಟಡಗಳಿಗಿಂತಲೂ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡ ಕಟ್ಟಡಗಳು ಸುಸಜ್ಜಿತವಾಗಿವೆ. ಉದಾಹರಣೆಗೆ ಬಳ್ಳಾರಿಯಲ್ಲಿ ಇಂದಿಗೂ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡ ಕಟ್ಟಡದೊಳಗೆ ಜಿಲ್ಲಾಧಿಕಾರಿ ಕಚೇರಿ ಕಾರ್ಯ ನಿರ್ವಹಿಸುತ್ತಿದೆ, ಬಳ್ಳಾರಿಯಲ್ಲಿ ಭೂ ದಾಖಲೆಗಳು ಇಂದಿಗೂ ಸ್ಪಷ್ಟವಾಗಿವೆ ಆದರೆ ನಿಜಾಮರ ಕಾಲದ ಭೂ ದಾಖಲೆಗಳಲ್ಲಿ ಇಂದಿಗೂ ಸ್ಪಷ್ಟತೆ ಮತ್ತು ನಿಖರತೆ ಇಲ್ಲ ಇದರಿಂದಾಗಿ ಭೂ ದಾಖಲೆಗಳ ಗೊಂದಲ ಇಂದಿಗೂ ಸಾರ್ವಜನಿಕರನ್ನು ಕಾಡುತ್ತಿವೆ ಎಂದು ಬ್ರಿಟಿಷರ ಮತ್ತು ನಿಜಾಮರ ಆಡಳಿತದ ಕಾರ್ಯವೈಖರಿಯ ಬಗ್ಗೆ ಹೋಲಿಕೆ ಮಾಡಿ ಮಾತನಾಡಿದ್ದಾರೆ ಹೊರತು ಈ ದೇಶದ ಸ್ವತಂತ್ರ ಹೋರಾಟಗಾರರ ಜೊತೆ ಹೋಲಿಕೆ ಮಾಡಿ ಮಾತನಾಡಿಲ್ಲ, ಎಂದು ಸ್ಪಷ್ಟನೆ ನೀಡಿದ್ದಾರೆ.
ತಹಸೀಲ್ದಾರರ ತೇಜೋವಧೆಗೆ ಪ್ರೀ ಪ್ಲಾನ್ ? ಕಾರಟಗಿ ತಹಸೀಲ್ದಾರ ನೇರ ನುಡಿ ಮತ್ತು ತಾಲೂಕಿನ ಅಭಿವೃದ್ಧಿ ಕುರಿತು ಅವರು ಕೈಗೊಂಡಿರುವ ದಿಟ್ಟ ನಿರ್ಧಾರಗಳಿಂದ ಕೆಲವು ಕಾಣದ ಕೈಗಳು ಅವರ ತೇಜೋವಧೆಗೆ ಮುಂದಾಗಿವೆ ಎಂದು ಹೇಳಬಹುದು. ಯಾಕೆಂದರೆ ಸೆಪ್ಟಂಬರ್ 17ರಂದು ಸ್ವತಃ ತಾಹಸಿಲ್ದಾರರೇ ಹೇಳಿರುವಂತೆ ಕಾರಟಗಿ ತಾಲೂಕಿನಲ್ಲಿ ಭೂ ಮಾಫಿಯಾ ಸಕ್ರಿಯವಾಗಿದೆ. ಅಭಿವೃದ್ಧಿಕಾರ್ಯಗಳು ನಡೆಯದಂತೆ ಅಡ್ಡಿ ಪಡಿಸುತ್ತಿದ್ದಾರೆ. ನಾವೇನೂ ಅವರಿಗೆ ಬಗ್ಗಿಲ್ಲ, ಅವರಿಗೆ ನಮ್ಮ ಕಂದಾಯ ಇಲಾಖೆ ಅಧಿಕಾರಿಗಳು ಸರಿಯಾಗಿ ಕರೆಕ್ಟಾಗಿ ರಿಪ್ಲೈ ಕೊಟ್ಟಿದ್ದಾರೆ. ಸಾರ್ವಜನಿಕರ ಭೂಮಿ ಸಾರ್ವಜನಿಕರ ಆಸ್ತಿ, ರಕ್ಷಣೆ ಮಾಡುವುದು ನಮ್ಮ ಗುರಿ, ಯಾರೇ ಅಡ್ಡ ಬಂದರು ಅವರಿಗೆ ಪಾಠ ಕಲಿಸೇ ಕಲಿಸುತ್ತೇವೆ ಎನ್ನುವ ಅಭಿವೃದ್ಧಿ ಪರ ಅವರ ನೇರ ಮಾತುಗಳು ಭೂ ಮಾಫಿಯಾ ದವರ ನಿದ್ದೆಗೆಡಿಸಿದೆ ಇದು ತಾಹಸಿಲ್ದಾರರಾದ ಕುಮಾರಸ್ವಾಮಿಯವರ ತೇಜೋವಧೆಗೆ ತೆರೆಮರೆಯಲ್ಲಿ ಸಂಚು ರೂಪಿಸುತ್ತಿರಬಹುದು ಎನ್ನುವ ಗುಮಾನಿ ಸಾರ್ವಜನಿಕರಲ್ಲಿ ಕೇಳಿಬಂದಿದೆ