ಸಂತೆ ಮಾರುಕಟ್ಟೆ ಗೋದಾಮು ಪತ್ರಕರ್ತರಿಗೆ ನೀಡಿರುವುದಕ್ಕೆ ಆಕ್ಷೇಪಣೆ ! ಸಾರ್ವಜನಿಕ ಹಿತಾಶಕ್ತಿಗೆ ಕೋರ್ಟ್ ಮೆಟ್ಟಿಲೇರಿದ ಹೋರಾಟಗಾರರು

ವರದಿ ಸುಂದರರಾಜ್ BA ಕಾರಟಗಿ
ಕಾರಟಗಿ : ಸಾರ್ವಜನಿಕ ಹಿತಾಸಕ್ತಿಯನ್ನು ಬದಿಗೊತ್ತಿ 2024 ರಲ್ಲಿ ಅಂದಿನ ಪುರಸಭೆ ಅಧಿಕಾರಿಗಳು ಮತ್ತು ಪುರಸಭೆಯ ಸದಸ್ಯರುಗಳು ಠಾರವು ಮಾಡಿ ನಿಯಮ ಬಾಹಿರವಾಗಿ ಸಂತೆ ಮಾರ್ಕೆಟಿನ ಗೋದಾಮು ಖಾಸಗಿ ವ್ಯಕ್ತಿಗಳ ಪತ್ರಿಕಾ ಭವನಕ್ಕೆ ನೀಡಿರುವುದನ್ನು ವಿರೋಧಿಸಿ ಸಾಮಾಜಿಕ ಹೋರಾಟಗಾರರಾದ ಸುಂದರರಾಜ್ ಮತ್ತು ಮಂಜುನಾಥ ವುಂತಗಲ್ ಇವರು ಜಿಲ್ಲಾ ಯೋಜನಾ ನಿರ್ದೇಶಕರಿಗೆ ದೂರು ನೀಡಿದ್ದಾರೆ ಪುರಸಭೆ ವರ್ಷವಾರು ಲಕ್ಷಾಂತರ ರೂಪಾಯಿ ಹರಾಜು ಮೂಲಕ ಸಂತೆ ಮಾರುಕಟ್ಟೆಯಿಂದ ಸಾಕಷ್ಟು ಆದಾಯವನ್ನು ಪಡೆದುಕೊಳ್ಳುತ್ತಿದೆ. ಸಂತೆಗೆ ಬರುವ ಜನರಿಗೆ ಮತ್ತು ರೈತರ ತರಕಾರಿಗಳನ್ನು ಮಾರಾಟ ಮಾಡಲು ಮತ್ತು ದೂರದ ಊರಿನಿಂದ ಸಂತೆ ಮಾರ್ಕೆಟಿಗೆ ಬರುವ ರೈತರು ಉಳಿದುಕೊಳ್ಳಲು ಮತ್ತು ತರಕಾರಿ ದಿನಸುಗಳಿಗಾಗಿ ಹಾಗೂ ಮಳೆ ಬಂದ ಸಂದರ್ಭದಲ್ಲಿ ರೈತರಿಗೆ ಅನುಕೂಲವಾಗಲು ಗೋದಾವನ್ನು ನಿರ್ಮಿಸಲಾಗಿತ್ತು. ಆದರೆ ಪುರಸಭೆಯ ಸ್ಥಾಯಿ ಸಮಿತಿ ಸದಸ್ಯರು ಮತ್ತು ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳು ರೈತರ ಮತ್ತು ಸಾರ್ವಜನಿಕರ ಹಿತಾಸಕ್ತಿಯನ್ನು ಮರೆತು ಪತ್ರಿಕಾ ಭವನಕ್ಕೆ ಹಸ್ತಾಂತರಿಸಿರುವುದರಿಂದ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗಿದೆ ಕೂಡಲೇ ಪತ್ರಿಕಾ ಭವನಕ್ಕೆ ನೀಡಿರುವ ಪರವಾನಿಗೆಯನ್ನು ರದ್ದು ಮಾಡುವಂತೆ ಮನವಿ ನೀಡಿ ವಿನಂತಿಸಿಕೊಂಡಿದ್ದಾರೆ.

ಸಂತೆ ಮಾರುಕಟ್ಟೆ ಗೋದಾಮು ಪತ್ರಕರ್ತರಿಗೆ ನೀಡಿದ ಪರವಾನಿಗೆ ರದ್ದು ಮಾಡಿ ಎಂದು ದೂರು ಸಲ್ಲಿಸಿ ಸುಮಾರು ಒಂದು ತಿಂಗಳವಾದರೂ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸುತ್ತಿರುವುದರಿಂದ ಪತ್ರಿಕಾ ಭವನಕ್ಕೆ ಪರವಾನಿಗೆ ನೀಡಿದ ಸಾಮಾನ್ಯ ಸಭೆಯ ಠರಾವು ರದ್ದು ಕೋರಿ ಸಾರ್ವಜನಿಕ ಹಿತಾಶಕ್ತಿ ಅರ್ಜಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ, ಕೋರ್ಟಿನಿಂದ ನ್ಯಾಯ ಸಿಗಲಿದೆ ಎನ್ನುವ ಭರವಸೆ ಇದೆ ಎಂದು ಹೋರಾಟಗಾರರು ವಿಶ್ವಾಸ ವ್ಯಕ್ತಪಡಿಸಿದ್ದಾರೆ