ಶಾಲಾ ಮಕ್ಕಳ ಹಿತಾಸಕ್ತಿಯನ್ನು ಬದಿಗೊತ್ತಿದ ಪುರಸಭೆ ಅಧಿಕಾರಿಗಳು*

*ಶಾಲಾ ಮಕ್ಕಳ ಹಿತಾಸಕ್ತಿಯನ್ನು ಬದಿಗೊತ್ತಿದ ಪುರಸಭೆ ಅಧಿಕಾರಿಗಳು*
*ಶಿಥಿಲಗೊಂಡ ಬುನಾದಿ ಮೇಲೆ ಕಾಂಪೌಂಡ್ ನಿರ್ಮಾಣ*
ಕಾರಟಗಿ; ಪಟ್ಟಣದ ಹಳೆ ಬಸ್ ಸ್ಟಾಂಡ್ ಹತ್ತಿರ ಇರುವ ಬಾಲಕಿ/ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಂಭಾಗದಲ್ಲಿ ಶಾಲಾ ಕಂಪೌಂಡ್ ನಿರ್ಮಾಣವಾಗುತ್ತಿದೆ, ಶಾಲಾ ಕಂಪೌಂಡ್ ನಿರ್ಮಾಣದಲ್ಲಿ ಅಧಿಕಾರಿಗಳ ಕರ್ತವ್ಯ ಲೋಪ ಮತ್ತು ಬೇಜವಾಬ್ದಾರಿತನ ಕಂಡು ಬಂದಿದ್ದು ನಿರ್ಮಾಣವಾಗುತ್ತಿರುವ ಶಾಲಾ ಗೋಡೆ ಬಗ್ಗೆ ಅಭದ್ರತೆ ಕಾಡುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಮತ್ತು ಶಿಕ್ಷಣ ಪ್ರೇಮಿ ಸುಂದರರಾಜ್ ಇವರು ಕಳವಳ ವ್ಯಕ್ತಪಡಿಸಿದ್ದಾರೆ, ಶಾಲಾ ಕಾಂಪೌಂಡ್ ನಿರ್ಮಾಣದ ಅಂದಾಜು ಪಟ್ಟಿ ಮತ್ತು ಕ್ರಿಯಾ ಯೋಜನೆಯ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಗೋಡೆ ನಿರ್ಮಾಣ ಮಾಡಲಾಗುತ್ತಿದೆ, ಅಂದಾಜು 6 ಲಕ್ಷ ವೆಚ್ಚದ ಶಾಲಾ ಕಾಂಪೌಂಡ್ ನಿರ್ಮಾಣದ ಬಗ್ಗೆ ಪುರಸಭೆ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ ವಹಿಸಿ ಗುತ್ತಿಗೆದಾರರ ಜೊತೆ ಶಾಮೀಲಾಗಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ,
ಸುಮಾರು 35 ವರ್ಷದ ಹಳೆಯ ಗುಣಮಟ್ಟ ಅವಧಿ ಮುಗಿದ ಕಟ್ಟಡ ಬುನಾದಿ ಮೇಲೆ ಶಾಲಾ ಕಂಪೌಂಡ್ ಕಾಮಗಾರಿ ನಡೆಯುತ್ತಿದೆ
ಕಟ್ಟಡದ ಗುಣಮಟ್ಟ ಅವಧಿ ಮುಗಿದಿದ್ದು ಆ ಕಾರಣಕ್ಕಾಗಿ ಕೆಲವು ದಿನಗಳ ಹಿಂದೆ ಇಲ್ಲಿರುವಂತಹ ಮಳಿಗೆಗಳ ಕಟ್ಟಡವನ್ನು ಪುರಸಭೆಯವರೇ ನೆಲಸಮಗೊಳಿಸಿದ್ದರು,
ಆದರೆ ಹಳೆಯ ಕಟ್ಟಡ ಬುನಾದಿ ಮೇಲೆ ಕಾಂಪೌಂಡ್ ನಿರ್ಮಾಣ ಮಾಡುವುದರಿಂದ ಗೋಡೆ ಬಗ್ಗೆ ಅಭದ್ರತೆ ಕಾಡುತ್ತಿದೆ ಅಲ್ಲದೆ ರಾಜ್ಯ ಹೆದ್ದಾರಿ ರಸ್ತೆ ಪಕ್ಕದಲ್ಲಿಯೇ ಇರುವುದರಿಂದ ವಾಹನಗಳು ಮತ್ತು ಭಾರವಾದ ವಾಹನಗಳ ನಿರಂತರ ಓಡಾಟದ ಪರಿಣಾಮವಾಗಿ ಬುನಾದಿ ಗಟ್ಟಿ ಇಲ್ಲದಿದ್ದರೆ ಗೋಡೆಗಳು ಸೀಳುವ ಅವಕಾಶ ಇದೆ ಹಾಗೂ ಗೋಡೆಗಳು ಬಿರುಕು ಬಿಟ್ಟು ಗೋಡೆ ಕುಸಿಯಲುಬಹುದು,
ಇದರಿಂದಾಗಿ ಮುಂದೆ ಶಾಲಾ ಮಕ್ಕಳಿಗೆ ತೊಂದರೆ ಆಗುವ ಅವಕಾಶಗಳು ಇವೆ
ಹಳೆಯ ಬುನಾದಿಯ ಕಾರ್ಯಕ್ಷಮತೆ ಮತ್ತು ಗುಣಮಟ್ಟದ ಅವಧಿ ಮುಗಿದಿದ್ದು ಆದರೂ ಅಧಿಕಾರಿಗಳು ಹಳೆಯ ಬುನಾದಿ ಮೇಲೆ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ
ಈಗಷ್ಟೇ ಒಂದು ವಾರದ ಹಿಂದೆ ಶಾಲೆಯ ಮುಖ್ಯೋಪಾಧ್ಯಾಯರುಗಳು ಹಳೆಯ ಬುನಾದಿಯ ಗುಣಮಟ್ಟದ ಪರಿಶೀಲನ ವರದಿ ನೀಡುವಂತೆ ಪುರಸಭೆ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದಾರೆ ಹಾಗೂ ಪರಿಶೀಲನಾ ವರದಿ ನೀಡುವವರೆಗೆ ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಳಿಸುವಂತೆ ವಿನಂತಿಸಿಕೊಂಡಿದ್ದಾರೆ ಆದರೂ ಅಧಿಕಾರಿಗಳು ತರಾತುರಿಯಲ್ಲಿ ಶಾಲಾ ಕಾಂಪೌಂಡ್ ಕಾರ್ಯ ಸಂಪೂರ್ಣ ಮಾಡುವಲ್ಲಿ ತಲ್ಲಿನರಾಗಿದ್ದಾರೆ ಇದು ಶಾಲಾ ಮಕ್ಕಳ ಹಿತಾಸಕ್ತಿಯನ್ನು ಬದಿಗೊತ್ತಿರುವುದು ಮತ್ತು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ ಈ ಕುರಿತು ಶಾಲಾ ಮಕ್ಕಳ ಸುರಕ್ಷಿತಕ್ಕಾಗಿ ಕ್ಷೇತ್ರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರುಗಳ ಹಾಗೂ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ಸಲ್ಲಿಸಲಾಗುತ್ತದೆ ಎಂದಿದ್ದಾರೆ
ಬಾಕ್ಸ್ ; ಅಧಿಕಾರಿಗಳು ಸಂಪೂರ್ಣವಾಗಿ ಮಕ್ಕಳ ಹಿತಾಸಕ್ತಿಯನ್ನು ಬದಿಗೊತ್ತಿ ಶಿಥಿಲ ಬುನಾದಿ ಮೇಲೆ ಕಾಂಪೌಂಡ್ ನಿರ್ಮಾಣ ಮಾಡುತ್ತಿದ್ದಾರೆ ಈ ಕುರಿತು ಮಕ್ಕಳ ಆಯೋಗಕ್ಕೆ ದೂರು ಸಲ್ಲಿಸಲಾಗುತ್ತದೆ
ಸುಂದರರಾಜ್ ಕಾರಟಗಿ ಸಾಮಾಜಿಕ ಹೋರಾಟಗಾರ