ಕಾಲಿನ ಶಸ್ತ್ರ ಚಿಕಿತ್ಸೆ ನಡುವೆ ಕರ್ತವ್ಯ ಪ್ರಜ್ಞೆ ಮೆರೆದ ಅಧಿಕಾರಿ ! ಪಟ್ಟಣದಲ್ಲಿ ರಸ್ತೆಯ ಮೇಲೆ ಸ್ಪೀಡ್ ಬ್ರೇಕರ್ ಅಳವಡಿಕೆ
ವರದಿ ಸುಂದರರಾಜ್ BA ಕಾರಟಗಿ

ಕಾಲಿನ ಶಸ್ತ್ರ ಚಿಕಿತ್ಸೆ ನಡುವೆ ಕರ್ತವ್ಯ ಪ್ರಜ್ಞೆ ಮೆರೆದ ಅಧಿಕಾರಿ !
ಪಟ್ಟಣದಲ್ಲಿ ರಸ್ತೆಯ ಮೇಲೆ ಸ್ಪೀಡ್ ಬ್ರೇಕರ್ ಅಳವಡಿಕೆ
ಕಾರಟಗಿ : ಕಾರಟಗಿ ಪಟ್ಟಣದಲ್ಲಿ ವಾಹನಗಳ ಸಂಚಾರ ದಟ್ಟಣೆಯಿಂದಾಗಿ ಹಲವೆಡೆ ರಸ್ತೆಯ ಮೇಲೆ ಅಪಘಾತಗಳು ನಡೆದಿವೆ, ಜನದಟ್ಟಣೆಯಲ್ಲಿ ವಾಹನ ಸವಾರರ ನಿರ್ಲಕ್ಷ್ಯ ಚಾಲನೆಯಿಂದಾಗಿ ಸಾರ್ವಜನಿಕರು ಪಾದಾಚಾರಿಗಳು ರಸ್ತೆಯ ಮೇಲೆ ನಿರ್ಭೀತವಾಗಿ ಓಡಾಡಲು ಭಯಭೀತರಾಗುತ್ತಿದ್ದರು ಮತ್ತು ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಸಹ ರಸ್ತೆಯ ಮೇಲೆ ಸ್ಪೀಡ್ ಬ್ರೇಕರ್ ಗಳಿಲ್ಲದ ಕಾರಣದಿಂದಾಗಿ ವೇಗದ ವಾಹನಗಳಿಗೆ ಭಯಭೀತರಾಗಿದ್ದರು. ಪಟ್ಟಣದ ಸಾರ್ವಜನಿಕರು ಹಾಗೂ ದಲಾಲಿ ಕಿರಾಣಿ ವರ್ತಕರು ಹಲವು ಬಾರಿ ಕಾರಟಗಿ ಪುರಸಭೆಯ ಅಧಿಕಾರಿಗಳಿಗೆ ರೋಡ್ ಹಮ್ಸ್ ನಿರ್ಮಿಸಲು ಮನವಿ ಸಲ್ಲಿಸಿದ್ದರು.
ಆದರೆ ಇಲ್ಲಿಯವರೆಗೆ ಯಾವುದೇ ಹಮ್ಸ್ ಕಾರ್ಯ ನೆನೆಗುದಿಗೆ ಬಿದ್ದಿತ್ತು, ನೂತನವಾಗಿ ಕಾರಟಗಿ ಪುರಸಭೆ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಸಾಬಣ್ಣ ಕಟ್ಟಿಕಾರ್ ಸಾರ್ವಜನಿಕರ ಹಿತಾಸಕ್ತಿಯ ಮನವಿಗೆ ಸ್ಪಂದಿಸಿ ಪುರಸಭೆಯ ಸ್ವಂತ ನಿಧಿಯಿಂದ ಒಟ್ಟು ₹ 8 ಲಕ್ಷ ಮೌಲ್ಯದ ರೋಡ್ ಹಮ್ಸ್ ಗಳನ್ನು ಪಟ್ಟಣದ ಪನ್ನಾಪುರ ಕ್ರಾಸ್, ಸಾಲೋಣಿ ಕ್ರಾಸ್, ನವಲಿ ಕ್ರಾಸ್, ರಾಯಚೂರು ಗಂಗಾವತಿ ರಸ್ತೆಯ ನ್ಯಾಷನಲ್ ಪಬ್ಲಿಕ್ ಸ್ಕೂಲ್ , ಮುಂಭಾಗದಲ್ಲಿ ಮತ್ತು ಚಂದನ ಹಳ್ಳಿ ಕ್ರಾಸ್ , ಬಳಿ ರೋಡ್ ಹಂಸಗಳನ್ನು{ ರಸ್ತೆ ತಡೆಗಳನ್ನು } ನಿರ್ಮಿಸಿದ್ದು, ಸಾರ್ವಜನಿಕರಿಂದ ಪುರಸಭಾ ಮುಖ್ಯ ಅಧಿಕಾರಿ ಸಾಬಣ್ಣ ಕಟ್ಟಿಕಾರ್ ಹಾಗೂ ಕೆಲವು ಜನ ಪ್ರತಿನಿಧಿಗಳ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ
ವಿಶೇಷವೆನೆಂದರೆ ಇತ್ತೀಚಿಗಷ್ಟೇ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ಪುರಸಭೆ ಮುಖ್ಯಾಧಿಕಾರಿಗಳ ಬಲಗಾಲಿಗೆ ಶಸ್ತ್ರ ಚಿಕಿತ್ಸೆ ಆಗಿದ್ದು 20 ಹೊಲಿಗೆ ಹಾಕಲಾಗಿದೆ ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದರು ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್ ವಿಶ್ರಾಂತಿ ಪಡೆಯದೆ ಸರ್ಕಾರಿ ಕೆಲಸ ದೇವರ ಕೆಲಸ ಎಂದು ಸಾರ್ವಜನಿಕ ಹಿತಾಸಕ್ತಿಗಾಗಿ ಕರ್ತವ್ಯ ಪ್ರಜ್ಞೆಯಿಂದ ಡ್ಯೂಟಿ ಮಾಡುತ್ತಿರುವ ಅವರ ಕಾರ್ಯ ವೈಖರಿ ಶ್ಲಾಘನೀಯ




