ಕುತೂಹಲ ಕೆರಳಿಸಿದ ಚುನಾವಣೆ ಕಣದಲ್ಲಿ ಅಂತಿಮ ತೀರ್ಪು ನೀಡಿದ ಸರ್ಕಾರಿ ನೌಕರರು
*ಕಾರಟಗಿ ತಾಲೂಕ ನೂತನ ಅಧ್ಯಕ್ಷರಾಗಿ ಹನುಮಂತಪ್ಪ ನಾಯಕ್ ಗೆಲುವು*
ಕಾರಟಗಿ : ನನ್ನ ಈ ಗೆಲುವನ್ನು ನನಗೆ ಬೆಂಬಲಿಸಿದ ಪ್ರತಿ ಒಬ್ಬರಿಗೆ ಸಲ್ಲಿಸುತ್ತೇನೆ ತಾಲೂಕಿನ ಸರ್ಕಾರಿ ನೌಕರರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರಟಗಿ ತಾಲೂಕ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹನುಮಂತಪ್ಪ ನಾಯಕ್ ರವರು ಹೇಳಿದರು. ಕಾರಟಗಿ ತಾಲೂಕಿನ ನೌಕರರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ 28 ಜನ ಸರ್ಕಾರಿ ನೌಕರರು ಆಯ್ಕೆಗೊಂಡಿದ್ದಾರೆ. ಅಕ್ಟೋಬರ್ 9 ರಿಂದ ನವಂಬರ್ 16ನೇ ತಾರೀಖಿನವರೆಗೆ ಸರ್ಕಾರಿ ನೌಕರರ ಸಂಘದ ಕಾರಟಗಿ ತಾಲೂಕ ಕಾರ್ಯಕಾರಿ ಸಮಿತಿಯ ಚುನಾವಣೆ ವಿವಿಧ ಹಂತದಲ್ಲಿ ನಡೆಯಿತು.
ಇದರಲ್ಲಿ 23 ಜನ ವಿಧ ಇಲಾಖೆಯ ಸರ್ಕಾರಿ ನೌಕರರು ಅವಿರೋಧವಾಗಿ ಆಯ್ಕೆಗೊಂಡಿದ್ದರು. ಹಾಗೂ 05 ಜನ ಸರ್ಕಾರಿ ನೌಕರರು ಕಾರ್ಯಕಾರಿ ಸಮಿತಿಗೆ ಚುನಾವಣೆ ಮೂಲಕ ಆಯ್ಕೆಗೊಂಡಿದ್ದರು. ರಾಜ್ಯ ಪರಿಷತ್ ಗೆ ಮಂಜುನಾಥ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನವಂಬರ್ 16,2024 ರಂದು ಕಾರಟಗಿ ತಾಲೂಕ ಅಧ್ಯಕ್ಷ ಮತ್ತು ಖಜಾಂಚಿ ಸ್ಥಾನಕ್ಕೆ ಚುನಾವಣೆ ನಡೆಯಿತು.28 ಜನ ಸದಸ್ಯರು ಚುನಾವಣೆಯಲ್ಲಿ ಮತವನ್ನು ಚಲಾಯಿಸಿ ತಾಲೂಕ ಅಧ್ಯಕ್ಷ ಸ್ಥಾನಕ್ಕೆ ತೆರೆ ಎಳೆದರು.
ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚಲಾವಣೆಗೊಂಡ ಒಟ್ಟು 28 ಮತಗಳಲ್ಲಿ ಹನುಮಂತಪ್ಪ ನಾಯಕ್ ರವರು 15 ಮತಗಳನ್ನು ಪಡೆದರು ಹಾಗೂ ಅಮರೇಶ್ ಮೈಲಾಪುರ್ ಇವರು 13 ಮತಗಳನ್ನು ಪಡೆದರು 02 ಮತಗಳ ಅಂತರದಿಂದ ಹನುಮಂತಪ್ಪ ನಾಯಕ್ ಇವರು ಕಾರಟಗಿ ಸರ್ಕಾರಿ ನೌಕರರ ಸಂಘದ ನೂತನ ತಾಲೂಕ ಅಧ್ಯಕ್ಷರಾಗಿ ಗೆಲುವು ಪಡೆದು ಆಯ್ಕೆಗೊಂಡರು. ಮತ್ತು ಖಜಾಂಚಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚಲಾವಣೆಗೊಂಡ ಒಟ್ಟು 28 ಮತಗಳ ಪೈಕಿ ಶ್ರೀಕಾಂತ್ 20 ಮತಗಳು ಚಂದ್ರಶೇಖರ್ 8 ಮತಗಳನ್ನು ಪಡೆದರು. 20 ಮತಗಳು ಪಡೆದ ಶ್ರೀಕಾಂತ್ ರವರು ಕಾರಟಗಿ ಸರ್ಕಾರಿ ನೌಕರರ ಸಂಘದ ಖಜಾಂಚಿಯಾಗಿ ಗೆಲುವು ಪಡೆದು ಆಯ್ಕೆಗೊಂಡರು.
ಬಾರಿ ಕುತೂಹಲ ಕೆರಳಿಸಿದ ಕಾರಟಗಿ ಸರ್ಕಾರಿ ನೌಕರ ಸಂಘದ ತಾಲೂಕ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿ ಅಭ್ಯರ್ಥಿಗಳಿಬ್ಬರು ತೀವ್ರ ಕಸರತ್ತು ನಡೆಸಿದ್ದರು. ಹೇಗಾದರೂ ಮಾಡಿ ಅಧ್ಯಕ್ಷ ಸ್ಥಾನ ಪಡೆಯಲೇಬೇಕು ಎಂದು ಪಣತೊಟ್ಟಿದ್ದರು. ಆದರೆ ಯಾವುದೇ ಚುನಾವಣೆಯಲ್ಲಿ ಅಭ್ಯರ್ಥಿಗಳು ಅಂದುಕೊಂಡ ಹಾಗೆ ನಡೆಯುವುದೇ ಇಲ್ಲ ಮತದಾರರ ತೀರ್ಪಿಗೆ ತಲೆಬಾಗಲೇಬೇಕು. ಶಿಕ್ಷಕ ಅಮರೇಶ ಮೈಲಾಪುರವರು ಕೇವಲ ಎರಡು ಮತಗಳ ಅಂತರದಿಂದ ಪರಾಜಯಗೊಂಡರು. ಗೆಲುವು ಪಡೆದ ಹನುಮಂತಪ್ಪ ನಾಯಕ್ ಇವರಿಗೆ ಶಿಕ್ಷಕ ಅಮರೇಶ್ ಮೈಲಾಪುರವರು ಕೈಕುಲಕಿ ಶುಭಾಶಯ ಕೋರಿದ್ದು ವಿಶೇಷವಾಗಿತ್ತು. ಚುನಾವಣೆ ಎಂದರೆ ಒಬ್ಬರು ಗೆಲ್ಲಬೇಕು ಮತ್ತೊಬ್ಬರು ಸೋಲಬೇಕು ಇಲ್ಲಿಯೂ ಅದೇ ನಡೆದಿದೆ.
ಸೋಲು ಕೊನೆಯಲ್ಲ ಗೆಲುವು ಶಾಶ್ವತವಲ್ಲ. ಅಧ್ಯಕ್ಷರಾಗಿ ಗೆಲುವು ಪಡೆದ ಹನುಮಂತಪ್ಪ ನಾಯಕ್ ರವರು ಕಾರಟಗಿ ತಾಲೂಕ ಸರ್ಕಾರಿ ನೌಕರರ ಕುಂದು ಕೊರತೆಗಳಿಗೆ ಮತ್ತು ನೌಕರರ ನೋವಿಗೆ ಧ್ವನಿಯಾಗಿ ಪ್ರಾಮಾಣಿಕವಾಗಿ ಪಾರದರ್ಶಕವಾಗಿ ಸೇವೆ ಮಾಡುತ್ತೇನೆ ಎಂದಿದ್ದಾರೆ. ಕೊಪ್ಪಳ ಜಿಲ್ಲಾಧ್ಯಕ್ಷರಾದ ನಾಗರಾಜ್ ಜುಮ್ಮಣ್ಣನವರ್ ಕಾರಟಗಿಗೆ ಆಗಮಿಸಿ ನೂತನ ಅಧ್ಯಕ್ಷರಾದ ಹನುಮಂತಪ್ಪ ನಾಯಕ್ ರವರಿಗೆ ಶುಭಾಶಯಗಳು ತಿಳಿಸಿದರು. ಮಾಜಿ ಅಧ್ಯಕ್ಷ ಸರ್ದಾರ್ ಅಲಿ ಚನ್ನಬಸಪ್ಪ ವಕ್ಕಳದ್ ಬಣದ ಸದಸ್ಯರು ನೂತನ ಅಧ್ಯಕ್ಷರಿಗೆ ಹೂ ಮಾಲೆಗಳನ್ನು ಹಾಕಿ ಸಿಹಿ ತಿನಿಸಿ ಸಂಭ್ರಮಿಸಿದರು.