
ಗಂಗಾವತಿ ನ್ಯಾಯಾಲಯದಿಂದ ಮತ್ತೊಂದು ಐತಿಹಾಸಿಕ ತೀರ್ಪು ! ಶಿಕ್ಷಕ ಮೊಹಮದ್ ಹಜರುದ್ದೀನ್ ಗೆ ಜೀವಿತಾವಧಿ ಶಿಕ್ಷೆ ! ಅಕ್ಷರ ಕಲಿಸುವ ಕೈಗಳು ಮಾಡಿದ ಘೋರ ಅಪರಾಧ
ಅವನ ಹಣೆ ಬರಹದಲ್ಲಿ ದೇವರೇನು ಬರೆದಿದ್ನೋ ಗೊತ್ತಿಲ್ಲ ! ಆದ್ರೆ ಅವನ ಘೋರ ಅಪರಾಧದ ಕರಾಳತೆಯನ್ನು ಪತ್ರಿಕೆಯಲ್ಲಿ ವಿಸೃತವಾಗಿ ಬರೆದು ಎದೆಗಾರಿಕೆ ಮೆರೆದ ವಿಜಯವಾಣಿ ಪತ್ರಕರ್ತ ಗೌರವಾನ್ವಿತ ಪಂಪಾರೆಡ್ಡಿ ಅರಳಿಹಳ್ಳಿಯವರು
ಕಾರಟಗಿ : ಪಟ್ಟಣದ ಜೆಪಿ ನಗರದ ನಿವಾಸಿ ಪ್ರಕರಣದ ಆರೋಪಿಯಾದ ಮೊಹ್ಮದ್ ಅಜುರುದ್ದೀನ್ ಈತನು 30.06.2022 ರಂದು
ಘಟನೆಯ ಸಮಯದಲ್ಲಿ ಸಿಂಧನೂರನ ತಾಲೂಕಿನ ಸಿಂಗಾಪೂರ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ, ಆ ಸಮಯಲ್ಲಿ ನೊಂದ ಮಹಿಳೆಗೆ ಪರಿಚಯಾಗಿದ್ದು ಆಕೆಯ ಅಂಗವಿಕಲ ಮಗಳಿಗೆ ಮನೆ ಪಾಠ ಮಾಡಿ ಹೆಚ್ಚಿನ ವಿದ್ಯಾಭಾಸ ಕೊಡುಸುತ್ತೇನೆ. ಸರಕಾರಿ ಸವಲತ್ತುಗಳನ್ನು ಕೊಡುಸುತ್ತೇನೆ ಎಂದು ಹೇಳಿ ಆಕೆಯನ್ನು ಪುಸಲಾಯಿಸಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದು ಅಲ್ಲದೆ ಅದನ್ನು ತನ್ನ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಅದನ್ನು ಆಕೆಗೆ ತೋರಿಸಿ ಆಕೆ ತನಗೆ ಲೈಂಗಿಕ ಕ್ರಿಯೆಗೆ ಸಹಕರಿಸದಿದ್ದರೆ ಆ ವಿಡಿಯೋವನ್ನು ವೈರಲ್ ಮಾಡುವುದಾಗಿ ಹೆದರಿಸಿ ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರ ಮಾಡಿದ್ದು ಇರುತ್ತದೆ.
ನೊಂದ ಮಹಿಳೆಯ ಮೇಲೆ ತಾನು ಹಠ ಸಂಭೋಗದ ವಿಡಿಯೋ ಚಿತ್ರೀಕರಣವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಇರುತ್ತದೆ.ಕಾರಣ ಆರೋಪಿತನು ವಿರುದ್ಧ ಕಲಂ 376(2) 354, 355, 323, 504, 506.66(E) IT ACT 2000 ಐಪಿಸಿ ಭಾರತೀಯ ದಂಡ ಸಂಹಿತೆ ಪ್ರಕಾರ ಅಪರಾಧವೆಸಗಿದ್ದು ತನಿಖೆಯಿಂದ ಮತ್ತು ಸಾಕ್ಷ್ಯಾಧಾರಗಳಿಂದ ಧೃಡಪಟ್ಟಿದ್ದರಿಂದ ಆರೋಪಿತನಾದ ಮೊಹ್ಮದ್ ಅಜುರುದ್ದೀನ್ ತಂದೆ ಅಬ್ದುಲ್ ಹಮೀದ ಸಾ॥ ಜೆ.ಪಿ ನಗರ ಕಾರಟಗಿ ಈತನಿಗೆ ಗಂಗಾವತಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಿತಾವಧಿ ಶಿಕ್ಷೆ ನೀಡಿ ತೀರ್ಪು ಹೊರಡಿಸಿದೆ.
ನ್ಯಾಯಾಧೀಶರಾದ ಶ್ರೀ ಸದಾನಂದ ನಾಗಪ್ಪ ನಾಯ್ಕ ಇವರು ಆರೋಪಿಯು ತಪ್ಪಿಸ್ಥ ಎಂದು ತೀರ್ಪು ನೀಡಿ, ಆರೋಪಿತನಿಗೆ ಭಾರತೀಯ ದಂಡ ಸಂಹಿತೆ ಕಲಂ, 376(2)(ಎನ್) ಐಪಿಸಿ ಅಪರಾಧಕ್ಕೆ ಜೀವಿತಾವಧಿ ಶಿಕ್ಷೆ ಹಾಗೂ ಆರೋಪಿಯು ಒಟ್ಟು 05 ಲಕ್ಷ 50.000=00 ರೂ. ಹಣವನ್ನು ಸಂತ್ರಸ್ತ ಮಹಿಳೆಗೆ ಪರಿಹಾರವಾಗಿ ಕೊಡಬೇಕು ಮತ್ತು 50,000-00 ಹಣವನ್ನು ರಾಜ್ಯಕ್ಕೆ ತುಂಬಬೇಕೆಂದು ಮಾನ್ಯ ನ್ಯಾಯಾಲಯವು ಆದೇಶಿಸಿ ದಿನಾಂಕ: 27-02-2026 ರಂದು ತೀರ್ಪು ನೀಡಿದ್ದು ಇರುತ್ತದೆ.
ಅಭಿಯೋಜನಾ ಪರವಾಗಿ ಸರ್ಕಾರಿ ಅಭಿಯೋಕರಾದ ಶ್ರೀಮತಿ ನಾಗಲಕ್ಷ್ಮೀ ಎಸ್ ಇವರು ವಾದ ಮಂಡಿಸಿರುತ್ತಾರೆ. ಕಾರಟಗಿ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಯವರಾದ ನಾಗರಾಜ ಇವರು ತನಿಖೆಯ ಕಾಲಕ್ಕೆ ತನಿಖಾಧಿಕಾರಿಗೆ ಸಹಕರಿಸಿದ್ದು ಇರುತ್ತದೆ. ಅದೇ ರೀತಿ ಕಾರಟಗಿ ಪೊಲೀಸ್ ಠಾಣೆಯ ಅಂದಿನ ತನಿಖಾಧಿಕಾರಿ ವಿ ಎಸ್ ಹಿರೇಮಠ್ ನ್ಯಾಯಾಲಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿರುತ್ತಾರೆ.ಪೊಲೀಸ್ ಸಿಬ್ಬಂದಿಯವರಾದ ಕಾರ್ತಿಕ, ಅಕ್ಷರಸಾಬ್ ಮತ್ತು ವಿಜಯರವರು ಪ್ರಕರಣದ ವಿಚಾರಣೆಯ ಸಮಯದಲ್ಲಿ ಸಾಕ್ಷಿಗಳನ್ನು ಸಮಯಕ್ಕೆ ಸರಿಯಾಗಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಸಾಕಷ್ಟು ಸಹಕಾರ ನೀಡಿದ್ದು ಇರುತ್ತದೆ.
ಪ್ರಕರಣದ ಬೆನ್ನು ಹತ್ತಿದ ವಿಜಯವಾಣಿ ವರದಿಗಾರರಾದ ಪಂಪಾರೆಡ್ಡಿ ಅರಳಿಹಳ್ಳಿ ಪ್ರಕರಣದ ಸೂಕ್ಷ್ಮತೆಯ ಕುರಿತು ವಿಸೃತ ವರದಿ ಬರೆದು ಅಧಿಕಾರಿಗಳ ಗಮನ ಸೆಳೆದು ಅಪರಾಧಿಯ ಅಪರಾಧದ ಕರಾಳತೆಯನ್ನು ರಾಜ್ಯಮಟ್ಟದಲ್ಲಿ ಹೊರಹಾಕಿದ್ದರು. ಅಪರಾಧಿಯ ಹಣೆ ಬರಹದಲ್ಲಿ ದೇವರೇನು ಬರೆದಿದ್ನೋ ಗೊತ್ತಿಲ್ಲ ! ಆದ್ರೆ ಅವನ ಘೋರ ಅಪರಾಧದ ಕರಾಳತೆಯನ್ನು ಪತ್ರಿಕೆಯಲ್ಲಿ ವಿಸೃತವಾಗಿ ಬರೆದು ಎದೆಗಾರಿಕೆ ಮೆರೆದ ಪತ್ರಕರ್ತ ಗೌರವಾನ್ವಿತ ಪಂಪಾರೆಡ್ಡಿ ಅರಳಿಹಳ್ಳಿಯವರು ಪತ್ರಕರ್ತರಿಗೆ ಪ್ರೇರಣೆಯಾಗಿದ್ದಾರೆ.


