ಕಾರಟಗಿ

ಸಚಿವರಾದ ತಂಗಡಗಿಯವರ ಆರೋಗ್ಯ ಬೇಗ ಸುಧಾರಣೆ ಆಗಲಿ. ಸಚಿವರ ಜೊತೆ ನಮ್ಮ ಸಮುದಾಯದ ಘರ್ಷಣೆ ಇಲ್ಲ ಅವರು ನಮ್ಮವರೇ.....! ಶ್ರೀ ಪ್ರಣವಾನಂದ ಮಹಾಸ್ವಾಮಿಗಳು

ಸಚಿವರಾದ ತಂಗಡಗಿಯವರ ಆರೋಗ್ಯ ಬೇಗ ಸುಧಾರಣೆ ಆಗಲಿ. ಸಚಿವರ ಜೊತೆ ನಮ್ಮ ಸಮುದಾಯದ ಘರ್ಷಣೆ ಇಲ್ಲ ಅವರು ನಮ್ಮವರೇ…..! ಶ್ರೀ ಪ್ರಣವಾನಂದ ಮಹಾಸ್ವಾಮಿಗಳು

ಕಾರಟಗಿ : ಸಚಿವರಾದ ಶಿವರಾಜ್ ಎಸ್ ತಂಗಡಗಿ ಅವರ ಮನೆ ಮುತ್ತಿಗೆ ಹಾಕುವ ಕುರಿತು ಈಡಿಗ ಸಮುದಾಯದ ಪೀಠಾಧಿಪತಿಗಳಾದ ಶ್ರೀ ಪ್ರಣಾ ನಂದ ಮಹಾಸ್ವಾಮಿಗಳು ಕೆಲವು ದಿನಗಳ ಹಿಂದೆ ಕರೆ ನೀಡಿದ್ದರು. ಏಪ್ರಿಲ್ 06 ರಂದು ಸಚಿವರ ಮನೆ ಮುಚ್ಚಿಗೆ ಹಾಕಿ ಪ್ರತಿಭಟಿಸುವ ಕುರಿತು ನಿರ್ಧರಿಸಿದ್ದರು. ಆದರೆ ಸಚಿವರ ಅನಾರೋಗ್ಯದ ಹಿನ್ನೆಲೆಯಲ್ಲಿ ಮಾನವೀಯ ದೃಷ್ಟಿಯಿಂದ ಸಚಿವರ ಮನೆ ಮುತ್ತಿಗೆ ಹಾಕುವ ನಿರ್ಧಾರವನ್ನು ಕೈ ಬಿಟ್ಟಿದ್ದಾರೆ.

ಈ ಕುರಿತು GB news kannada ಕಾರಟಗಿ ತಾಲೂಕ ವರದಿಗಾರ ಸುಂದರರಾಜ್ ಶ್ರೀಗಳಿಂದ ಸ್ಪಷ್ಟನೆಯನ್ನು ಪಡೆದಿದ್ದಾರೆ. ಏಪ್ರಿಲ್ 6 ರಂದು ಸಚಿವರ ಮನೆ ಮುತ್ತಿಗೆ ಹಾಕುವ ಕುರಿತು ಸ್ಪಷ್ಟನೆಯನ್ನು ಕೇಳಿದ ವರದಿಗಾರರಿಗೆ ಉತ್ತರಿಸಿದ ಶ್ರೀಗಳು ಸಚಿವರ ಆರೋಗ್ಯ ಸರಿ ಇಲ್ಲದ ಕಾರಣ ಸಚಿವರು ಆಪರೇಷನ್ ಮಾಡಿಕೊಂಡು ಕಷ್ಟದಲ್ಲಿರುವಾಗ ಮಾನವೀಯ ದೃಷ್ಟಿಯಿಂದ ಅವರ ಮನೆಯ ಹತ್ತಿರ ಹೋರಾಟ ಮಾಡುವ ವಿಚಾರವನ್ನು ಕೈಬಿಟ್ಟಿದ್ದೇವೆ.

ಈಗಾಗಲೇ ನಾನು ಬೆಂಗಳೂರಲ್ಲಿ ಸಚಿವರನ್ನು ಭೇಟಿಯಾಗಿದ್ದು ಅವರ ಆರೋಗ್ಯವನ್ನು ವಿಚಾರಿಸಿದ್ದೇನೆ.ಆ ಸಂದರ್ಭದಲ್ಲಿ ಅವರು ಮಾನ್ಯ ಮುಖ್ಯಮಂತ್ರಿಗಳ ಭೇಟಿ ಮಾಡಿಸದೆ ಇರುವುದಕ್ಕೆ ಆಗಿರುವ ತೊಂದರೆಗಳನ್ನು ತಿಳಿಸಿದ್ದಾರೆ. ಹೋರಾಟ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಭೇಟಿ ಮಾಡಿಸುವುದಾಗಿ ಅವರು ಹೇಳಿದ್ದರು. ಆದರೆ ಕಾರಣಾಂತರಗಳಿಂದ ಅವರನ್ನು ಭೇಟಿ ಮಾಡಿಸಲು ಆಗಲಿಲ್ಲ ಎಂದು ಸಚಿವರು ತಿಳಿಸಿದರು.

ಸಚಿವರಾದ ಶಿವರಾಜ್ ಎಸ್ ತಂಗಡಗಿ ಅವರ ಜೊತೆ ನಮ್ಮ ಈಡಿಗ ಸಮುದಾಯದ ಯಾವುದೇ ಘರ್ಷಣೆ ಇಲ್ಲ. ಅವರು ನಮ್ಮವರೇ, ಸಚಿವರಿಂದ ನಮ್ಮ ಸಮಾಜಕ್ಕೆ ಯಾವುದೇ ಸಮಸ್ಯೆ ಇಲ್ಲ . ಬರುವ ಮೂರು ನಾಲ್ಕು ತಿಂಗಳಲ್ಲಿ ಕಾರಟಗಿಯಲ್ಲಿ ಈಡಿಗ ಸಮುದಾಯದ ಸಮಾವೇಶವನ್ನು ಹಮ್ಮಿಕೊಳ್ಳುತ್ತೇವೆ ಎಂದಿದ್ದಾರೆ. ಸಚಿವರ ಆರೋಗ್ಯ ಬೇಗ ಸುಧಾರಣೆ ಆಗಲಿ ಎಂದೂ ಹಾರೈಸಿದ್ದಾರೆ.

Related Articles

Leave a Reply

Your email address will not be published. Required fields are marked *

Check Also
Close
Back to top button
error: Content is protected !!