ಕಾರಟಗಿ

ಸರ್ಕಾರಿ ಜಾಗ ಒತ್ತುವರಿ ಮಾಡಿದವರ ವಿರುದ್ಧ ಕ್ರಮ, ನಿವೇಶನ ರಹಿತರ ಪರ ನಮ್ಮ ಹೋರಾಟ…….! ಮೌಲಪ್ಪ ನೂತನ ತಾಲೂಕಾಧ್ಯಕ್ಷರ ಭರವಸೆ

ವರದಿ ಸುಂದರರಾಜ್ BA ಕಾರಟಗಿ

ಸರ್ಕಾರಿ ಜಾಗ ಒತ್ತುವರಿ ಮಾಡಿದವರ ವಿರುದ್ಧ ಕ್ರಮ, ನಿವೇಶನ ರಹಿತರ ಪರ ನಮ್ಮ ಹೋರಾಟ…….! ಮೌಲಪ್ಪ ನೂತನ ತಾಲೂಕಾಧ್ಯಕ್ಷರ ಭರವಸೆ

​ಕಾರಟಗಿ: ದಲಿತ ಸೇನೆಯ ಕಾರಟಗಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಮೌಲಪ್ಪ ರಾಮತ್ನಾಳ್ ಅವರಿಗೆ ಬಸವಣ್ಣ ಕ್ಯಾಂಪ್ ಜನತಾ ಕಾಲೋನಿಯ ನಾಗರಿಕರು ಹಾಗೂ ಗೆಳೆಯರ ಬಳಗ ಶಾಲು ಹೊದಿಸಿ ಸನ್ಮಾನ ಮಾಡಿ ಗೌರವಿಸಿತು. ನಿರಂತರ ಜನಪರ ಕಾಳಜಿಯ ವ್ಯಕ್ತಿತ್ವ ಹೊಂದಿರುವ ಮೌಲಪ್ಪ ನವರು ತಾಲೂಕಾಧ್ಯಾಕ್ಷರಾಗಿದ್ದು ಹೆಮ್ಮೆಯ ಸಂಗತಿ ಎಂದು ಪ್ರಾಧ್ಯಾಪಕರಾದ ಶರಣಪ್ಪ ಚಲುವಾದಿ ಅವರು ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಗ್ರಾಮದ ದ್ರಾಕ್ಷಾಯಣಿ ಮಹಿಳೆ
ಜನತಾ ಕಾಲೋನಿಯಲ್ಲಿ ನಿವೇಶನ ನೀಡುವಂತೆ ಮನವಿ ಸಲ್ಲಿಸಿದರು,

ಹಲವು ವರ್ಷಗಳಿಂದ ನಾನು ಇದೇ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು ಸ್ವಂತ ಸೂರಿಲ್ಲದ ಜೀವನ ನಡೆಸುವುದು ಅತ್ಯಂತ ಕಷ್ಟಕರವಾಗಿದೆ ಬಸವಣ್ಣ ಕ್ಯಾಂಪ್‌ನ ಜನತಾ ಕಾಲೊನಿಯ ಸರ್ಕಾರದ ಆದೇಶದಂತೆ ಅರ್ಹರಿಗೆ 30X40 ಅಳತೆಯ ನಿವೇಶನಗಳನ್ನು ಹಂಚಿಕೆ ಮಾಡಬೇಕಾಗಿದ್ದರೂ ಕೆಲವು ವ್ಯಕ್ತಿಗಳು ತಮಗೆ ಅನುಕೂಲವಾಗುವ ರೀತಿಯಲ್ಲಿ ಅಕ್ರಮವಾಗಿ ಹೆಚ್ಚಿನ ಜಾಗವನ್ನು ಅತಿಕ್ರಮಿಸಿಕೊಂಡಿದ್ದಾರೆ,ಅಂಥವರಿಂದ ಅಕ್ರಮ ಜಾಗ ಒತ್ತುವರಿ ತೆರವುಗೊಳಿಸಿ ನಿವೇಶನ ರಹಿತ ಕುಟುಂಬಗಳಿಗೆ ನಿಯಮಾನುಸಾರ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು,

ಅಧ್ಯಕ್ಷರಾದ ಮೌಲಪ್ಪ ಅವರು ಮಾತನಾಡಿ “ಜನತಾ ಕಾಲೋನಿಯಲ್ಲಿ ಅರ್ಹರಿಗೆ ನಿವೇಶನ ಸೌಲಭ್ಯ ಸಿಗಬೇಕು. ಅಕ್ರಮವಾಗಿ ನಿವೇಶನಗಳನ್ನು ಒತ್ತುವರಿ ಮಾಡಿ ಮನೆಗಳ ನಿರ್ಮಾಣ ಮಾಡಿದವರ ವಿರುದ್ಧ ತಹಸೀಲ್ದಾರ್ ಹಾಗೂ ಪಂಚಾಯತಿ ಅಧಿಕಾರಿಗಳ ಗಮನಕ್ಕೆ ತಂದು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಿವೇಶನ ರಹಿತ ಗ್ರಾಮಸ್ಥರಿಗೆ ಕಾನೂನಾತ್ಮಕವಾಗಿ ನಿವೇಶನ ದೊರಕಿಸಿಕೊಡುವವರೆಗೂ ಹೋರಾಟ ಮಾಡಿ ನ್ಯಾಯ ಒದಗಿಸಿ ಕೊಡುತ್ತೇವೆ ಎಂದು ಭರವಸೆ ನೀಡಿದರು.


ಈ ಸಂದರ್ಭದಲ್ಲಿ ಊರಿನ ಹಿರಿಯರು ಹಾಗೂ ಮುಖಂಡರಾದ ಶ್ರೀ ಶಿವರೆಡ್ಡಿ, ಶ್ರೀ ಮಲ್ಲಪ್ಪ ಪೂಜಾರಿ, ಶ್ರೀ ನಾಗಪ್ಪ ನಾಗನಕಲ್, ಶ್ರೀ ಶರಣಪ್ಪ ಮಾಸ್ತರ ಉಪಸ್ಥಿತರಿದ್ದರು. ಅಲ್ಲದೆ, ಕಾರಟಗಿ ತಾಲೂಕು ದಲಿತ ಸೇನೆಯ ಉಪಾಧ್ಯಕ್ಷರಾದ ಶ್ರೀ ರಾಘವೇಂದ್ರ ಕೊಡ್ಲಿ, ಪ್ರಮುಖರಾದ ಶ್ರೀ ತಿಮ್ಮಣ್ಣ, ಬಸವರಾಜ್ ನಾಯಕ್,ಸೋಮನಾಥ, ಮೋಹನರಾವ್ ಪಿ, ಮಹಮ್ಮದ್ ಹಾಗೂ ಗ್ರಾಮದ ಯುವಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Related Articles

Leave a Reply

Your email address will not be published. Required fields are marked *

Check Also
Close
Back to top button
error: Content is protected !!