ಕಾರಟಗಿ

ಅಬಕಾರಿ ನಿಯಮ ಸಂಪೂರ್ಣ ಉಲ್ಲಂಘನೆ. ಬಸವಣ್ಣ ಕ್ಯಾಂಪ್ ಬಾರ್ ಪರವಾನಿಗೆ ರದ್ದು ಮಾಡಲು ಒತ್ತಾಯ

ವರದಿ ಸುಂದರರಾಜ್ BA ಕಾರಟಗಿ

ಅಬಕಾರಿ ನಿಯಮ ಸಂಪೂರ್ಣ ಉಲ್ಲಂಘನೆ. ಬಸವಣ್ಣ ಕ್ಯಾಂಪ್ ಬಾರ್ ಪರವಾನಿಗೆ ರದ್ದು ಮಾಡಲು ಒತ್ತಾಯ

ಕಾರಟಗಿ ಬಸವಣ್ಣ ಕ್ಯಾಂಪ್ : ಕರ್ನಾಟಕ ಅಬಕಾರಿ ನಿಯಮಗಳು 1968 ರ ನಿಯಮಗಳ ರೀತ್ಯಾ ಕರ್ನಾಟಕ ರಾಜ್ಯಾದ್ಯಂತ ದಿನಾಂಕ: 26.08.2009 ರಿಂದ ಚಾಲ್ತಿಗೆ ಬರುವಂತೆ ವಿವಿಧ ಸನ್ನದುಗಳ ವ್ಯವಹಾರದ ವೇಳೆಯನ್ನು ಇಲಾಖೆ ನಿಗಧಿಪಡಿಸಿ ಕಟ್ಟು ನಿಟ್ಟಿನ ಆದೇಶ ಹೊರಡಿಸಿರುತ್ತದೆ. ಆದರೆ ಅಬಕಾರಿ ಇಲಾಖೆ ಆದೇಶವನ್ನು ಗಾಳಿಗೆ ತೂರಿ ಕಾರಟಗಿ ತಾಲೂಕಿನ ಬಸವಣ್ಣ ಕ್ಯಾಂಪ್ ನ ಶ್ರೀ ಲಕ್ಷ್ಮೀ ವೆಂಕಟೇಶ್ವರ ಬಾರ್ ಅಂಡ್ ರೆಸಿಡೆನ್ಸಿ CL-7 ನಿಯಮ ಉಲ್ಲಂಘಿಸಿ ಮಧ್ಯ ಮಾರಾಟದಲ್ಲಿ ತೊಡಗಿರುವುದು ಕಂಡು ಬಂದಿದೆ, ಸ್ವಾರ್ಥಕ್ಕಾಗಿ ಕ್ಯಾಂಪಿನ ಜನರ ಹಿತಾಸಕ್ತಿ ಬದಿಗೊತ್ತಿ ಇಷ್ಟಬಂದ ಹಾಗೆ ಸಮಯದ ಪಾಲನಾ ಪ್ರಜ್ಞೆ ಇಲ್ಲದೆ ಮಧ್ಯ ಮಾರಾಟ ಮಾಡುತ್ತಿರುವುದರಿಂದ ಗ್ರಾಮದ ಸ್ವಾಸ್ಥ್ಯ ಹಾಳಾಗುತ್ತಿದ್ದು ,ನಿಯಮ ಉಲ್ಲಂಘಿಸಿದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಬಾರ್ ಅಂಡ್ ರೆಸಿಡೆನ್ಸಿ ಪರವಾನಿಗೆ ರದ್ದು ಮಾಡಬೇಕೆನ್ನುವ ಒತ್ತಾಯ ಕೇಳಿಬಂದಿದೆ,

ಈ ಕುರಿತು ಬಸವಣ್ಣ ಕ್ಯಾಂಪ್ ನ ಸಾಮಾಜಿಕ ಹೋರಾಟಗಾರ ಹಾಗೂ  ವರದಿಗಾರರಾದ ಸುಂದರರಾಜ್ ಆಗ್ರಹ ವ್ಯಕ್ತ ಪಡಿಸಿ ಮಾತನಾಡಿದ್ದಾರೆ. ಬಸವಣ್ಣ ಕ್ಯಾಂಪಿನ ಬಾರ್ ಮತ್ತು ರೆಸಿಡೆನ್ಸಿ ಸಂಪೂರ್ಣ ನಿಯಮ ಉಲ್ಲಂಘಿಸುತ್ತಿದೆ ವ್ಯವಹಾರದ ಅವಧಿಯ ಆದೇಶಗಳನ್ನು ಗಾಳಿಗೆ ತೂರಿ ಬಾರ್ ಬಾಗಿಲು ತೆರೆದು ಮಧ್ಯ ಮಾರಾಟ ಮಾಡುತ್ತಾ ಕ್ಯಾಂಪಿನ ಸ್ವಾಸ್ತ್ಯ ಹಾಳು ಮಾಡುತ್ತಿದೆ,ವ್ಯವಹಾರದ ಅವಧಿಯ ಅರಿವಿಲ್ಲದೆ ಇಷ್ಟ ಬಂದ ಹಾಗೆ ಬಾರ್ ಬಾಗಿಲು ತೆಗೆಯುವುದರಿಂದ ಯುವಕರು ಬೆಳ್ಳಂ ಬೆಳಗ್ಗೆ ಬಾರ್ ಗೆ ಹೋಗಿ ಮಧ್ಯವೇಶನಗಳಾಗಿ ಆರೋಗ್ಯವನ್ನು ಹದೆಗೆಡಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಯುವಕರನ್ನೇ ನಂಬಿಕೊಂಡಿರುವ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಬೀದಿ ಪಾಲಾಗುತ್ತಿವೆ. ನಿಯಮ ಉಲ್ಲಂಘಿಸುತ್ತಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ಬಾರ್ ಅಂಡ್ ರೆಸಿಡೆನ್ಸಿ ವಿರುದ್ಧ ರಾಜ್ಯ ಅಬಕಾರಿ ಆಯುಕ್ತರಿಗೆ ಹಾಗೂ ಗಂಗಾವತಿ ಅಬಕಾರಿ ನಿರೀಕ್ಷಕರಿಗೆ ದೂರು ಸಲ್ಲಿಸುತ್ತೇನೆ. ಅಬಕಾರಿ ಇಲಾಖೆ ನೀಡಿರುವ ಪರವಾನಿಗೆ ರದ್ದು ಮಾಡಿ ಕ್ಯಾಂಪಿನ ಸ್ವಾಸ್ಥ್ಯ ಕಾಪಾಡುವಂತೆ ಒತ್ತಾಯಿಸುತ್ತೇನೆ ಎಂದಿದ್ದಾರೆ.

 

 

Related Articles

Leave a Reply

Your email address will not be published. Required fields are marked *

Back to top button
error: Content is protected !!