ವಿದ್ಯಾರ್ಥಿಗಳ ಶಿಕ್ಷಣ. ಪರಿಶ್ರಮ. ಉಜ್ವಲ ಭವಿಷ್ಯ ಪಥದತ್ತ ಕಾರಟಗಿ ನ್ಯಾಶನಲ್ ಸ್ಕೂಲ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಶೇಕಡಾ 100 ಕ್ಕೆ 98 % ಫಲಿತಾಂಶ
ವರದಿ ಸುಂದರರಾಜ್ BA ಕಾರಟಗಿ

ವಿದ್ಯಾರ್ಥಿಗಳ ಶಿಕ್ಷಣ. ಪರಿಶ್ರಮ. ಉಜ್ವಲ ಭವಿಷ್ಯ. ಪಥದತ್ತ ಕಾರಟಗಿ ನ್ಯಾಶನಲ್ ಸ್ಕೂಲ್
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಶೇಕಡಾ 100 ಕ್ಕೆ 98 % ಫಲಿತಾಂಶ
ಕಾರಟಗಿ : ಗುರುವಾರ ಪ್ರಕಟಗೊಂಡ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶದಲ್ಲಿ ಪಟ್ಟಣದ ನ್ಯಾಷನಲ್ ಹೈಯರ್ ಪ್ರೈಮರಿ ಗ್ರೀನ್ ವ್ಯಾಲಿ ರೂರಲ್ ಪ್ರೌಢಶಾಲೆ 100ಕ್ಕೆ ಶೇಕಡ 98 % ರಷ್ಟು ಪಡೆಯುವ ಮೂಲಕ ತಾಲೂಕಿನ ಉತ್ತಮ ಶಾಲೆಯಾಗಿ ಹೊರ ಹೊಮ್ಮಿದೆ,ಪರೀಕ್ಷೆ ಬರೆದ ಶಾಲೆಯ 126 ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಲ್ಲಿ 123 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿಧ್ಯಾರ್ಥಿ ವಿನೋದಕುಮಾರ್ ವಿದ್ಯಾರ್ಥಿ 625ಕ್ಕೆ 612 ಅಂಕ ಪಡೆದು ( 98%) ಶಾಲೆಗೆ ಟಾಪರ್ ಆಗಿದ್ದಾನೆ. ಶ್ರದ್ದಾ ಶಶಿಧರ ಪಾಟೀಲ್ 625 ಕ್ಕೆ 597( 95.52% ) ಅಂಕ ಪಡೆದು ಶಾಲೆಗೆ ದ್ವಿತೀಯ ಸ್ಥಾನ.ಹರ್ಷಿತ ಬಸವರಾಜ 625 ಕ್ಕೆ 595 (95.20%) ಅಂಕ ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.ಕೀರ್ತನ ಬಸವಲಿಂಗಪ್ಪ 625ಕ್ಕೆ 591 ( 94.56%) ಅಂಕ ಪಡೆದು ಶಾಲೆಗೆ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಶಾಲೆಗೆ ಈ ನಾಲ್ಕು ವಿಧ್ಯಾರ್ಥಿಗಳು ಟಾಪರ್ ಗಳಾಗಿದ್ದಾರೆ.

ಉಳಿದ 35 ವಿದ್ಯಾರ್ಥಿಗಳು ಉನ್ನತ ಶ್ರೇಣಿ 63 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಉಳಿದ 25 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಯಲ್ಲಿ ಉತ್ತೀರ್ಣ ರಾಗಿದ್ದಾರೆ. ಶಾಲೆಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿ ಶುಭಾಶಯಗಳನ್ನು ತಿಳಿಸಿದ್ದಾರೆ




