ಕಾರಟಗಿ ಪ್ರತಿಷ್ಠಿತ ನ್ಯಾಷನಲ್ ಶಾಲೆಯಲ್ಲಿ ರೈತ ದಿನಾಚರಣೆ ಅನ್ನ ನೀಡುವ ರೈತ, ಗಡಿಯಲ್ಲಿನ ಸೈನಿಕ ಇಬ್ಬರೂ ದೇಶಕ್ಕೆ ಭದ್ರ ಬುನಾದಿ….. ಕೆ. ವೆಂಕಟರಾವ್
ವರದಿ ಸುಂದರರಾಜ್ BA ಕಾರಟಗಿ

ಕಾರಟಗಿ ಡಿಸೆಂಬರ್ 25: ಪಟ್ಟಣದ ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ರೈತರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಿವನಹಳ್ಳಿಯ ಸೊಗಡು ಹೆಸರಿನಲ್ಲಿ ರೈತ ದಿನಾಚರಣೆಯ ಕಾರ್ಯಕ್ರಮವನ್ನು ಶಾಲೆಯ ಬೇಬಿ ಕ್ಲಾಸ್, ಎಲ್ ಕೆ ಜಿ ಮತ್ತು ಯುಕೆಜಿ ವಿದ್ಯಾರ್ಥಿಗಳು ಮತ್ತು ಅವರ ಪಾಲಕರೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳು ಕಾರ್ಯಕ್ರಮದ ಹಲವು ವೇಷಭೂಷಣಗಳಿಂದ ಕಾರ್ಯಕ್ರಮಕ್ಕೆ ಮೆರಗು ತಂದರು. ರೈತರು,ಬಳೆಗಾರ,ಕೊರವಂಜಿ,ಅರ್ಚಕರು ಹಾಗೂ ಪಂಚಾಯತಿಯ ಅಧ್ಯಕ್ಷ ಮತ್ತು ಸದಸ್ಯರ ಸೇರಿದಂತೆ ಹಲವು ವೇಷ ಭೂಷಣಗಳೊಂದಿಗೆ ಮನರಂಜಿಸಿದರು.
ಅದೇ ರೀತಿ ವ್ಯವಸಾಯದ ಸಾಮಗ್ರಿಗಳಾದ ಎತ್ತು,ಬಂಡಿ,ನೇಗಿಲು,ಹೊಲ,ಗುಡಿಸಲು ಮನೆ,ಕೆರೆ ಬಾವಿಗಳನ್ನು ನಿರ್ಮಿಸುವುದರೊಂದಿಗೆ ಹಳ್ಳಿಯ ಸಂತೆಯ ಮಾರ್ಕೆಟ್,ಬೀಸುವುದು,ಕುಟ್ಟುವುದು, ರುಬ್ಬುವುದು ಹಾಗೂ ಅಡುಗೆ ಮಾಡುವ ದೃಶ್ಯಗಳೊಂದಿಗೆ ಹಳ್ಳಿಯ ಸಂಸ್ಕೃತಿ, ಸಂಪ್ರದಾಯ ಮತ್ತು ರೈತರ ಸಮಸ್ಯೆಗಳನ್ನೂ ಅರ್ಥಪೂರ್ಣವಾಗಿ ವಿವರಿಸಿದರು. ಹಾಗೂ ಹೊಲಗದ್ದೆಗಳಲ್ಲಿ ಭತ್ತದ ಸಸಿ ಮಡಿ, ರಾಗಿ,ಸಾಸ್ವಿ ಬೆಳೆ,ತರಕಾರಿ ಬೆಳೆ, ಸಿರಿಧಾನ್ಯಗಳ ಪ್ರದರ್ಶನ ಹಾಗು ಇನ್ನಿತರ ಬೆಳೆಗಳನ್ನು ಬೆಳೆದು ಪಾಲಕರಿಗೆ ಸಮಗ್ರ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಪ್ರಾರ್ಥನೆ ಮತ್ತು ರೈತ ಗೀತೆಯೊಂದಿಗೆ ಪ್ರಾರಂಭಿಸಿದ ವಿದ್ಯಾರ್ಥಿಗಳು, ಹಳ್ಳಿಯ ಸೊಗಡಿನ ಕುರಿತಾದ ವಿವಿಧ ಜಾನಪದ ಗೀತೆಗಳು ಮತ್ತು ಜನಪದ ನೃತ್ಯಗಳನ್ನು ಮಾಡಿಸಿ ಮನರಂಜಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷರಾದ ಕೆ ವೆಂಕಟರಾವ್ ಸರ್ ಅವರು ವಿದ್ಯಾರ್ಥಿಗಳಿಂದ ನಿರ್ಮಿಸಲಾದ ಗುಡಿಯಲ್ಲಿ ಪೂಜಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ನಮ್ಮ ಶಾಲೆ ಇಂತಹ ಕಾರ್ಯಕ್ರಮಗಳು ನೀಡುವಲ್ಲಿ ಮುಂಚೂಣಿಯಲ್ಲಿದ್ದು “ಹಳ್ಳಿಯ ಸೊಗಡು” ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಹಳ್ಳಿಯ ವಾತಾವರಣ,ಜನರ ಜೀವನಶೈಲಿ ಮತ್ತು ರೈತರ ವ್ಯವಸಾಯದ ಕುರಿತಾದ ಸಮಗ್ರ ಮಾಹಿತಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ರೈತರನ್ನು ನಾವು ಯಾವಾಗಲೂ ಗೌರಿಸಬೇಕು, ರೈತರ ಸುಖವೇ ದೇಶದ ಸಮೃದ್ಧಿ. ದೇಶಕ್ಕೆ ಅನ್ನ ನೀಡುವ ರೈತ,ಗಡಿ ಕಾಯುವ ಸೈನಿಕ ಇಬ್ಬರೂ ದೇಶದ ಆಧಾರ ಸ್ತಂಭಗಳಂತೆ ಆದ್ದರಿಂದ ಇವರಿಬ್ಬರನ್ನು ನಾವು ಯಾವಾಗಲೂ ಸ್ಮರಿಸಬೇಕೆಂದು ತಿಳಿಸಿದರು.ಅದೇ ರೀತಿ ನಗರೀಕರಣ ಮೂಲಕ ವ್ಯವಸಾಯದ ಕಡೆ ಯುವಕರ ಅಸಕ್ತಿ ಕೊರತೆಯಾಗಿದೆ. ಆದರೆ ಭಾರತ ಕೃಷಿ ಪ್ರಧಾನ ದೇಶವಾಗಿದ್ದು ದೇಶದ ಸುಮಾರು ಶೇಕಡ 60% ಜನರು ವ್ಯವಸಾಯವನ್ನು ಅವಲಂಬಿಸಿದ್ದು ದೇಶಕ್ಕೆ ಉತ್ತಮ ರೀತಿಯ ಆಹಾರ ನೀಡುವಲ್ಲಿ ರೈತರ ಪಾತ್ರ ಮುಖ್ಯವಾಗಿದೆ. ರೈತರು ತಾವು ಬೆಳೆಯುವ ಬೆಳೆ ಮತ್ತು ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ,ಹೆಚ್ಚಿನ ಜನರಿಗೆ ಉದ್ಯೋಗ ಕಲ್ಪಿಸುವುದೂ, ಮಣ್ಣಿನ ಫಲವತ್ತತೆ ಕಾಪಾಡಲು ಮತ್ತು ಉತ್ತಮ ಗುಣಮಟ್ಟದ ಬೆಳೆಗಳನ್ನು ಸಾವಯುವ ಗೊಬ್ಬರಗಳನ್ನು ಬಳಸಿ ಬೆಳೆದು ಜನರ ಆರೋಗ್ಯ ಕಾಪಾಡಬೇಕಾಗಿದೆ. ನಮ್ಮ ದೇಶದ ಆರ್ಥಿಕ ಅಭಿವೃದ್ಧಿ ರೈತರ ವ್ಯವಸಾಯದ ಮೇಲೆ ಅವಲಂಬನೆಯಾಗಿದೆ , ರೈತರು ದೇಶದ ಜನರಿಗೆ ಆಹಾರ ನೀಡುವಲ್ಲಿ ಮತ್ತು ಸೌಹಾರ್ದತೆ , ಸಂಸ್ಕೃತಿ ಕಾಪಾಡಲು ದೇಶದ ಬೆನ್ನೆಲುಬ ಎಂದು ಮಕ್ಕಳನ್ನು ಮತ್ತು ಪಾಲಕರನ್ನು ಉದ್ದೇಶಿಸಿ ಅರ್ಥಪೂರ್ಣ
ವಾಗಿ ಮಾತನಾಡಿದರು .
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು,ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಬೇಬಿ ಕ್ಲಾಸ್, ಎಲ್ ಕೆ ಜಿ ಯು ಕೆ ಜಿ ಪಾಲಕರು ಭಾಗವಹಿಸಿದ್ದರು ಕೊನೆಯಲ್ಲಿ ಪಾಲಕರಿಗೆ ವಿವಿಧ ಆಟಗಳನ್ನು ಆಡಿಸಿ ಬಹುಮನಗಳನ್ನು ನೀಡಿ ಕಾರ್ಯಕ್ರಮ ಮುಕ್ತಾಯ ಮಾಡಲಾಯಿತು.
ನ್ಯಾಷನಲ್ ಶಾಲಾ ಆಡಳಿತ ಮಂಡಳಿಯ ವತಿಯಿಂದ ಎಲ್ಲಾರಿಗೂ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು





