06 ದಶಕಗಳ ಕನಸು ನನಸಾದ ಶುಭ ಘಳಿಗೆ. ಬಡವರಿಗೆ ಹಕ್ಕು ಪತ್ರಗಳನ್ನು ವಿತರಿಸಿದ ತಹಸೀಲ್ದಾರರು
ವರದಿ ಸುಂದರರಾಜ್ BA

ಕಾರಟಗಿ ಡಿಸೆಂಬರ್ 23: ತಾಲೂಕಿನ ಬೂದಗುಂಪ ಗ್ರಾಮದ ಬಡ ಕೂಲಿ ಕಾರ್ಮಿಕರಿಗೆ ತಹಸೀಲ್ದಾರರು ಕಂದಾಯ ಇಲಾಖೆಯ ಆದೇಶದಂತೆ ಹಕ್ಕು ಪತ್ರಗಳನ್ನು ವಿತರಿಸಿದರು. ಗ್ರಾಮದ ಸರ್ವೇ ನಂ 134 ರಲ್ಲಿ ಸರ್ಕಾರಿ ಗಾಯರಾಣ ಜಮೀನಿನಲ್ಲಿ ಸುಮಾರು ಆರು ದಶಕಗಳಿಂದ ಮನೆ ನಿರ್ಮಿಸಿಕೊಂಡು ವಾಸವಿರುವ ಜನರು ಹಕ್ಕು ಪತ್ರಗಳಿಗಾಗಿ ಹಲವಾರು ವರ್ಷಗಳಿಂದ ಕಾಯುತ್ತಿದ್ದರು.ಕಳೆದ ಎರಡು ವರ್ಷಗಳಿಂದ ಕಾರಟಗಿ ತಹಸಿಲ್ದಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕುಮಾರಸ್ವಾಮಿ ಎಂ ಇವರು ಮುತುವರ್ಜಿ ವಹಿಸಿದ್ದರು. ಫಲಾನುಭವಿಗಳಿಗೆ ಭೂಕಂದಾಯ ಕಾಯ್ದೆಯ ಕಲಂ 94 (ಸಿ) ಅಡಿಯಲ್ಲಿ ಅರ್ಜಿ ಸಲ್ಲಿಸಿದ ಗ್ರಾಮದ ಬಡವರಿಗೆ ಮಾನ್ಯ ತಹಶಿಲ್ದಾರರಾದ ಕುಮಾರಸ್ವಾಮಿಯವರು ಹಕ್ಕು ಪತ್ರಗಳನ್ನು ನೀಡಿದರು.
ಒಟ್ಟು 59 ಫಲಾನುಭವಿ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ನೀಡಲಾಯಿತು.ಬೂದಗುಂಪಾ ಗ್ರಾಮದ ಅಂಬೇಡ್ಕರ್ ವೃತ್ತದ ಬಳಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಕಂದಾಯ ನಿರೀಕ್ಷಕರಾದ ಶ್ರೀಮತಿ ಸಂಗಮ್ಮ ಹಿರೇಮಠ, ಶ್ರೀ ಮಂಜುನಾಥ ರಾಠೋಡ ಗ್ರಾಮ ಆಡಳಿತ ಅಧಿಕಾರಿ ಬೂದಗುಂಪಾ, ಶ್ರೀ ವೆಂಕಟೇಶ ನಾಯಕ ಪಿಡಿಒ ಬೂದಗುಂಪಾ ರವರು ಪಾಲ್ಗೊಂಡಿದ್ದರು.




