ಕಾರಟಗಿಜಿಲ್ಲಾ ಸುದ್ದಿಗಳು

ಪ್ರತಿಯೊಬ್ಬ ನಾಗರಿಕ ಸಾಮಾಜಿಕ ಆರ್ಥಿಕ ಶೈಕ್ಷಣಿಕವಾಗಿ ಸಮಾನರಾಗಲು ಸಂವಿಧಾನವೆ ಭದ್ರ ಬುನಾದಿ ಎಂ ಕುಮಾರಸ್ವಾಮಿ

ಕಾರಟಗಿ ; 76ನೆಯ ಗಣರಾಜ್ಯೋತ್ಸವವನ್ನು ತಾಹಸಿಲ್ ಕಾರ್ಯಾಲಯ ನೀರಾವರಿ ಇಲಾಖೆ ಪೊಲೀಸ್ ಠಾಣೆ ಪಶು ಸಂಗೋಪನ ಇಲಾಖೆ ಸೇರಿದಂತೆ ವಿವಿಧಡೆ ಆಚರಿಸಲಾಯಿತು ಹಾಗೂ ತಾಲೂಕ ಆಡಳಿತ ವತಿಯಿಂದ ಕೆಪಿಎಸ್ಸಿ ಪ್ರೌಢಶಾಲಾ ಮೈದಾನದ ಶ್ರೀ ಸಿದ್ದೇಶ್ವರ ರಂಗಮಂದಿರದ ಮೈದಾನದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾರಟಗಿ ಪೊಲೀಸ್ ಠಾಣೆಯ ಪಿ ಐ ಸುಧೀರ್ ಬೆಂಕಿ ಪುರಸಭೆ ಮುಖ್ಯ ಅಧಿಕಾರಿ ಸುರೇಶ್ ಶೆಟ್ಟಿ ಸೇರಿದಂತೆ ಪುರಸಭೆ ಅಧ್ಯಕ್ಷರು ಸದಸ್ಯರುಗಳು ವಿವಿಧ ಸಂಘಟನೆಯ ಪದಾಧಿಕಾರಿಗಳು ಹಾಗೂ ರಾಜಕೀಯ ಮುಖಂಡರುಗಳು ಸೇರಿದಂತೆ ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ 76ನೆಯ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿದ ತಾಹಶಿಲ್ದಾರರಾದ ಎಂ ಕುಮಾರಸ್ವಾಮಿ ಅವರು ಮಾತನಾಡಿ,

 

ಭಾರತೀಯ ಗಣರಾಜ್ಯೋತ್ಸವ ಪ್ರತಿ ವರ್ಷದ ಜನವರಿ 26 ರಂದು ಆಚರಿಸಲಾಗುವ ದಿನಾಚರಣೆ. ಭಾರತದಲ್ಲಿ ಸoವಿಧಾನ ಜಾರಿಗೆ ಬಂದು ಭಾರತವು ಗಣರಾಜ್ಯವಾದದ್ದು ಜನವರಿ 26, 1950 ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.
ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ದೇಶಕ್ಕೆ ಅಪಾರ ಕೊಡುಗೆಯಾಗಿ ಸಂವಿಧಾನ ನೀಡಿದ್ದಾರೆ,ದೇಶದ ಪ್ರತಿಯೊಬ್ಬ ಪ್ರಜೆ ಸ್ವತಂತ್ರವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸಮಾನರಾಗುವ ನಿಟ್ಟಿನಲ್ಲಿ ಸಂವಿಧಾನದ ಭದ್ರ ಬುನಾದಿಯಾಗಿ ನಮಗೆಲ್ಲ ಮೂಲಭೂತ ಹಕ್ಕುಗಳನ್ನು ನೀಡಿದ್ದಾರೆ

ಶಾಸಕಾಂಗ ಕಾರ್ಯಂಗ ನ್ಯಾಯಾಂಗಗಳ ರಚನೆ ಮಾಡಿ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಬೇಕಾಗಿರುವ ಶಾಸನಗಳನ್ನು ಪ್ರಜೆಗಳೇ ರೂಪಿಸಿಕೊಳ್ಳುವಂತೆ ಪ್ರಜೆಗಳಿಗೆ ಅವಶ್ಯಕವಾಗಿರುವ ಶಾಸನಗಳನ್ನು ಕಾರ್ಯರೂಪಕ್ಕೆ ತರಲು ಕಾರ್ಯಾಂಗವನ್ನು ಮತ್ತು ಶಾಸಕಾಂಗ ಮತ್ತು ಕಾರ್ಯಾಂಗಗಳಲ್ಲಿರುವ ಪ್ರಜಾ ಹಿತಾಶಕ್ತಿಗೆ ಸಂವಿಧಾನಿಕ ಸಮಾನತೆಯ ಹಕ್ಕುಗಳಿಗೆ ಧಕ್ಕೆಯಾಗದಂತೆ ನ್ಯಾಯಾಂಗ ವ್ಯವಸ್ಥೆಯನ್ನು ನಿರ್ಮಾಣ ಮಾಡಿ ಪ್ರಪಂಚದಲ್ಲಿಯೇ ಅತ್ಯುತ್ತಮವಾದ ಪ್ರಜಾಪ್ರಭುತ್ವದ ಭದ್ರಬುನಾದಿಯಾಗಿ ಸಂವಿಧಾನವನ್ನು ರಚನೆ ಮಾಡಿದ್ದಾರೆ. ಪ್ರತಿ ವರ್ಷ ಗಣರಾಜ್ಯೋತ್ಸವವನ್ನು ಆಚರಣೆ ಮಾಡುವುದು ಮಾಡುವುದಕ್ಕೆ ಮಾತ್ರ ಸೀಮಿತವಾಗಿರಬಾರದು, ಪ್ರತಿಯೊಬ್ಬ ನಾಗರಿಕರು ಸಂವಿಧಾನದ ಮೂಲ ಆಶಯಗಳಿಗೆ ಗೌರವ ಕೊಟ್ಟು ಸಂವಿಧಾನವನ್ನು ಉಳಿಸಿಕೊಳ್ಳುವ ಕರ್ತವ್ಯ ಪ್ರತಿಯೊಬ್ಬ ನಾಗರಿಕರ ಮೇಲಿದೆ ಎಂದರು.

Related Articles

Leave a Reply

Your email address will not be published. Required fields are marked *

Back to top button