ಆರೋಪಗಳ ದಡ ಸೇರಿ ಬಂದ ಅಧಿಕಾರಿ, ವರ್ಗಾವಣೆಗೆ ತಡೆಯಾಜ್ಞೆ , ನೂರು ಫಾತಿಮಾ ಮೇಡಂ ಮತ್ತೆ ಬಂದ್ರು
ವರದಿ ಸುಂದರರಾಜ್ BA ಕಾರಟಗಿ

ಆರೋಪಗಳ ದಡ ಸೇರಿ ಬಂದ ಅಧಿಕಾರಿ, ವರ್ಗಾವಣೆಗೆ ತಡೆಯಾಜ್ಞೆ
ನೂರು ಫಾತಿಮಾ ಮೇಡಂ ಮತ್ತೆ ಬಂದ್ರು
ಕಾರಟಗಿ ; ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಕಾರಟಗಿ ಉಪ ವಿಭಾಗದ ಕಚೇರಿಯ ಅಧಿಕಾರಿಗಳ ಆರೋಪ ಪ್ರತ್ಯಾರೋಪ ದೂರು ಪ್ರತಿದೂರು ನಡುವೆ ಕಣ್ಣೀರಿನ ಹೊಳೆಯೇ ಹರಿದಿತ್ತು, ಒಂದು ಮಾತಿನಲ್ಲಿ ಹೇಳುವುದಾದರೆ ವಾಸನೆ ಇಲ್ಲದ ರಾಜಕೀಯವೂ ಎಂಟ್ರಿಯಾಗಿ ಅಧಿಕಾರಿಗಳ ಜಗಳಕ್ಕೆ ಬಣ್ಣವೂ ಹಚ್ಚಲಾಗಿತ್ತು ಎನ್ನುವ ಆರೋಪವು ಕೇಳಿ ಬಂದಿತ್ತು ಜೂನ್ 12 2025 ರಂದು ಕಚೇರಿಯ ನೌಕರರು ಮತ್ತು ಲೈನ್ ಮ್ಯಾನ್ ಗಳು ಜೆಇ ನೂರ್ ಫಾತಿಮಾ ಅವರನ್ನು ಕಾರಟಗಿ ಉಪ ವಿಭಾಗದ ಕಚೇರಿಯಿಂದ ವರ್ಗಾವಣೆ ಮಾಡಬೇಕು ಇಲ್ಲದಿದ್ದರೆ ಎಲ್ಲಾರು ಸಾಮೂಹಿಕ ವರ್ಗಾವಣೆ ಮಾಡಬೇಕು ಎಂದು ಪಟ್ಟು ಹಿಡಿದು ಬೀದಿಗಿಳಿದು ಹೋರಾಟವೂ ಮಾಡಿದರು, ಹಾಗೂ ದೂರನ್ನು ನೀಡಿದ್ದರು ದೂರಿಗೆ ಸ್ಪಂದಿಸಿದ ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಆಡಳಿತ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಪ್ರಧಾನ ವ್ಯವಸ್ಥಾಪಕರು ಆಡಳಿತಾತ್ಮಕ ಹಿತದೃಷ್ಟಿಯಿಂದ ಜೆ ಇ ನೂರ್ ಫಾತಿಮಾ ಅವರನ್ನು ಯಾದಗಿರಿ ವಿಭಾಗಕ್ಕೆ ಜುಲೈ 17, 2025 ರಂದು ವರ್ಗಾವಣೆಯನ್ನು ಮಾಡಿ ಆದೇಶ ಹೊರಡಿಸಿದ್ದರು. ಅಧಿಕಾರಿ ನೂರ್ ಫಾತಿಮಾ ಅವರು ವರ್ಗಾವಣೆಯಾಗಿದ್ದರಿಂದ ಕೆಇಬಿ ಲೈನ್ ಮ್ಯಾನ್ ಗಳು ಹಾಗೂ ನೌಕರರು ಸಂತಸ ಹಂಚಿಕೊಂಡಿದ್ದರು,
ಆದರೆ ಈಡೇರಿದ ಇವರ ಆಸೆ
ಆವಿಯಾಗಿ ಹೋಗಿದೆ ಜೆಇ ನೂರು ಫಾತಿಮಾ ಅವರು ವರ್ಗಾವಣೆಗೆ ತಡೆಯಾಜ್ಞೆ ತಂದು ಪುನಃ ಕಾರಟಗಿ ಉಪ ವಿಭಾಗ ಕೆಇಬಿ ಕಚೇರಿಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ, ನೂರು ಫಾತಿಮಾ ಅವರು ಕಚೇರಿಗೆ ಬಂದಿರುವುದು ಈ ಹಿಂದೆ ಅವರ ವಿರುದ್ಧ ಹೋರಾಟ ನಡೆಸಿದ ಲೈನ್ ಮ್ಯಾನ್ ಗಳು ಮತ್ತು ನೌಕರರಿಗೆ ಹಿನ್ನಡೆಯಾಗಿದೆ ಎನ್ನುವುದು ಸತ್ಯ ಆದರೆ ಕಾನೂನಿನಲ್ಲಿ ಆರೋಪಗಳಿಗೆ ಅವಕಾಶ ಇಲ್ಲ ಆದರೆ ಆಧಾರಗಳು ಬೇಕು ಯಾವುದೇ ಅಧಿಕಾರಿಗಳ ವಿರುದ್ಧ ಆರೋಪ ಕೇಳಿಬರುವುದು ಸಹಜ ಆದರೆ ಕೇಳಿ ಬಂದ ಆರೋಪಕ್ಕೆ ಸಾಕ್ಷಿ ಇಲ್ಲದಿದ್ದರೆ ಅದು ಆರೋಪವಾಗಿ ಮಾತ್ರ ಉಳಿಯುತ್ತದೆ, ಇಂತಹ ಆರೋಪಗಳು ಅಧಿಕಾರಿಗಳ ಆತ್ಮಸ್ಥೈರ್ಯ ಮತ್ತು ವೈಯಕ್ತಿಕ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ ಕೂಡ ಬೀರುವ ಸಂಭವವಿರುತ್ತದೆ,
ನೂರ್ ಫಾತಿಮಾ ಅವರು ವರ್ಗಾವಣೆಗೆ ತಡೆಯಾಜ್ಞೆ ತರುವಲ್ಲಿ ಸಫಲರಾಗಿದ್ದಾರೆ. ಒಟ್ಟಾರೆ ಹೇಳುವುದಾದರೆ ಸರ್ಕಾರಿಯ ಯಾವುದೇ ಕಚೇರಿಗಳ ಆಡಳಿತಾತ್ಮಕ ಹಿತದೃಷ್ಟಿಯಿಂದ ಯಾವುದೇ ಅಧಿಕಾರಿಗಳು ಮೇಲಾಧಿಕಾರಿಗಳ ಗಮನಕ್ಕೆ ತರದೆ ಸ್ವಂತ ನಿರ್ಧಾರಗಳನ್ನು ಕೈಗೊಳ್ಳುವುದಾಗಲಿ ಮತ್ತು ಕಚೇರಿಗೆ ಸಂಬಂಧಿಸಿದ ದಾಖಲೆಗಳನ್ನು ಸೋರಿಕೆ ಮಾಡುವುದಾಗಲಿ ಅಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡುವುದಾಗಲಿ ಮಾಡಬಾರದು, ಸಾರ್ವಜನಿಕ ಸೇವೆಯಲ್ಲಿ ಕಾರ್ಯನಿರ್ತರಾಗಿರುವ ಪ್ರತಿಯೊಬ್ಬ ಅಧಿಕಾರಿ ಸರ್ಕಾರದ ನಿಯಮಾವಳಿಗಳಿಗೆ ಅನುಸಾರವಾಗಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ, ಅದರಂತೆ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ಉಪ ವಿಭಾಗ ಕಾರಟಗಿ ಕಚೇರಿಯಲ್ಲಿ ಇನ್ನು ಮುಂದೆಯಾದರೂ ಅಧಿಕಾರಿಗಳು ನೌಕರರು ಲೈನ್ ಮ್ಯಾನ್ ಗಳು ಆರೋಪ ಮತ್ತು ಹೋರಾಟಗಳನ್ನು ಕೈಬಿಟ್ಟು ಸಾರ್ವಜನಿಕ ಸೇವೆಗಾಗಿ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಬೇಕಾಗಿದೆ, ಪ್ರತಿಯೊಬ್ಬ ನೌಕರರು ಕಂಪನಿಯ ಆದಾಯ ಮತ್ತು ಗೌರವ ಹೆಚ್ಚಿಸಬೇಕಾಗಿದೆ