ಡಾ. ಬಿ. ಆರ್ ಅಂಬೇಡ್ಕರ್ ಅಭಿರುದ್ದಿ ನಿಗಮದ ಉದ್ದೇಮಶಿಲ,ಮತ್ತು ನೇರ ಸಾಲ ಪಲಾನುಭವಿಗಳಿಗೆ ಅನ್ಯಾಯ.! ಸಂಜಯ ದಾಸ ಕೌಜಗೇರಿ ಆರೂಪ

ಕೊಪ್ಪಳ : ಜಿಲ್ಲೆಯ ಡಾ. ಬಿ. ಆರ್ ಅಂಬೇಡ್ಕರ್ ಅಭಿರುದ್ದಿ ನಿಗಮದಲ್ಲಿ ಬಗೆದಷ್ಟು ಬಯಲಿಗೆ ಬರುತ್ತಿವೆ ಹಗರಣ ಕೊಪ್ಪಳ ಜಿಲ್ಲೆಯ ಅಲೆಮಾರಿ ಸಮುದಾಯದ ಅಭಿವೃದ್ಧಿಗಾಗಿ ಇರುವ ಹಣವನ್ನು ಸಮುದಾಯದ ಪಲಾನುಭವಿಗಳಿಗೆ ನೀಡದೆ ಅಧಿಕಾರಿಗಳು ಏನು ಮಾಡಿದ್ದಾರೆ..? ಅಧಿಕಾರಿಗಳು ನಿರಂತರ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಹಾಗೂ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಸಮುದಾಯದ ಮುಖಂಡ ಹಾಗೂ ಅಧ್ಯಕ್ಷ ಸಂಜಯದಾಸ್ ಕೌಜಗೇರಿ ಅವರು ಆರೋಪಿಸಿದ್ದಾರೆ.
ನಮ್ಮ ಸಮುದಾಯದ 77ಪಲಾನುಭವಿಗಳು 2022-23 ನೇ ಸಾಲಿನಿಂದ ಅನುದಾನ ವಂಚಿತರಾಗಿ ಅನ್ಯಾಯಕ್ಕೆ ಒಳಗಗಿದ್ದಾರೆ, ಇದರಲ್ಲಿ ಸುಮಾರು ಎರಡರಿಂದ ಮೂರು ಉದ್ಯಮಶೀಲ ಮತ್ತು ನೇರ ಸಾಲ ಇವುಗಳಲ್ಲಿ 50 ಪಲಾನುಭವಿಗಳ ಕಡೆತ ಒಂದು ಕಡೆಯಾದರೆ. 20 ಪಲಾನುಭವಿಗಳ ಕಡೆತ ಒಂದು ಕಡೆ ಆಗಿದೆ ಇವುಗಳಲ್ಲಿ ಬಾರಿ ಭ್ರಷ್ಟಾಚಾರ ನಡೆದಿರುವ ಅನುಮಾನವಿದೆ ಎಂದು ಸಂಜಯ ದಾಸ ಕೌಜಗೇರಿ ಅವರು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಅಧಿಕಾರಿ ವಿರುದ್ಧ ದೊಡ್ಡ ಆರೋಪ ಮಾಡಿದ್ದಾರೆ.
ಅಲೆಮಾರಿ ಗಳ ಪ್ರತಿಯೊಂದು ಆಗು ಹೋಗುಗಳ ಕುರಿತಂತೆ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ, ಅಲೆಮಾರಿ ಜಿಲ್ಲಾ ಅನುಷ್ಠಾನ ಸಮಿತಿಯ ಸಭೆಯನ್ನು, ಪ್ರತಿ ತಿಂಗಳಿಗೊಮ್ಮೆ ನಡೆಸುವುದು ಹಾಗೂ ಪ್ರತಿಯೊಂದು ವಿಚಾರದ ಕುರಿತು ಸೂಕ್ತ ಮಾರ್ಗದರ್ಶನ ಜಿಲ್ಲಾ ಅಧಿಕಾರಿಗಳಿಂದ ಸಂಭಂದ ಪಟ್ಟ ಇಲಾಖೆಗೆ ವರದಿ ಕಳುಹಿಸುವುದು ಅದಕ್ಕೆ ತ್ವರಿತ ಪರಿಹಾರದ ವ್ಯವಸ್ಥೆ ಜಾರಿಯಾಗಬೇಕು,
ಸಂಜಯ ದಾಸ ಕೌಜಗೇರಿ.
ಅಲೆಮಾರಿ ಸಮುದಾಯದ ಕೊಪ್ಪಳ ಜಿಲ್ಲಾ ಅಧ್ಯಕ್ಷ
ಈ ಹಿಂದಿನ ಅಂಬೇಡ್ಕರ್ ಅಭಿರುದ್ದಿ ನಿಗಮದ ವ್ಯವಸ್ತಾಪಕ ಡಿ.ಎಂ ಕಾಳೆ ರವರು 30 ರಿಂದ 40 ಪಲಾನುಭವಿಗಳ ಪಟ್ಟಿ ಮಾಡಿ ಇವರ ಸೇವಾವಧಿಯಲ್ಲಿ ಜಿ,ಪಿ,ಎಸ್,ಮತ್ತು ಆರ್,ಟಿ,ಜಿ,ಎಸ್, ಮಾಡಿಸಿ ಪಲಾನುಭವಿಗಳ ಪಟ್ಟಿ ಮತ್ತು ಚೆಕ್ಕ್(HDFC ) ಬ್ಯಾಂಕಿಗೇ ಕಳುಹಿಸಿದ್ದರು. ಆದರೆ ಅವರು ನೀಡಿದ ಹಣ ಡ್ರಾ ಆಗದೆ ಚೆಕ್ ಬೌನ್ಸ್ ಆಗಿವೆ, ಈ ಹಿಂದಿನ ಜಿಲ್ಲಾಧಿಕಾರಿ ಸುರಳ್ಕರ್ ಅವರ ಅವಧಿ ಸಂದರ್ಭದಲ್ಲಿ ಆಗಬೇಕಾದ ಈ ಕೆಲಸ ಇನ್ನೂ ಆಗಿಲ್ಲ ಎನ್ನಲಾಗುತ್ತಿದೆ.

ಈಗಿರುವ ಜಿಲ್ಲಾಧಿಕಾರಿಗಳಾದ ಸುರೇಶ ಇಟ್ನಾಳ್ ಅವರಾದರು ನಮ್ಮ ಅಲೆಮಾರಿ ಸಮುದಾಯಕ್ಕೆ ನ್ಯಾಯ ಕೊಡುತ್ತಾರಾ ಇಲ್ಲವೋ ಎಂಬುದನ್ನು ಕಾದುನೋಡಬೇಕಿದೆ. ಹಿಂದಿನ ಅವಧಿಯಲ್ಲಿ 50 ಸಾವಿರ ನೇರ ಸಾಲ ಇತ್ತು, ಆದರೆ ಈಗ 1ಲಕ್ಷದ ವರಗೆ ಸಾಲ ಇದೆ. ಉದ್ಯಮಶೀಲ ಮತ್ತು ನೇರ ಸಾಲ ಈ ಅವಧಿಯಲ್ಲಿಯಾದರೂ ಅಲೆಮಾರಿ ಸಮುದಾಯದವರಿಗೆ ತಲುಪುತ್ತದೆಯೋ ಎಂದು ಫಲನುಭವಿಗಳು ಆತುರದಿಂದ ಕಾದು ಕುಳಿತಿರುತ್ತಾರೆ. ಆದರೆ ಈಗಿರುವ ಕೊಪ್ಪಳದ ಅಂಬೇಡ್ಕರ್ ಅಭಿರುದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಪುಷ್ಪಲತಾ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ನೇರ ಸಾಲದ ಮಾಹಿತಿ ಕೇಳಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದರು.
ಇನ್ನೂ ಮುಂದಿನ ದಿನಗಳಲ್ಲಿ ಅಲೆಮಾರಿ ಸಮುದಾಯದವರನ್ನು ಒಗ್ಗೂಡಿಸಿ ಅಂಬೇಡ್ಕರ್ ಅಭಿರುದ್ದಿ ನಿಗಮದ ವ್ಯವಸ್ಥಾಪಕರ ವಿರುದ್ಧ ಬಿದಿಗಿಳಿದು ಹೋರಾಟ ಮಾಡಬೇಕಾಗುತ್ತದೆ, ಇಂತಹ ಅಧಿಕಾರಿಗಳ ವಿರುದ್ದ ಜಿಲ್ಲೆಯ ಉಸ್ತುವಾರಿ ಸಚಿವರು, ಮತ್ತು ಜಿಲ್ಲಾಧಿಕಾರಿಗಳು ಕ್ರಮ ಜರುಗಿಸುತ್ತಾರ ಇಲ್ಲವೋ ಕಾದು ನೋಡಬೇಕಿದೆ, ಮುಂದಿನ ದಿನಗಳಲ್ಲಿ ಅಲೆಮಾರಿ ಸಮುದಾಯ ಹೊರಾಟ ಮಾಡಬೇಕಾಗುತ್ತದೆ ಎಂದು ಅಲೆಮಾರಿ ಸಮುದಾಯದ ಜಿಲ್ಲಾ ಅಧ್ಯಕ್ಷರಾದ ಸಂಜಯ ದಾಸ ಕೌಜಗೇರಿ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.