ರಾಜ್ಯದಲ್ಲಿ ರಸಗೊಬ್ಬರ ಕೊರತೆ; ಗಂಗಾವತಿಯಲ್ಲಿ ಸರ್ಕಾರದ ವಿರುದ್ಧ ಆರ್ಭಟಿಸಿದ ಬಿಜೆಪಿ

ಇಂದು ಗಂಗಾವತಿಯಲ್ಲಿ, ರೈತರಿಗೆ ರಸಗೊಬ್ಬರ ಕೊರತೆಯಿಂದ ಉಂಟಾಗಿರುವ ಸಂಕಷ್ಟ ಮತ್ತು ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ, ಭಾರತೀಯ ಜನತಾ ಪಕ್ಷದ ವತಿಯಿಂದ ಆಯೋಜಿಸಲಾದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಶಾಸಕರಾದ ಗಾಲಿ ಜನಾರ್ಧನ ರೆಡ್ಡಿ ಅವರು ಭಾಗವಹಿಸಿದರು.
ರೈತರಿಗೆ ಸಮಯೋಚಿತವಾಗಿ ಮತ್ತು ಸಮರ್ಪಕವಾಗಿ ರಸಗೊಬ್ಬರ ಒದಗಿಸಬೇಕೆಂದು ಸರ್ಕಾರದ ವಿರುದ್ಧ ಪ್ರತಿಭಟಿಸಲಾಯಿತು. ನಂತರ ಕೊಪ್ಪಳದಲ್ಲಿ ಜಿಲ್ಲಾಧಿಕಾರಿಗಳಾದ ಸುರೇಶ್ ಇಟ್ನಾಳ್ ಅವರನ್ನು ಭೇಟಿಯಾಗಿ ರೈತರಿಗೆ ಸಮರ್ಪಕ ಯೂರಿಯಾ ಗೊಬ್ಬರವನ್ನು ಒದಗಿಸಲು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.

ಕಾಂಗ್ರೆಸ್ ಸರ್ಕಾರದ ಅಸಮರ್ಥ ಆಡಳಿತ ಮತ್ತು ದುರ್ಬಲ ಯೋಜನೆಯಿಂದಾಗಿ ರಾಜ್ಯಾದ್ಯಂತ ರಸಗೊಬ್ಬರದ ತೀವ್ರ ಕೊರತೆ ಉಂಟಾಗಿದೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಕೃಷಿಕರ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ.
ಇದೇ ಸಂದರ್ಭದಲ್ಲಿ ಕೊಪ್ಪಳ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾದ ಬಸವರಾಜ್ ದಡೇಸೂಗೂರು, ರಾಜ್ಯ ಕಾರ್ಯದರ್ಶಿಗಳಾದ ಶರಣು ತಳ್ಳಿಕೇರಿ, ಗಂಗಾವತಿ ನಗರ ಮಂಡಲ ಅಧ್ಯಕ್ಷರಾದ ಚಂದ್ರಶೇಖರ್ ಹಿರೂರು, ಗ್ರಾಮೀಣ ಮಂಡಲ ಅಧ್ಯಕ್ಷರಾದ ದುರ್ಗಪ್ಪ ಕೆ ಅಗೋಲಿ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಮಾಜಿ ಸಂಸದರಾದ ಶಿವರಾಮೇಗೌಡ್ರು, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಬಸವರಾಜ್ ಕ್ಯಾವಟರ್, ಪಕ್ಷದ ಹಿರಿಯ ಮುಖಂಡರಾದ ವಿರೂಪಾಕ್ಷಪ್ಪ ಸಿಂಗನಾಳ್, ಗಿರೇಗೌಡ್ರು, ತಿಪ್ಪೇರುದ್ರಸ್ವಾಮಿ, ಅಮರ ಜ್ಯೋತಿ ನರಸಪ್ಪ, ಜೋಗದ ಹನುಮಂತಪ್ಪ ನಾಯಕ್, ಜೋಗದ ವೀರಭದ್ರಪ್ಪ ನಾಯಕ್, ರಮೇಶ್ ಚೌಡ್ಕಿ, ಯಮನೂರ್ ಚೌಡ್ಕಿ, ಮನೋಹರ ಗೌಡ ಹೇರೂರು ಹಾಗೂ ಅನೇಕ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.