ಪ್ರತಿಮೆಗಳ ಅನಾವರಣದಿಂದ ಯುವಕರಿಗೆ ಸ್ಪೂರ್ತಿ ದೊರೆಯಲಿದೆ,,! ಗೃಹ ಸಚಿವ ಡಾ.ಜಿ.ಪರಮೇಶ್ವರ..

ಕೊಪ್ಪಳ /ಕುಕನೂರು : ದೇಶಕ್ಕಾಗಿ, ಸಮಾಜದ ಸ್ವಾಸ್ಥಕ್ಕಾಗಿ ಬದುಕಿದ ಮಹನೀಯರ, ಮಹಾನ್ ನಾಯಕರ ಆದರ್ಶಗಳು ನಮಗೆ ಪ್ರಸ್ತುತವಾಗಿದ್ದು ಅಂತವರ ಪ್ರತಿಮೆಗಳನ್ನು ಲೋಕಾರ್ಪಣೆ ಮಾಡಿದಾಗ ಇಂದಿನ ಯುವ ಪೀಳಿಗೆಗೆ ಸ್ಪೂರ್ತಿ ದೊರೆಯಲು ಸಹಕಾರಿಯಾಗಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.

ಅವರು ರವಿವಾರದಂದು ತಾಲೂಕಿನ ಶಿರೂರ ಪುನರ್ವಸತಿ ಗ್ರಾಮದಲ್ಲಿ ಜಲ ಸಂಪನ್ಮೂಲ ಇಲಾಖೆಯ ಕರ್ನಾಟಕ ನೀರಾವರಿ ನಿಗಮ ನಿಯಮಿತ ವತಿಯಿಂದ ಮಾಜಿ ಮಂತ್ರಿಗಳಾದ ದಿ.ಕೆ.ಎಚ್ ಪಾಟೀಲ್ ಇವರ ಮೂರ್ತಿ ಅನಾವರಣಗೊಳಿಸಿ ನಂತರ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪ್ರತಿಮೆಯಿಂದ ಬಡವರ ಕುರಿತು ಹೊಂದಿದ ಕಾಳಜಿ, ದೇವರಾಜ ಅರಸು ಅವರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ವ್ಯಕ್ತಿತ್ವ, ಅಂಬೇಡ್ಕರ ಮೂರ್ತಿಯಿಂದ ಸಮಾನತೆ ಬಗ್ಗೆ ಮಾಡಿದ ಹೋರಾಟ ಹೀಗೆ ಹತ್ತು ಹಲವಾರು ಮಹನೀಯರ ಮೂರ್ತಿಯನ್ನು ನೋಡಿದರೇ ಯುವಕರಿಗೆ ಸ್ಪೂರ್ತಿ ಬರುತ್ತದೆ ಎಂದರು.

ಆದರಂತೆ ಎಚ್.ಕೆ ಪಾಟೀಲ್ ಅವರು ರಾಜಕೀಯದ ಸಂಘರ್ಷದ ಹಾದಿಯಲ್ಲಿ ಜೀವನ ಉದ್ದಕ್ಕೂ ಹೋರಾಟ ಮಾಡಿಕೊಂಡು ಬಂದಿದ್ದಾರೆ. ರಾಜಕೀಯ ಸಂಘರ್ಷದಿಂದ ಅವರು ಎಂದೋ ಮುಖ್ಯಮಂತ್ರಿಯಾಗಬೇಕಿತ್ತು ಎಂದರು.
ಶಿರೂರು ಗ್ರಾಮದ ಪುನರ್ವಸತಿ ಯೋಜನೆಗೆ 240ಕೋಟಿ ಖರ್ಚಾಗಿದೆ. ಇದಲ್ಲದೇ ಶೈಕ್ಷಣಿಕವಾಗಿ ಇಲ್ಲಿನ ವಿದ್ಯಾರ್ಥಿಗಳಿಗೆ ಯಾವುದೇ ಕೊರತೆ ಇಲ್ಲದಂತೆ ಇಂಜನೀಯರಿಂಗ್ ಕಾಲೇಜು ಸಹ ತಂದಿದ್ದಾರೆ ಇಲ್ಲಿನವರು ಯಾವುದೇ ಮಹಾ ನಗರ ಕಡೆಗೆ ಓಡುವುದು ಬೇಡ ಎನ್ನುವ ದೃಷ್ಟಿಯಿಂದ ಶೈಕ್ಷಣಿಕವಾಗಿ ಎಲ್ಲಾ ಸವಲತ್ತುಗಳನ್ನು ಒದಗಿಸಿದ್ದಾರೆ ಈ ಕಾರ್ಯ ಶ್ಲಾಘನೀಯ ಎಂದರು.
5 ಗ್ಯಾರಂಟಿ ಯೋಜನೆಗೆ 52 ಸಾವಿರ ಕೋಟಿ ಖರ್ಚಾಗ್ತಿದೇ ಎಂದರೇ ಹುಡುಗಾಟಿಕೆ ಮಾತಲ್ಲಾ, ನಮ್ಮ ಯೋಜನೆ ಮಾಡಿದಾಗ ದೆಹಲಿಯವರೆಗೆ ಟೀಕೆ ಟಿಪ್ಪಣೆ ಇದ್ದವು, ಆದರೆ ಇಂದು ಅವರೇ ನಮ್ಮ ಯೋಜನೆ ಕಾಫಿ ಮಾಡಿದ್ದಾರೆ ಎಂದು ಚಾಟಿ ಬೀಸಿದರು.
ಎರಡು ವರ್ಷದಲ್ಲಿ ಕಾಂಗ್ರೆಸ್ ಸರಕಾರ ನೀರಾವರಿ, ರಸ್ತೆ, ಕಟ್ಟಡ, ಗ್ರಾಮೀಣ ಪ್ರದೇಶದ ನರೇಗಾ ಉತ್ತಮ ಮಟ್ಟದಲ್ಲಿ ಅಭಿವೃದ್ದಿ ಹೊಂದಿವೆ. ಆದರೆ ಸಮಯಕ್ಕೆ ಕೇಂದ್ರ ಸರಕಾರ ಹಣ ನೀಡುವುದಿಲ್ಲಾ ಎಂದು ಆರೋಪಿಸಿದ ಅವರು ಯೋಜನೆಗಳಿಂದ ರಾಜ್ಯ ಸರಕಾರ ಆರ್ಥಿಕವಾಗಿ ದೀವಾಳಿಯಾಗಿದೆ ಎನ್ನುತ್ತಾರೆ ಅದು ಎಂದು ದಿವಾಳಿಯಾಗುವುದಿಲ್ಲಾ ಎಂದು ಸ್ಪಷ್ಟವಾಗಿ ನುಡಿದರು.
ನಮ್ಮದು ಜಿ.ಎಸ್.ಟಿ ಯಲ್ಲಿ ಎರಡನೇ ಸ್ಥಾನ ಹಾಗೂ ಜಿ.ಡಿಪಿಯಲ್ಲಿ ಮೂರನೇ ಸ್ಥಾನದಲ್ಲಿದ್ದೇವೆ. ಇದು ಸಿದ್ರಾಮಯ್ಯ ಒಳ್ಳೆಯ ಆಡಳಿತ ನಡಸ್ತಾ ಇರೋದಕ್ಕೆ ಸಾಕ್ಷಿ ಎಂದರು.
ಎಚ್.ಕೆ ಪಾಟೀಲ್ ಅವರಿಗೆ ರಾಜ್ಯದಲ್ಲಿ ಯಾವುದೇ ಇಲಾಖೆಯ ಜವಾಬ್ದಾರಿ ಕೊಟ್ಟರು ಅದನ್ನು ಸಮರ್ಪಕವಾಗಿ ನಿಭಾಯಿಸಿಕೊಂಡು ಹೋಗುವ ಆದರ್ಶ ವ್ಯಕ್ತಿ ಎಚ್.ಕೆ ಪಾಟೀಲರು ಎಂದರು.
ಕರ್ನಾಟಕ ಕಾನೂನು :
ಕರ್ನಾಟಕದಲ್ಲಿ ಕಾನೂನು ವ್ಯವಸ್ಥೆ ಸುಲಲಿತವಾಗಿದೆ. ಕಾನೂನು ವ್ಯವಸ್ಥೆ ಹದಗೆಟ್ಟಿದೆ ಎಂದು ಯಾರು ಏನೇ ಹೇಳಿದರು, ನಮ್ಮ ಕಾನೂನು ವ್ಯವಸ್ಥೆ ರಾಜ್ಯದಲ್ಲಿ ನಂ.1 ಇದೆ ಎಂದು ಸ್ಪಷ್ಟವಾಗಿ ಹೇಳಿದರು.
ನಂತರ ಕರ್ನಾಟಕ ಸರಕಾರದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೇ ಮಾತನಾಡಿ ಪಾರದರ್ಶಕ ಆಡಳಿತ ನೀಡಿದ ಕೆ.ಎಚ್ ಪಾಟೀಲ್ ಅವರ
ಇಂತಹ ಪುತ್ಥಳಿಯಿಂದ ಆದರ್ಶ ಉಳಿಯುತ್ತವೆ, ಇಂದಿನ ದಿನಗಳಲ್ಲಿ ಹಿರಿಯರ ಬಗ್ಗೆ ಗೌರವ ಉಳಿದಿಲ್ಲಾ.
ಕೆ.ಎಚ್ ಪಾಟೀಲ್ ರಿಗೆ ದೂರ ದೃಷ್ಟಿ ಇತ್ತು ಕೃಷಿ, ಸಹಕಾರಿ, ಗ್ರಾಮೀಣಾಭಿವೃದ್ದಿಯ ಬಗ್ಗೆ ಕಾಳಜಿ ಹೊಂದಿದವರಾಗಿದ್ದರು.
ಅಂತಂಹ ಮಹಾನ್ ವ್ಯಕ್ತಿಗಳ ಮೂರ್ತಿ ಮಾಡುವಲ್ಲಿ ರಾಯರಡ್ಡಿಯವರ ಪರಿಶ್ರಮ ಸಾಕಷ್ಪಿದೆ ಎಂದು ಶ್ಲಾಘನೆ ವ್ಯಕ್ತ ಪಡಿಸಿದರು.
ಸಿದ್ರಾಮಯ್ಯ ನೇತೃತ್ವದ ಸರಕಾರ ಬಡವರ, ಕಾರ್ಮಿಕರ, ಮಹಿಳೆಯರ ಪರ ಯೋಜನೆಗಳನ್ನು ಜಾರಿ ಮಾಡಿ ಎಲ್ಲಾ ವರ್ಗದವರಿಗೆ ಸಮರ್ಪಕವಾಗಿ ಯೋಜನೆಗಳನ್ನು ಮುಟ್ಟಿಸುತ್ತಿದೆ.
ಮಹಿಳೆಯರಿಗೆ ಬಸ್ ಪ್ರೀಯಾದಾಗಿನಿಂದ ಪುರುಷರಿಗೆ ಕಾಲಿಡಲು ಜಾಗೆಯು ಇಲ್ಲಾ ಎಂದು ಹಾಸ್ಯಾಸ್ಪದವಾಗಿ ಮಾತನಾಡಿದರು. ಗ್ಯಾರಂಟಿ ಯೋಜನೆಗಳಿಗೆ ಪ್ರತಿ ವರ್ಷ 58ಸಾವಿರ ಕೋಟಿ ಖರ್ಚಾಗುತ್ತಿದೆ. ಒಟ್ಟಾರೇ ಸಿದ್ರಾಮಯ್ಯ ಸರಕಾರ ಜನಪರ ಅಭಿವೃದ್ದಿ ಹೊಂದಿದೆ ಎಂದರು.
ರಾಯರಡ್ಡಿ ಯಲಬುರ್ಗಾ ಕ್ಷೇತ್ರ ಅಭಿವೃದ್ದಿ ಮಾಡಿದಷ್ಟು ನಮ್ಮ ಭಾಗದಲ್ಲಿ ಆಭಿವೃದ್ದಿ ಆಗಿಲ್ಲಾ, ರಾಯರಡ್ಡಿ ಕ್ರೀಯಾಶೀಲ ಸಮಾಜಪರ ಚಿಂತನೆಯುಳ್ಳ ವ್ಯಕ್ತಿ ಎಂದು ರಾಯರಡ್ಡಿಯವರ ಗುಣಗಾನ ಮಾಡಿದರು.
ರಾಯರಡ್ಡಿಯವರಿಗೆ ಕೆಲಸ ತರುವವುದು ಹಾಗೂ ಮಾಡಿಸುವ ಕಲೆ ಇದೆ, ಆದರೆ ಅದು ನಮಗೆ ಬರುವುದಿಲ್ಲಾ ಎಂದರು. ಮುಖ್ಯವಾಗಿ ಕೆ.ಎಚ್ ಪಾಟೀಲರ ಆದರ್ಶ ಯುವಕರಿಗೆ ಸ್ಪೂರ್ತಿಯಾಗಲಿ ಎಂದರು.
ನಂತರ ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್
ಮಾತನಾಡಿ ಉತ್ತರ ಕರ್ನಾಟಕದ ಈ ಭಾಗದಲ್ಲಿ ಯಲಬುರ್ಗಾ ಕ್ಷೇತ್ರ ಅಭಿವೃದ್ದಿಯಲ್ಲಿ ಮಂಚೂಣಿಯಲ್ಲಿದೆ.
ದೇಶದಲ್ಲಿ ಬಡತನ 27% ಇದ್ದಿದ್ದು 6% ತಲುಪಿದೆ. ರಾಜ್ಯದಲ್ಲಿ ಬಡತನ ಶೇ 0% ಗೆ ತಲುಪಿ ಬಡತನ ನಿರ್ಮೂಲನೆಯಾಗಿದೆ. ಯಾರು ಯಾರ ಮನೆಗೆ ಯಾವುದಕ್ಕೂ ಹೋಗದಂತೆ ಜೀವನ ಸಾಗಿಸುತ್ತಿದ್ದಾರೆ ಎಂದರು.
ನಂತರ ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಬೋಸರಾಜ ಇವರು ಮಾತನಾಡಿದರು.
ಕಾರ್ಯಕ್ರಮದ ಘನ ಉಪಸ್ಥಿತಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಕುಷ್ಟಗಿ ಶಾಸಕ ದೊಡ್ಡನಗೌ ಪಾಟೀಲ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಂಸದ ಕೆ.ರಾಜಶೇಖರ ಹಿಟ್ನಾಳ, ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ, ಕೃಷ್ಣಮೂರ್ತಿ ಬಿ. ಕುಲಕರ್ಣಿ, ರಾಜೇಶ್ ಅಮ್ಮಿನಭಾವಿ, ಹನಮಂತಗೌಡ ಪಾಟೀಲ್, ಸತ್ಯನಾರಾಯಣ ಹರಪನಹಳ್ಳಿ, ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ, ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಕನೀನಿನಿ ನೀರಾವರಿ ಕೇಂದ್ರ ವಲಯ ಮುನಿರಾಬಾದನ ಮುಖ್ಯ ಇಂಜೀನಿಯರ್ ಎಲ್. ಬಸವರಾಜ, ಐ. ಪ್ರಕಾಶ, ರಾಘವೇಂದ್ರಚಾರ್ಯ ಜೋಶಿ ಹಾಗೂ ಶಿರೂರು ಗ್ರಾಮ ಪಂಚಾಯತ್ ಅಧ್ಯಕ್ಷರು, ಸರ್ವ ಸದಸ್ಯರು, ಯೋಜನಾ ಅನುಷ್ಠಾನ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಮತ್ತು ಗ್ರಾಮದ ಗುರು-ಹಿರಿಯರು ಉಪಸ್ಥಿತರಿದ್ದರು.
ಬಾಕ್ಸ್…
2013ರಲ್ಲಿ ಸಿದ್ರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಈ ಭಾಗದ ಅಭಿವೃದ್ದಿ ಗೆ ಹಣ ನೀಡಿದ್ದಾರೆ ಈ ಭಾಗದ ಮುಳಗಡೆ ಪ್ರದೇಶದಲ್ಲಿ ಕೇಲವೊಬ್ಬರಿಗೆ 50ಲಕ್ಷದ ವರೆಗೂ ಬಂದಿದೆ. ಜೊತೆಗೆ ನೂತನ ಪುನರ್ವಸತಿ ಗ್ರಾಮಗಳ ಅಭಿವೃದ್ದಿಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯ, ಸೌಲಭ್ಯ ಒದಗಿಸಲಾಗಿದೆ ಎಂದರು.
ಕೆ.ಎಚ್ ಪಾಟೀಲ್ ಈ ಭಾಗದ ಜನತೆ ಕಂಡಂತ ಧೀಮಂತ ನಾಯಕರು, ಇವರು ನೇರ ವ್ಯಕ್ತಿತ್ವದವರು ಇವರು ಉತ್ತರ ಕರ್ನಾಟಕಕ್ಕೆ ಅಪಾರ ಕೊಡುಗೆ ನೀಡಿದವರಾಗಿದ್ದಾರೆ ಇಂತಹ ಸಜ್ಜನ ರಾಜಕಾರಣಿಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದರು.
ಜಿ.ಪರಮೇಶ್ವರ ಸರಳ ವ್ಯಕ್ತಿತ್ವದ ವ್ಯಕ್ತಿ ಇವರು ಹಾಗೂ ದೇಶಪಾಂಡೇ, ಬೋಸರಾಜ, ಶಿವರಾಜ ತಂಗಡಗಿ, ರಾಜಶೇಖರ್ ಹಿಟ್ನಾಳ, ಬಸವರಾಜ ಹೊರಟ್ಟಿ, ಇವರಲ್ಲೆರ ಸಮ್ಮಖದಲ್ಲಿ ಮೂರ್ತಿ ಲೋಕಾರ್ಪಣೆ ಕಂಡಿರುವುದು ಸಂತಸ ತಂದಿದೆ ಎಂದು ರಾಯರಡ್ಡಿ ಹೇಳಿದರು.
ಮಾನ್ಯ ಮಂತ್ರಿಯವರ ಅನುಮತಿಯೊಂದಿಗೆ ಇಲ್ಲಿಗೆ ಒಂದು ಜೂನಿಯರ್ ಕಾಲೇಜು ಮಾಡಿಕೊಡುತ್ತೇನೆ ಎಂದು ಭರವಸೆ ಮಾತುಗಳನ್ನಾಡಿದರು.
ಸಿದ್ರಾಮಯ್ಯನವರು ಜನಪರ ಆಡಳಿತದ ವ್ಯಕ್ತಿ, ನಮ್ಮ ಸರಕಾರದಲ್ಲಿ ಹಣಕ್ಕೆ ಯಾವುದೇ ಕೊರತೆ ಇಲ್ಲಾ, ಜನರಿಗೆ ನೀಡಿರುವ ಯಾವುದೇ ಉಚಿತ ಯೋಜನೆ ಹಾಗೂ ಸ್ಕೀಂಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲಾ, ಇದಕ್ಕಾಗಿ 1ಲಕ್ಷ 2 ಸಾವಿರ ಕೋಟಿ ಹಣ ನೀಡುತ್ತಿದ್ದೇವೆ.
ಬಸವರಾಜ ರಾಯರಡ್ಡಿ.
ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರು ಹಾಗೂ ಶಾಸಕ
ಕೋಟ್..
ರೈತನ ಜೀವನ ಹಸನಾಗಬೇಕು:
ರೈತ ತಾನು ಬೆಳೆದ ಬೆಳೆಗಳಿಗೆ ತಾನೇ ಬೆಲೆ ಕಟ್ಟುವ ಸಮಯ ಬಂದಾಗ ರೈತ ಅಭಿವೃದ್ದಿಯಾಗಲೂ ಸಾಧ್ಯ.
ಎಚ್. ಕೆ ಪಾಟೀಲ್.
ಪ್ರವಾಸೋದ್ಯಮ ಸಚಿವ