ಕೊಪ್ಪಳದಲ್ಲಿ ಬಿಜೆಪಿ ಗೆದ್ದರೆ ಅದು ಜನಾರ್ಧನ ರೆಡ್ಡಿ ಅವರಿಂದ ಮಾತ್ರ
ಕೊಪ್ಪಳ ಫಲಿತಾಂಶ ಲೆಕ್ಕಾಚಾರ ಸುಲಭವಾಗಿಲ್ಲ ಗೌಪ್ಯತೆ ಕಾಪಾಡಿಕೊಂಡ ಮತದಾರ
ವಿಶ್ಲೇಷಣಾ ವರದಿ: ಗೋವಿಂದರಾಜ್ ಬೂದಗುಂಪಾ
ಕೊಪ್ಪಳ ಲೋಕಸಭಾ ಚುನಾವಣೆಯ ಫಲಿತಾಂಶ ಯಾರ ಗೆಲುವು ಅನ್ನುವುದು ಅಷ್ಟು ಸುಲಭದ ಮಾತಲ್ಲ, ಏಕೆಂದರೆ ಪ್ರತಿಭಾರಿಯ ಚುನಾವಣೆಗಿಂತಲೂ ಈ ಬಾರಿಯ ಲೋಕಸಭಾ ಚುನಾವಣೆ ತುಂಬಾ ವಿಭಿನ್ನವಾಗಿ ನಡೆದಿದೆ. ಯಾವುದೇ ರೀತಿಯಲ್ಲಿ ಸರಿಯಾದ ಲೆಕ್ಕಚಾರ ಮಾಡಲು ಆಗುತ್ತಿಲ್ಲ, ಅಷ್ಟರಮಟ್ಟಿಗೆ ಮತದಾರರು ತಮ್ಮ ಗೌಪ್ಯತೆಯನ್ನು ಕಾಪಾಡಿಕೊಂಡಿದ್ದಾರೆ.
ಗ್ಯಾರೆಂಟಿ ಮಾಡಿದ ಕೆಲಸ ಅದ್ಭುತ:
ರಾಜ್ಯ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿ ಕರ್ನಾಟಕದ ಮಹಿಳೆಯರಿಗೆ ಹೊಸ ಉತ್ಸಾಹವನ್ನು ತುಂಬಿದೆ,
ಗ್ಯಾರಂಟಿ ಯೋಜನೆ ಲೋಕಸಭಾ ಚುನಾವಣೆ ಫಲಿತಾಂಶದ ಮೇಲು ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ, ಕೊಪ್ಪಳ ಲೋಕಸಭೆಯಲ್ಲಿ ಸುಮಾರು 20 ಸಾವಿರ ಮತಗಳು ಗ್ಯಾರಂಟಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಲಾಗಿರುವುದು ಖಚಿತ. ಕಾಂಗ್ರೆಸ್ ಕೂಡ ಗ್ಯಾರಂಟಿ ಯೋಜನೆಗಳಿಂದ ನಮಗೆ ಲಾಭ ಆಗುತ್ತೆ ಮತ್ತು ಗೆಲ್ಲುತ್ತೇವೆ ಅನ್ನುವ ಉಮ್ಮಸಿನಲ್ಲಿ ಇದ್ದಾರೆ, ಆದರೆ ಯಾವುದೇ ಕಾರಣಕ್ಕೂ ಯಾರು ಗೆಲ್ಲುತ್ತಾರೆ ಅನ್ನುವದು ಮಾತ್ರ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ನಿಖರವಾಗಿ ಆಗಲಿ ಅಥವಾ ಅಂದಾಜು ಕೂಡ ಮಾಡಲಾಗುತ್ತಿಲ್ಲ, ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯನ್ನು ಗಮನಿಸುವದಾದರೆ ಎರಡು ಪಕ್ಷಕ್ಕೂ ಗೆಲುವು ಬಿಸಿ ತುಪ್ಪ ಅಂತಲೇ ಹೇಳಬಹುದು, ಒಂದು ವೇಳೆ ಯಾರು ಗೆದ್ದರು ಐದರಿಂದ ಹತ್ತು ಸಾವಿರ ಮತಗಳ ಅಂತರದಿಂದ ಮಾತ್ರ ಗೆಲ್ಲಬಹುದು ಅನ್ನುವ ಮಾತುಗಳು ಕೇಳಿ ಬರುತ್ತಿವೆ.
ಜನಾರ್ದನ ರೆಡ್ಡಿ ಫ್ಯಾನ್ ಕ್ಲಬ್ ಮತ್ತು ಅವರ ಸ್ಟಾರ್ ಪ್ರಚಾರ ಬಿಜೆಪಿಗೆ ಉಸಿರು:
ಕಲ್ಯಾಣ ರಾಜ್ಯ ಪ್ರಗತಿಪಕ್ಷಸ್ಥ ಸ್ಥಾಪನೆ ಮಾಡಿ ಬಿಜೆಪಿಗೆ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ಪೆಟ್ಟು ಕೊಟ್ಟ ಗಾಲಿ ಜನಾರ್ಧನ ರೆಡ್ಡಿ ಅವರು ಮರಳಿ ಬಿಜೆಪಿ ಸೇರ್ಪಡೆ ಆಗಿದ್ದರಿಂದ ಸಾಕಷ್ಟು ಲಾಭಗಳನ್ನು ಬಿಜೆಪಿ ಪಡೆದುಕೊಳ್ಳುತ್ತಿದೆ, ಈ ಹಿನೆಲೆಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರ ಏನಾದರೂ ಬಿಜೇಪಿ 12000 ಮತಗಳ ಹಸು ಪಾಸು ಗೆದ್ದರೆ ಅದು ಜನಾರ್ಧನ ರೆಡ್ಡಿ ಅವರ ವರ್ಚಸ್ಸಿನಿಂದ ಮಾತ್ರ ಸಾಧ್ಯ ಅನ್ನುವ ಮಾತು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.
ರಾಜಕೀಯ ವಿಷಯಗಳಲ್ಲಿ ದೇಶದ ತುಂಬಾ ಹೆಸರು ಮಾಡಿರುವ ಜನಾರ್ಧನ ರೆಡ್ಡಿ ಅವರು ಯುವಕರಿಗೆ ಮತ್ತು ಮತದಾರರಿಗೆ ಪ್ರೇರೇಪಿಸುವಂತಹ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ಜನಾರ್ದನ ರೆಡ್ಡಿ ಅವರು ಎಲ್ಲಿ ಪ್ರಚಾರ ಮಾಡುತ್ತಾರೋ ಅಲ್ಲಿ ಅವರ ಫ್ಯಾನ್ ಕ್ಲಬ್ ಗಳು ಹುಟ್ಟಿಕೊಳ್ಳುತ್ತಿವೆ, ಮತ್ತು ಅವರು ಎಲ್ಲಿ ಎಲ್ಲಿ ಕಾಣಸಿಗುತ್ತಾರೋ ಅಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಭೇಟಿಯಾಗಲು ಆತುರ ಪಡುತ್ತಾರೆ, ಒಂದು ರೀತಿಯಲ್ಲಿ ಚಿತ್ರರಂಗದ ಸ್ಟಾರ್ ನಟರಂತೆ ಜನಾರ್ದನ ರೆಡ್ಡಿ, ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ, ಜನಾರ್ಧನ ರೆಡ್ಡಿ ಅವರು ಪ್ರಚಾರ ಮಾಡಿರುವ ಕಡೆಯಲ್ಲೆಲ್ಲ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿದೆ ಅನ್ನುವುದನ್ನು ಸ್ವತಹ ಮತದಾರರು ಹೇಳುತ್ತಿದ್ದಾರೆ, ಒಂದು ವೇಳೆ ಬಿಜೆಪಿ ಗೆದ್ದಿದ್ದೆ ಆದರೆ ಅದು ಜನಾರ್ಧನ ರೆಡ್ಡಿ ಅವರ ಕೃಪಾಕಟಾಕ್ಷದಿಂದಲೇ ಅಂತ ಹೇಳಬಹುದು.
ಆಕರ್ಷಕ ಮಾತುಗಳನ್ನು ಹೊಂದಿರುವ ಜನಾರ್ಧನ ರೆಡ್ಡಿ, ಕೊಪ್ಪಳ ಮತ್ತು ಬಳ್ಳಾರಿ ಬಿಜೆಪಿಗೆ ವರದಾನ:
ಜನಾರ್ದನ ರೆಡ್ಡಿ ಅವರು ಚುನಾವಣೆಯ ಪ್ರಚಾರದ ಕುರಿತು ಮಾಡುವ ಭಾಷಣಗಳು ಜನರನ್ನು ಆಕರ್ಷಿಸುವಂತೆ ಮಾಡುತ್ತಿತ್ತು, ಈ ಹಿನ್ನೆಲೆಯಲ್ಲಿ ಜನಾರ್ಧನ ರೆಡ್ಡಿ ಅವರ ಪ್ರಚಾರದ ಭಾಷಣವನ್ನು ಕೇಳಿದ ಯಾರೇ ಆಗಲಿ ಜನಾರ್ಧನ ರೆಡ್ಡಿ ಅವರ ಪರವಾಗಿ ನಿಲ್ಲುವುದು ಖಚಿತ,
ಯಾಕೆಂದರೆ ಅವರ ಮಾತುಗಳಲ್ಲಿ ಅಂತಹ ಆಕರ್ಷಣ ಶಕ್ತಿ ಇದೆ ಮತ್ತು ಜನಾರ್ಧನ ರೆಡ್ಡಿ ಅವರು ಯಾವ ಪಕ್ಷದ ಪರ ಪ್ರಚಾರ ಮಾಡುತ್ತಾರೋ ಆ ಪಕ್ಷಕ್ಕೆ ಮತದಾನ ಜಾಸ್ತಿ ಆಗುತ್ತೆ ಯಾಕೆಂದರೆ ಜನಾರ್ಧನ ರೆಡ್ಡಿ ಅವರ ಮಾತುಗಳು ಅಷ್ಟೊಂದು ಆಕರ್ಷಕಮಯವಾದ ಮಾತುಗಳಾಗಿವೆ ಒಂದು ಸಾರಿ ಅವರ ಮಾತುಗಳನ್ನು ಕೇಳಿದ ಮತದಾರ ಎಂದಿಗೂ ಬೇರೆ ಪಕ್ಷಕ್ಕೆ ವೋಟ್ ಮಾಡುವುದಿಲ್ಲ ಆ ರೀತಿ ಜನರನ್ನು ಸೆಳೆಯುವಂತಹ ತಂತ್ರಗಾರಿಕೆಯ ಮಾತುಗಳ ಮೋಡಿಯನ್ನು ಜನಾರ್ಧನ ರೆಡ್ಡಿ ಅವರು ಮತದಾರರ ಮೇಲೆ ಮಾಡಬಲ್ಲರು ಅನ್ನುವುದು ಸ್ವತಃ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿರುವ ವಿಷಯ.
ಯಾವುದೇ ರಾಜಕೀಯ ಲೆಕ್ಕಾಚಾರ ಮಾಡಿದರು ಕೂಡ ಕೊನೆಗೆ ನಿರ್ಧಾರ ಆಗೋದು ಫಲಿತಾಂಶದ ಮೇಲೆ ಮಾತ್ರ. 2024 ರ ಲೋಕಸಭಾ ಚುನಾವಣಾ ಎಣಿಕೆ ಜೂನ್ 4 ರಂದು ನಡೆಯಲಿದೆ ಅಂದೆ ಫಲಿತಾಂಶ ಹೊರ ಬೀಳಲಿದೆ ವಿಜಯದ ಮಾಲೆ ಯಾರ ಕೊರಳಿಗೆ ಬೀಳಲಿದೆ ಅನ್ನುವುದು ಕಾದು ನೋಡಬೇಕಾಗಿದೆ.