ಕಾರಟಗಿ

ಮಾಜಿ ಶಾಸಕ ಬಸವರಾಜ ದಢೇಗೂರು ವಿರುಧ್ಧ ಅಸಂವಿಧಾನಿಕ ಪದ ಬಳಕೆ ಮಾಡಿ ಅವಹೇಳನ ಮಾಡಿದ ಆರೋಪ ?  

ಮಾಜಿ ಶಾಸಕ ಬಸವರಾಜ ದಢೇಗೂರು ವಿರುಧ್ಧ ಅಸಂವಿಧಾನಿಕ ಪದ ಬಳಕೆ ಮಾಡಿ ಅವಹೇಳನ ಮಾಡಿದ ಕಾಂಗ್ರೇಸ್ ಮುಖಂಡ

ಕಾರಟಗಿ : ಒಬ್ಬರ ವೈಯಕ್ತಿಕ ವಿಚಾರದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಚಿವರಾದ ಶಿವರಾಜ್ ಎಸ್ ತಂಗಡಗಿ ಅವರು ಮಾಜಿ ಶಾಸಕ ಬಸರಾಜ್ ದಡೇಸುಗುರು ವಿಚಾರದಲ್ಲಿ ಈ ಹಿಂದೆ ರಾಜ್ಯ ಮಾದ್ಯಮ ಹಾಗೂ ಪತ್ರಿಕೆಗಳಿಗೆ ಪ್ರತಿಕ್ರಿಯೆ ನೀಡಿದ್ದರು, ಅದರಂತೆ ಅವರು ಯಾವುದೇ ರಾಜಕಾರಣಿಗಳ ವೈಯಕ್ತಿಕ ಖಾಸಗಿತನದ ಬಗ್ಗೆ ಇಂದಿಗೂ ಪ್ರತಿಕ್ರಿಯೆ ನೀಡುವುದಿಲ್ಲ ಇದು ಸಚಿವ ಶಿವರಾಜ್ ತಂಗಡಗಿ ಅವರ ನಡವಳಿ ಅಂತಾನೆ ಹೇಳಬಹುದು, ಆದರೆ ಜನವರಿ 27ರಂದು ಸಚಿವ ಶಿವರಾಜ್ ತಂಗಡಗಿ ಅವರ ಗೃಹ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಮಾಜಿ ಶಾಸಕರಾದ ಬಸವರಾಜ ದಡೇಸುಗುರು ಅವರ ಬಗ್ಗೆ ಅವಹೇಳನ ರೀತಿಯಲ್ಲಿ ಮಾತನಾಡಿರುವುದು ಅಚ್ಚರಿ ಮೂಡಿಸಿದೆ,

ಈಗಷ್ಟೇ ಕೆಲವು ದಿನಗಳ ಹಿಂದೆ ಮಾಜಿ ಶಾಸಕರು ತುಂಗಭದ್ರ ಜಲಾಶಯದ ಬಗ್ಗೆ ಮತ್ತು ಮುಂದಿನ ಸುಗ್ಗಿ ಬೆಳಗ್ಗೆ ನೀರು ಇರುವುದಿಲ್ಲ, ಸಚಿವರ ಅಭಿವೃದ್ಧಿಯನ್ನು ಮರೆತಿದ್ದಾರೆ, ರೈತರ ಎರಡನೇ ಬೆಳಗ್ಗೆ ನೀರು ತಪ್ಪಿಸಿದ್ದಾರೆ ಎಂದು ಸಚಿವ ತಂಗಡಗಿ ಅವರ ವಿರುದ್ಧ ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಸಚಿವರ ಗೃಹ ಕಚೇರಿಯಲ್ಲಿ ಜನವರಿ 27 ರಂದು ಪತ್ರಿಕಾಗೋಷ್ಠಿಯನ್ನು ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶರಣಗೌಡ ಮಾಲಿ ಪಾಟೀಲ್ ಅವರು ಮಾತನಾಡಿ ಸಚಿವರಾದ ಶಿವರಾಜ್ ಎಸ್ ತಂಗಡಗಿ ಅವರ ಮೇಲೆ ಮಾಜಿ ಶಾಸಕರು ಮಾಡುತ್ತಿರುವ ಆರೋಪ ಶುದ್ಧ ಸುಳ್ಳು , ಸಚಿವರು ರೈತರ ಪರ ಇದ್ದಾರೆ ರೈತರ ಹಿತವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ತುಂಗಭದ್ರಾ ಜಲಾಶಯದ ಗೇಟ್ಗಳನ್ನು ರಿಪೇರಿ ಮಾಡುತ್ತಿದ್ದಾರೆ. ಮುಂದಿನ ಸುಗ್ಗಿ ಬೆಳಗ್ಗೆ ರೈತರಿಗೆ ಒಳ್ಳೆಯದಾಗುತ್ತೆ ಹಾಗೂ ಜಲಾಶಯದಿಂದ ನೀರು ಹರಿಯುತ್ತೆ ಮಾಜಿ ಶಾಸಕರು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಿ ಆದರೆ ಸುಳ್ಳು ಆರೋಪಗಳನ್ನು ಮಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಮಾತನಾಡಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಮುಖಂಡರಾದ ಪರಕಿ ಶರಣಪ್ಪ ಅವರು ಮಾತನಾಡಿ ಸಚಿವರಾದ ಶಿವರಾಜ್ ಎಸ್ ತಂಗಡಗಿ ಅವರು ಮಾಡಿದ ಅಭಿವೃದ್ಧಿ ಯಾರು ಮಾಡಿಲ್ಲ.2018 ರ ಚುನಾವಣೆಯಲ್ಲಿ ಮತದಾರರ ಅಭಿಲಾಷೆಯಂತೆ ಈ ಪುಣ್ಯಾತ್ಮ ಗೆದ್ದಿದ್ದ, ಆದರೆ ಅಭಿವೃದ್ಧಿಯನ್ನು ಮರೆತು ಕಾಲಹರಣ ಮಾಡಿದ್ದಾನೆ ಯಾವುದೋ ಸರ್ಕಾರಿ ಅಧಿಕಾರಿ ಜೊತೆ ಚ……. ದ ಆಡಿ ಅಭಿವೃದ್ದಿ ಮರೆತ ಪುಣ್ಯಾತ್ಮ  ಅಭಿವೃದ್ಧಿ ಬಗ್ಗೆ ಮಾತಾಡಕತ್ಯಾನ ಎಂದು ಮಾಜಿ ಶಾಸಕರ ಬಗ್ಗೆ ಏಕವಚನದಲ್ಲಿಯೇ ನೇರವಾಗಿ ಗುಡುಗಿದ್ದಾರೆ. ಇನ್ನು ಶಾಲಾ ವಿದ್ಯಾರ್ಥಿಗಳಿಗೆ ಸಂಚರಿಸಲು ಗಂಗಾವತಿ ಮತ್ತು ಸಿಂಧನೂರಿನ ಶಾಲಾ ಕಾಲೇಜುಗಳಿಗೆ ಸಂಚರಿಸಲು ಹೆಚ್ಚುವರಿ ಬಸ್ಸುಗಳನ್ನು ಬಿಡುವಂತೆ ಪತ್ರಕರ್ತರ ಬೇಡಿಕೆಗೆ ಗ್ಯಾರಂಟಿ ಶಕ್ತಿ ಯೋಜನೆಯ ದೇವಪ್ಪ ಬಾವಿಕಟ್ಟಿ ಮಾತನಾಡಿ ಈಗಾಗಲೇ ನಾವು ಹೆಚ್ಚುವರಿ ಬಸ್ಸುಗಳನ್ನು ಬಿಡುವಂತೆ ಕೆ ಎಸ್ ಆರ್ ಟಿ ಸಿ ನಿಗಮಕ್ಕೆ ಪತ್ರ ಬರೆಯಲಾಗಿದೆ ಆದಷ್ಟು ಬೇಗ ಬಸ್ಸುಗಳ ವ್ಯವಸ್ಥೆ ಕಲ್ಪಿಸಿಕೊಡುತ್ತೇವೆ ಎಂದರು
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಶರಣೇಗೌಡ ಮಾಲಿ ಪಾಟೀಲ್ , ಪುರಸಭೆ ಅಧ್ಯಕ್ಷರಾದ ಮಂಜುನಾಥ್ ಮೇಗೂರು, ಶಕ್ತಿ ಯೋಜನೆಯ ದೇವಪ್ಪ ಬಾವಿಕಟ್ಟಿ, ಪುರಸಭೆ ಸದಸ್ಯರಾದ ದೊಡ್ಡ ಬಸವರಾಜ್ ಬೂದಿ, ವೀರೇಶ್, ಖಾಜ ಹುಸೇನ್ ಮುಲ್ಲಾ, ಇತರರು ಇದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!