
ಕಾಲುವೆಯಲ್ಲಿ ಮೊಸಳೆ ಪ್ರತ್ಯಕ್ಷ , ಸೆರೆ ಹಿಡಿಯಲು ಮುಂದುವರೆದ ಕಾರ್ಯಾಚರಣೆ, ಸಾರ್ವಜನಿಕರು ಕಾಲುವೆಯಲ್ಲಿ ಇಳಿಯದಂತೆ ಜಾಗೃತಿ
ಕಾರಟಗಿ : ತಾಲೂಕಿನ ಬೇವಿನಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಣ್ಣ ಕ್ಯಾಂಪ್ ನ ಕಾಲುವೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ, ತುಂಗಾ ಭದ್ರಾ ಎಡದಂಡೆ ಕಾಲುವೆ 32 ನೆಯ ಡಿಸ್ಟ್ರಿಬ್ಯೂಟರ್ ನಲ್ಲಿ ಮೊಸಳೆ ಬಂದಿದೆ ಎಂದು ತಿಳಿಯುತ್ತಿದ್ದಂತೆ, ಗ್ಯಾಂಗ್ ಮ್ಯಾನ್ ಗಳು ಜಾಗೃತಿ ವಹಿಸಿದ್ದಾರೆ. ತಕ್ಷಣ ಗ್ಯಾಂಗ್ ಮ್ಯಾನ್ ಗಳು ಕಾಲುವೆಯಲ್ಲಿ ಮೊಸಳೆ ಪ್ರತ್ಯಕ್ಷವಾಗುತ್ತಿದ್ದಂತೆ ನೀರಾವರಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನೀರಾವರಿ ಅಧಿಕಾರಿಗಳು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ ಕೂಡಲೇ ಅರಣ್ಯಾಧಿಕಾರಿಗಳು ಮೊಸಳೆ ಇರುವ ಕಾಲುವೆ ಸ್ಥಳಕ್ಕೆ ದೌಡಾಯಿಸಿದರು. ಇನ್ನೂ ಗ್ರಾಮದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮೊಸಳೆ ಪ್ರತ್ಯಕ್ಷವಾದ ಸ್ಥಳಕ್ಕೆ ಬಂದು ಮೊಸಳೆ ಹಿಡಿಯಲು ಮುಂದಾದರು. ಕಾಲುವೆಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿರುವುದರಿಂದ ಮೊಸಳೆ ಹಿಡಿಯಲು ಹರ ಸಾಹಸ ಪಡುತ್ತಿದ್ದಾರೆ, ನೀರಿನ ಪ್ರಮಾಣ ಕಡಿಮೆ ಮಾಡಲು 32 ನೆಯ ಡಿಸ್ಟ್ರಿಬ್ಯೂಟರ್ ಗೆಟ್ ಇಳಿಸಲು ಪ್ರಯತ್ನ ಪಟ್ಟರೂ ಗೇಟ್ ಬಿಗಿಯಾಗಿದ್ದರಿಂದ ಕೆಳಗಿಯಲಿಲ್ಲ, ಆದರೂ ಮೊಸಳೆ ಹಿಡಿಯಲು ಬಲೆಯನ್ನು ಉಪಯೋಗಿಸಿದರು ಹರಿಯುವ ನೀರಿನಲ್ಲಿ ಸಾದ್ಯವಾಗುತ್ತಿಲ್ಲ
ಮೊಸಳೆ ಹಿಡಿಯುವ ಕಾರ್ಯ ನಡೆಯುತ್ತಿದೆ, ಇನ್ನು ಬಸವಣ್ಣ ಕ್ಯಾಂಪ್ ಗ್ರಾಮದ ಜನರು ಚಿಕ್ಕ ಮಕ್ಕಳು ಕಾಲುವೆಯಲ್ಲಿ ಇಳಿಯದಂತೆ ಗ್ಯಾಂಗ್ ಮ್ಯಾನ್ ಗಳು ಸಾರ್ವಜನಿಕರಿಗೆ ತಿಳಿಸಿದ್ದಾರೆ. ಈ ಹಿಂದೆಯೂ ಕಾಲುವೆಯಲ್ಲಿ ಮೊಸಳೆ ಪ್ರತ್ಯಕ್ಷ ವಾಗಿತ್ತು. ಆಗಿನ ಸಂದರ್ಭದಲ್ಲಿ ಗ್ರಾಮದ ಯುವಕ ನೂಸೆಪ್ಪ ಮೊಸಳೆ ಹಿಡಿದು ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದರು. ಈಗಲೂ ಕಾಲುವೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು ಗ್ರಾಮದ ಜನರಲ್ಲಿ ಆತಂಕ ಮೂಡಿದೆ ಆದಷ್ಟು ಬೇಗ ಮೊಸಳೆ ಹಿಡಿಯಲು ಗ್ರಾಮಸ್ಥರು ಅಧಿಕಾರಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.



