ಕಾರಟಗಿತಾಲೂಕ ಸುದ್ದಿಗಳು

ಸಾದೃಶ್ಯದೊಂದಿಗೆ ರೈಲ್ವೆ ಮಾಹಿತಿ ಕಲಿಕಾ ಪ್ರವಾಸ ಕೈಗೊಂಡ ರೆಡ್ಡಿ ವೀರಣ್ಣ ಸಂಜೀವಪ್ಪ ಶಾಲಾ ಮಕ್ಕಳು*

ಕಾರಟಗಿ : ನವನಗರ ಮರ್ಲಾನಹಳ್ಳಿಯ ರೆಡ್ಡಿ ವೀರಣ್ಣ ಸಂಜೀವಪ್ಪ ಶಾಲೆಯ ಐದನೇ ತರಗತಿ ಮಕ್ಕಳು ರೈಲ್ವೆ ಬಗ್ಗೆ ತಿಳಿದುಕೊಳ್ಳಲು ಕಾರಟಗಿಯ ರೈಲ್ವೆ ಸ್ಟೇಷನ್ ಗೆ ಪ್ರವಾಸ ಕೈಗೊಂಡಿದ್ದರು. ಶಾಲಾ ಮಕ್ಕಳ ಭೌತಿಕ ಮಟ್ಟ ಬೆಳವಣಿಗೆಗೆ ಮತ್ತು ಅಭಿವೃದ್ಧಿಗಾಗಿ ರೆಡ್ಡಿ ವೀರಣ್ಣ ಶಾಲೆಯ ಆಡಳಿತ ಮಂಡಳಿ ಶಾಲಾ ಮಕ್ಕಳನ್ನು ವಿವಿಧ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳಿಗೆ ಆಗಾಗ್ಗೆ ಕರೆದೊಯ್ಯುತ್ತಾರೆ. ಶಾಲಾ ಕೊಠಡಿಯಲ್ಲಿ ಮಕ್ಕಳು ಪಠ್ಯಪುಸ್ತಕದಲ್ಲಿನ ಅಭ್ಯಾಸದ ಜೊತೆ ಮಕ್ಕಳ ಪ್ರವಾಸವು ವೀಕ್ಷಣೆಯ ಮೂಲಕ ಅನುಭವ ಕಲಿಕೆಯಾಗುತ್ತದೆ ಎನ್ನುವ ಉದ್ದೇಶದಿಂದ ಶಾಲಾ ಆಡಳಿತ ಮಂಡಳಿ ಮಕ್ಕಳ ಪ್ರವಾಸ ಕೈಗೊಳ್ಳುತ್ತಿದ್ದಾರೆ.

 

ಆ ನಿಟ್ಟಿನಲ್ಲಿ ಒಂದು ದಿನದ ರೈಲ್ವೆ ಬಗ್ಗೆ ಕಲಿಕಾ ಪೂರಕ ಪ್ರವಾಸವನ್ನು ಕೈಗೊಳ್ಳಲಾಯಿತು. ಶಾಲಾ ಮಕ್ಕಳ ಪ್ರವಾಸ ಕುರಿತು ಶಿಕ್ಷಕಿಯವರಾದ ಶ್ರೀಮತಿ ಸೌಮ್ಯರವರು ಮಾತನಾಡಿ.. ಶಾಲಾ ಆಡಳಿತ ಮಂಡಳಿ ಮಕ್ಕಳ ಕಲಿಕಾ ದೃಷ್ಟಿ ಕೋನದಿಂದ ಅವರ ಜ್ಞಾನ ವಿಕಾಸದ ಅಭಿವೃದ್ಧಿಗಾಗಿ ವರ್ಷದಲ್ಲಿ ಒಂದೆರಡು ಬಾರಿ ಮಕ್ಕಳಿಗೆ ನಾವು ವಿವಿಧ ಪ್ರವಾಸಗಳನ್ನು ಕೈಗೊಳ್ಳಲಾಗುತ್ತದೆ ಅದರ ಅಂಗವಾಗಿ ರೈಲ್ವೆ ಬಗ್ಗೆ ಮಕ್ಕಳು ತಿಳಿದುಕೊಳ್ಳುವ ಉದ್ದೇಶದಿಂದ ಪ್ರಾಯೋಗಿಕವಾಗಿ ಮಕ್ಕಳನ್ನು ರೈಲ್ವೆ ಸ್ಟೇಷನ್ ಗೆ ಪ್ರವಾಸ ಕೈಗೊಳ್ಳಲಾಯಿತು. ಕಾರಟಗಿಯ ರೈಲ್ವೆ ಸ್ಟೇಷನ್ ಮಾಸ್ಟರ್ ನವೀನ್ ಕುಮಾರ್ ಅವರು ನಮ್ಮ ಶಾಲೆಯ ಮಕ್ಕಳಿಗೆ ರೈಲ್ವೆ ಬಗ್ಗೆ ಮತ್ತು ರೈಲ್ವೆ ಹಳ್ಳಿ ಬಗ್ಗೆ ಕೋ ಪೈಲೆಟ್ ಎಂದರೇನು ?ರೈಲ್ವೆ ಹಳಿ ಎಂದರೇನು? ಮತ್ತು ರೈಲ್ವೆಗೆ ಸೂಚನೆ ನೀಡುವ ಕೆಂಪು ಮತ್ತು ಹಸಿರು ಬಣ್ಣದ ಧ್ವಜಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಶಾಲಾ ಮಕ್ಕಳಿಗೆ ತಿಳಿಸಿದರು ಮಾಹಿತಿ ನೀಡಿದ ರೈಲ್ವೆ ಅಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು ತಿಳಿಸಿ ಮುಂದುವರೆದು ಮಾತನಾಡಿದವರು. ಶಾಲಾ ಮಕ್ಕಳ ತಾತ್ವಿಕ ಜ್ಞಾನವನ್ನು ಒರೆಗೆ ಹಚ್ಚಿ ವೀಕ್ಷಿಸುವ ಮತ್ತು ಸಾದೃಶ್ಯಗಳೊಂದಿಗೆ ಹೋಲಿಕೆ ಮಾಡಿ ಕಲಿಯುವ ಚಟುವಟಿಕೆಯಾಗಿದೆ.

ಪ್ರವಾಸವು ಮಕ್ಕಳಲ್ಲಿ ಪರಿಸರ ಪ್ರೇಮ, ನಿಸರ್ಗದ ರಮ್ಯತೆಗಳು, ಇತಿಹಾಸ ಮತ್ತು ವಾಸ್ತುಶಿಲ್ಪಗಳ ಅಧ್ಯಯನ, ಅಭಿವೃದ್ಧಿಗೆ ಪೂರಕವಾದ ಉದ್ಯಮಗಳ ವೀಕ್ಷಣೆ, ವೈವಿಧ್ಯಮಯ ಜನಸಮುದಾಯ ಮತ್ತು ವಿವಿಧ ಸಂಸ್ಕೃತಿಗಳ ಪರಿಚಯ, ಪಾರಂಪರಿಕ ವೃತ್ತಿಗಳ ಪರಿಚಯ, ವಿವಿಧ ಪ್ರಾಣಿ ಪಕ್ಷಿ ಖಗಮೃಗಗಳ ವೀಕ್ಷಣೆ ಮೂಲಕ ಜ್ಞಾನ ವಿಕಾಸಕ್ಕೆ ಪೂರಕವಾಗುತ್ತದೆ.

ಇವುಗಳ ಜೊತೆಗೆ ಮಕ್ಕಳಲ್ಲಿ ವ್ಯಕ್ತಿತ್ವ ನಿರ್ಮಾಣದಲ್ಲಿಯೂ ಪ್ರವಾಸ ಹೆಚ್ಚು ಮಹತ್ತರವಾಗಿದೆ. ಶಾಲಾ ಪ್ರವಾಸಗಳು ಮಕ್ಕಳಲ್ಲಿ ಒಗ್ಗಟ್ಟು, ಸಹಬಾಳ್ವೆ, ಪರಸ್ಪರ ಸಹಕಾರ, ಹಂಚಿ ತಿನ್ನುವ ಮನೋಭಾವ, ವಯಸ್ಸಿಗೆ ತಕ್ಕ ಜವಾಬ್ಧಾರಿ ನಿರ್ವಹಣೆ, ಇತರರಿಗೆ ಗೌರವ ನೀಡುವುದು, ವಿವಿಧ ಸಂಸ್ಕೃತಿಗಳ ಮೆಚ್ಚುಗೆ ಹೀಗೆ ಹಲವು ಬಗೆಯ ಸೌಜನ್ಯಯುತ ನಡವಳಿಕೆಗಳನ್ನು ಮಕ್ಕಳು ಬೆಳೆಸಿಕೊಳ್ಳುವಲ್ಲಿ ಸಹಕಾರಿಯಾಗಿದೆ. ಪಠ್ಯದಲ್ಲಿನ ಪರಿಕಲ್ಪನೆಗಳನ್ನು ಕೇಳಿ ತಿಳಿಯುವುದಕ್ಕಿಂತ ನೋಡಿ ತಿಳಿದಾಗ ಹೆಚ್ಚು ಸ್ಪಷ್ಟವಾಗಿ ನೆನಪಿನಲ್ಲಿ ಉಳಿಯುತ್ತದೆ. ಹಾಗಾಗಿ ಶಾಲಾ ಪ್ರವಾಸಕ್ಕೆ ತನ್ನದೇ ಆದ ಮಹತ್ವವಿದೆ ಎಂದರು. ಈ ಸಂದರ್ಭದಲ್ಲಿ ಶಿಕ್ಷಕರಾದ ರತ್ನಮ್ಮ ಗಂಗಾ ಎಸ್, ತಿಪ್ಪಣ್ಣ ಇವರುಗಳು ಇದ್ದರು

Related Articles

Leave a Reply

Your email address will not be published. Required fields are marked *

Back to top button