ಕ್ರೀಡಾಕೂಟ ವಿಜೇತ ಪತ್ರಕರ್ತರಿಗೆ ಕೊಪ್ಪಳದಲ್ಲಿಸನ್ಮಾನ : ಅಭಿನಂದನೆ
ಕೊಪ್ಪಳ, ನ 26, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತುಮಕೂರಿನಲ್ಲಿ ಕಳೆದ ರವಿವಾರ ದಂದು ಜರುಗಿದ ಸಂಘದ ಸದಸ್ಯ ಪತ್ರಕರ್ತರ ರಾಜ್ಯಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ವಿಜೇತ ಪತ್ರಕರ್ತ ಕ್ರೀಡಾ ಪಟುಗಳಿಗೆ ಮಂಗಳವಾರದಂದು ಇಲ್ಲಿನ ಪತ್ರಿಕಾ ಭವನದಲ್ಲಿ ಕೊಪ್ಪಳ ಜಿಲ್ಲಾ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ತುಮಕೂರು ನಲ್ಲಿ ನಡೆದ ಕ್ರೀಡಾಕೂಟ ದಲ್ಲಿ ಗುಂಡು ಎಸೆತ ದಲ್ಲಿ ಪ್ರಥಮ ಸ್ಥಾನ ಮತ್ತು ನಗದು ಬಹುಮಾನ ಪಡೆದ ನಮ್ಮ ಕೊಪ್ಪಳದ ಕೋಟೆ ಕರ್ನಾಟಕ ಪತ್ರಿಕೆಯ ಸ್ತಾನಿಕ ಸಂಪಾದಕರಾದ ಮೊಹಮ್ಮದ್ ಖಲೀಲ್ ಉಡೆವು ಮತ್ತು ರನ್ನಿಂಗ್ ರೇಸ್ ನಲ್ಲಿ ತೃತೀಯ ಸ್ಥಾನ ಮತ್ತು ನಗದು ಬಹುಮಾನ ಪಡೆದ ನಮ್ಮ ಕೊಪ್ಪಳದ ಲೋಕದರ್ಶನ ದಿನಪತ್ರಿಕೆಯ ಸಹ ವರ್ದಿಗಾರ ಅಶ್ವಾಕ್ ಅಹಮದ್ ರವರನ್ನು ಜಿಲ್ಲಾ ಸಂಘದ ಪರವಾಗಿ ಸನ್ಮಾನಿಸಿ ಅಭಿನಂದಿಸಿ ಸಂಭ್ರಮಿಸಲಾಯಿತು,
ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷರಾದ ಬಸವರಾಜ್ ಗುಡ್ಲಾನೂರ್ ವಹಿಸಿದ್ದರು, ಸಂಘದ ರಾಜ್ಯ ಸಮಿತಿ ಸದಸ್ಯರಾದ ಎಂ ಸಾಧಿಕ್ ಅಲಿ ಮತ್ತು ರಾಜ್ಯ ವಿಶೇಷ ಆಹ್ವಾನಿತ ಸದಸ್ಯರಾದ ಹೆಚ್ಎಸ್ ಹರೀಶ್, ರಾಷ್ಟ್ರೀಯ ಕಾರ್ಯಕಾರಣಿ ಮಂಡಳಿ ಸದಸ್ಯರಾದ ಜಿಎಸ್ ಗೋನಾಳ ಮತ್ತು ಜಿಲ್ಲಾ ಉಪಾಧ್ಯಕ್ಷರಾದ ಹನುಮಂತ ಹಳ್ಳಿಕೇರಿ ವೇದಿಕೆ ಮೇಲೆ ಉಪಸ್ಥಿತರಿದ್ದು ಸದರಿ ಕಾರ್ಯಕ್ರಮದಲ್ಲಿ ಸಂಘದ ಸದಸ್ಯ ಹಿರಿಯ ಪತ್ರಕರ್ತರಾದ ಸಿರಾಜ್ ಬಿಸರಳ್ಳಿ ಆರಂಭದಲ್ಲಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಪತ್ರಕರ್ತರುಗಳಾದ ಹೆಚ ವಿ ರಾಜಭಕ್ಷಿ ,ಫಕೀರಪ್ಪ ಗೋಟುರ್, ಸಿದ್ದು ಹಿರೇಮಠ ,ಅಖಿಲ್ ಉಡೆವು, ಎಂ ಎನ್ ಕುಂದ್ಗೋಳ ಅನೇಕರು ಪಾಲ್ಗೊಂಡಿದ್ದು ಕಾರ್ಯಕ್ರಮದ ಕೊನೆಯಲ್ಲಿ ಧರ್ಮಣ್ಣ ವಂದಿಸಿದರು.