ವಿದ್ಯಾರ್ಥಿನಿಯರ ಕರಾಟೆ ಚಾಲನೆ ನೀಡಿದ ಎಸ್ ಡಿ ಎಮ್ ಸಿ ಹಾಗೂ ಮುಖ್ಯೋಪಾಧ್ಯಾಯರು
ವಿದ್ಯಾರ್ಥಿನಿಯರಿಂದ ಕರಾಟೆಗೆ ಚಾಲನೆ
ಕೊಪ್ಪಳ : ತಾಲೂಕಿನ ಹೃದಯ ಭಾಗದಲ್ಲಿರುವ ಆದರ್ಶ ವಿದ್ಯಾಲಯ ಶಾಲೆಯಲ್ಲಿ ಹೆಣ್ಣು ಮಕ್ಕಳ ಆತ್ಮ ರಕ್ಷಣೆಗಾಗಿ ಕರಾಟೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು .
ಈ ವೇಳೆ ಅಧ್ಯಕ್ಷತೆಯನ್ನು ವಹಿಸಿದ ಎಸ್ ಡಿ ಎಂ ಸಿ ಈಶಪ್ಪ ಕಾತರಕಿ ಅವರು ಹೆಣ್ಣು ಮಕ್ಕಳಿಗೆ ಇಂದಿನ ಯುಗದಲ್ಲಿ ಕರಾಟೆ ಅತ್ಯವಶ್ಯಕ ಕರಾಟೆ ಇಂದ ಆರೋಗ್ಯ ವೃದ್ಧಿಯಾಗುತ್ತದೆ ಹಾಗೂ ಆತ್ಮ ರಕ್ಷಣೆ ಕೂಡ ಮಾಡಿಕೊಳ್ಳಬಹುದು ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಕಾಶ್ ಬಿ ತಗಡಿಮನಿ ಸರ್ಕಾರ ಮಕ್ಕಳ ಸಂರಕ್ಷಣೆಗಾಗಿ ಸುಮಾರು ಕಾಯ್ದೆಗಳನ್ನ ಜಾರಿಗೊಳಿಸುತ್ತದೆ ಅದರಲ್ಲಿ ಈ ಕರಾಟೆ ಕಲೆ ಕೂಡ ಒಂದು ಕರಾಟೆಯಿಂದ ಏನೆಲ್ಲ ಪ್ರಯೋಜನಗಳು ಆಗುತ್ತವೆ ಎಂಬುದನ್ನು ಈಗಾಗಲೇ ನಮ್ಮ ಶಾಲೆಯ ಕರಾಟೆ ಶಿಕ್ಷಕರಾಗಿ ಆಯ್ಕೆಯಾದಂತಹ ರಾಘವೇಂದ್ರ ಅರಕೆರೆ ಅವರು ಅದರ ಬಗ್ಗೆ ನಿಮಗೆ ಸೋ ವಿಸ್ತಾರವಾಗಿ ಕಲಿಸಿಕೊಡುತ್ತಾರೆ ಅವರ ಮಾರ್ಗದರ್ಶನದಂತೆ ನೀವು ಕಲಿತು ಒಳ್ಳೆಯ ಆರೋಗ್ಯವಂತರಾಗಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಈಶಪ್ಪ ಕಾತರಕಿ , ಪಾಲಕರಾದ ವಿನಾಯಕ್ ಜೋಶಿ , ಮುಖ್ಯೋಪಾಧ್ಯಾಯರಾದ ಪ್ರಕಾಶ್ ಬಿ ತಗಡಿಮನಿ. ಹಿರಿಯ ಶಿಕ್ಷಕರಾದ ಉದಯಕುಮಾರ್ . ಸಹ ಶಿಕ್ಷಕರಾದ. ಶಾರದಾ ಸುನಿತಾ , ಗಂಗಾಧರ್ ಸಾಲಿಮನಿ ಶಿಕ್ಷಕರು ಸಿಬ್ಬಂದಿ ವರ್ಗ ಭಾಗವಹಿಸಿ ಕಾರ್ಯಕ್ರಮವನ್ನು ನೆರವೇರಿಸಿದರು.