ಪತ್ರಿಕಾ ದಿನಾಚರಣೆ ಪತ್ರಕರ್ತರಿಗೆ ವೃತ್ತಿಪರವಾದ ತರಬೇತಿ ಯಾಗಲಿ -ಹನುಮಂತ್ ಹಳ್ಳಿಕೇರಿ

ಕೊಪ್ಪಳ ಜೂನ್ 28, ರಾಜ್ಯ ಸಮಿತಿಯ ಸೂಚನೆಯಂತೆ ಪತ್ರಿಕಾ ದಿನಾಚರಣೆ ಕೇವಲ ಪತ್ರಿಕಾ ದಿನಾಚರಣೆ ಗೆ ಅಷ್ಟೇ ಸೀಮಿತವಾಗದೆ ಅದೊಂದು ವೃತ್ತಿಪರವಾದ ಮಾಹಿತಿ ಪೂರ್ಣ ತರಬೇತಿ ಕಾರ್ಯಗಾರದಂತೆ ವಾಗಲಿ ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಅಧ್ಯಕ್ಷ ಹನುಮಂತ ಹಳ್ಳಿಕೇರಿ ಹೇಳಿದರು,
ಅವರು ಶನಿವಾರ ಬೆಳಗ್ಗೆ ಇಲ್ಲಿನ ಪತ್ರಿಕಾ ಭವನದಲ್ಲಿ ಜರುಗಿದ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜ್ಯ ಸಂಘದ ಮಾರ್ಗಸೂಚಿ ಎಲ್ಲರು ಪಾಲಿಸಲೇಬೇಕು ಶೀಘ್ರ ಚುನಾವಣೆ ಘೋಷಣೆ ಯಾಗಲಿರುವ ಹಿನ್ನೆಲೆಯಲ್ಲಿ ಜಿಲ್ಲಾ ಸಮಿತಿ ಹಾಗೂ ಜಿಲ್ಲೆಯ ಎಲ್ಲಾ ತಾಲೂಕ ಸಮಿತಿಯವರು ಜೂಲೈ ತಿಂಗಳಲ್ಲಿ ಪತ್ರಿಕಾ ದಿನಾಚರಣೆ ಮಾಡ ಬೇಕು ಅದಕ್ಕಾಗಿ ನಮ್ಮ ಜಿಲ್ಲೆಯ ಆರು ತಾಲೂಕಿನ ತಾಲೂಕ ಸಂಘದ ಸಮಿತಿಯವರು ಜುಲೈ ತಿಂಗಳದ 20ನೇ ತಾರೀಖಿನ ಒಳಗಾಗಿ ತಮ್ಮ ತಮ್ಮ ತಾಲೂಕ ಕೇಂದ್ರದಲ್ಲಿ ಅರ್ಥಪೂರ್ಣವಾದಂತಹ ಪತ್ರಿಕಾ ದಿನಾಚರಣೆ ಆಚರಿಸಬೇಕು ಜುಲೈ ಕೊನೆ ವಾರದಲ್ಲಿ ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಆಯೋಜಿಸಲಾಗುವುದು ಪತ್ರಿಕ ದಿನಾಚರಣೆಯ ಪ್ರಯುಕ್ತ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಪ್ರಸಕ್ತ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ 70% ರಷ್ಟು ಅಂಕ ಗಳಿಸಿದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಅಲ್ಲದೆ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ ಸಹ ಏರ್ಪಡಿಸಲಾಗುವುದು, ಜಿಲ್ಲಾ ಸಂಘದಿಂದ ದತ್ತಿ ಪ್ರಶಸ್ತಿ ಕೆಯುಡಬ್ಲ್ಯೂ ಜೆ ಪ್ರಶಸ್ತಿ ಸೇರಿದಂತೆ ಇತರ ಉತ್ತಮ ಸುದ್ದಿಗಳಿಗಾಗಿ ಪ್ರತ್ಯೇಕ ಪ್ರಶಸ್ತಿ ಅರ್ಹ ಮತ್ತು ಹಿರಿಯ ಅನುಭವಿ ಪತ್ರಕರ್ತರಿಗೆ ವಿವಿಧ ಪ್ರಶಸ್ತಿ ಗಳನ್ನು ಸಹ ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ನೀಡಲಾಗುವುದು, ಎಲ್ಲಾ ತಾಲೂಕಿನ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿಗಳು ರಾಜ್ಯ ಸಮಿತಿಯ ಮಾರ್ಗಸೂಚಿ ಪಾಲಿಸಿ ಕಡ್ಡಾಯವಾಗಿ ನಿಗದಿತ ಸಮಯ ಮತ್ತು ಅವಧಿಯೊಳಗೆ ಪತ್ರಿಕಾ ದಿನಾಚರಣೆ ಪೂರ್ಣಗೊಳಿಸಬೇಕು ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಬೇಕು ಎಂದು ಸಂಘದ ಜಿಲ್ಲಾ ಅಧ್ಯಕ್ಷ ಹನುಮಂತ್ ಹೇಳಿಕೇರಿ ಸೂಚಿಸಿದರು,
ಆರಂಭದಲ್ಲಿ ಪ್ರಾಸ್ತಾವಿಕವಾಗಿ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸಾಧಿಕ ಅಲಿ ಮಾತನಾಡಿದರು ,ವೇದಿಕೆ ಮೇಲೆ ರಾಜ್ಯ ಸಮಿತಿಯ ವಿಶೇಷ ಅಹ್ವಾನಿಕ ಸದಸ್ಯ ಎಚ್ಎಸ್ ಹರೀಶ್ ,ಜಿಲ್ಲಾ ಗೌರವಾಧ್ಯಕ್ಷ ಬಸವರಾಜ್ ಗುಡ್ಲಾನೂರ್ ರಾಷ್ಟ್ರೀಯ ಮಂಡಳಿ ಸದಸ್ಯ ಜಿಎಸ್ ಗೋನಾಳ ಉಪಸ್ಥಿತರಿದ್ದು ತಮ್ಮ ಸಲಹೆ ಸೂಚನೆ ಮತ್ತು ಅನಿಸಿಕೆಗಳನ್ನು ಸಭೆಯಲ್ಲಿ ಮಂಡಿಸಿದರು ಅಲ್ಲದೆ ಜಿಲ್ಲಾ ಖಜಾಂಚಿ ರಾಜು ಬಿ ಆರ್ ಮತ್ತು ಪತ್ರಿಕಾ ಭವನ್ ಕಟ್ಟಡ ಸಮಿತಿ ಅಧ್ಯಕ್ಷ ಎನ್ ಎಂ ದೊಡ್ಡಮನಿ ತಮ್ಮ ಅನಿಸಿಕೆ ಸಲಹೆ ಸೂಚನೆ ವ್ಯಕ್ತಪಡಿಸಿದರು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ ನಾಗರಾಜ ಸಭೆಯ ಕಾರ್ಯ ಕಲಾಪ ನಿರ್ವಹಿಸಿದರೆ ,ಸಂಘದ ಜಿಲ್ಲಾ ಉಪಾಧ್ಯಕ್ಷ ಆರ್ ಬಿ ಪಾಟೀಲ್, ಜಿಲ್ಲಾ ಕಾರ್ಯದರ್ಶಿ, ವೀರಣ್ಣ ಕಳ್ಳಿಮನಿ, ಮಂಜುನಾಥ್ ಅಂಗಡಿ, ಚಾಂದ್ ಸಿಂಗ್ ಕಾರಟಗಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ರುದ್ರಪ್ಪ ಭಂಡಾರಿ, ವಿಶ್ವನಾಥ್ ಬೆಳಗಾಳಮಠ, ಋಷವೇಂದ್ರ ಸ್ವಾಮಿ ನವಲಿ ಹಿರೇಮಠ್, ಚಂದ್ರು ಮುಕ್ಕಂದಿ, ಸಿರಾಜ್ ಬಿಸರಳ್ಳಿ ,ಅಲ್ಲದೆ ಗಂಗಾವತಿ ತಾಲೂಕ ಅಧ್ಯಕ್ಷ ನಾಗರಾಜ ಇಂಗಳಗಿ ,ಕುಕನೂರ್ ಅಧ್ಯಕ್ಷ ನಾಗರಾಜ್ ಬೆಣಕಲ್, ಕನಕಗಿರಿ ಅಧ್ಯಕ್ಷ ಮಧುಸೂಧನ ರೆಡ್ಡಿ, ಕಾರಟಗಿಯ ತಾಲೂಕ ಅಧ್ಯಕ್ಷ ಸಿದ್ದನಗೌಡ ಪಾಟೀಲ್, ಕಾರ್ಯದರ್ಶಿ ಶರಣಪ್ಪ ಕೋಟ್ಯಾಳ ಯಲಬುರ್ಗಾ ತಾಲೂಕ ಅಧ್ಯಕ್ಷ ಶಿವಮೂರ್ತಿ ಇಟಗಿ ಪ್ರಧಾನ ಕಾರ್ಯದರ್ಶಿ ಮಲ್ಲು ಮಾಟರಂಗಿ ತಾಲೂಕ ಕಾರ್ಯದರ್ಶಿ ಮಹಾಂತೇಶ್ ಚಲವಾದಿ, ಕುಷ್ಟಗಿ ಪ್ರಧಾನ ಕಾರ್ಯದರ್ಶಿ ಬಸವರಾಜ್ ಪಲ್ಲೆದ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.