ಕೊಪ್ಪಳಜಿಲ್ಲಾ ಸುದ್ದಿಗಳು

ಕೊಪ್ಪಳ : ಕವಲೂರಿನ ಒಳ ಸಂಪರ್ಕ ರಸ್ತೆ,ಸೇತುವೆಗಳ ನಿರ್ಮಾಣಕ್ಕೆ ಆಗ್ರಹಿಸಿ ಶಾಸಕ ಕೆ,ರಾಘವೇಂದ್ರ ಬಿ.ಹಿಟ್ನಾಳರಿಗೆ ಮನವಿ.

ಕೊಪ್ಪಳ : ಕೊಪ್ಪಳ ದಿಂದ ಕವಲೂರಿನ ಒಳ ಸಂಪರ್ಕ ರಸ್ತೆ,ಸೇತುವೆಗಳ ನಿರ್ಮಾಣ,

ಗ್ರಾಮೀಣ,ನಗರ ಪ್ರದೇಶದ ರಸ್ತೆಗಳ ದುರಸ್ತಿ ಮಾಡುವಂತೆ ಆಗ್ರಹಿಸಿ ಶಾಸಕ ಕೆ, ರಾಘವೇಂದ್ರ ಬಿ,ಹಿಟ್ನಾಳರಿಗೆ ಹಾಗೂ ಇದೇ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಆಗಮಿಸಿದ್ದ ನಗರ ಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಅವರಿಗೂ ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು,

 

ಸಂಸದ ಕೆ, ರಾಜಶೇಖರ್ ಬಿ,ಹಿಟ್ನಾಳ ಅವರ ನಿವಾಸಕ್ಕೆ ಆಗಮಿಸಿದ್ದ ಶಾಸಕ ಕೆ, ರಾಘವೇಂದ್ರ ಬಿ,ಹಿಟ್ನಾಳ ಅವರಿಗೆ ನೀಡಿದ ಮನವಿಯಲ್ಲಿ ಕೊಪ್ಪಳ ತಾಲೂಕಿನ ಕವಲೂರಿನ ಒಳ ಸಂಪರ್ಕ ರಸ್ತೆ ದುರಸ್ತಿ ಮತ್ತು ಸಿಡಿಗಳ ಬದಲಿಗೆ ಸೇತುವೆಗಳನ್ನು ನಿರ್ಮಾಣ ಮಾಡಬೇಕು. ಗ್ರಾಮೀಣ,ನಗರ ಪ್ರದೇಶದ ರಸ್ತೆಗಳ ದುರಸ್ತಿ ಕಾರ್ಯ ತ್ವರಿತವಾಗಿ ಕೈಗೊಳ್ಳಬೇಕು.

ಕೊಪ್ಪಳ ದಿಂದ ಹಲಗೇರಿ, ವದಗನಾಳ, ವಾಯ ಹಂದ್ರಾಳ ಮೂಲಕ ಕವಲೂರ ಗ್ರಾಮಕ್ಕೆ ಹೋಗುವ ಒಳ ಸಂಪರ್ಕ ರಸ್ತೆ ಅಲ್ಲಲ್ಲಿ ತಗ್ಗುಗಳು ಬಿದ್ದು ಹಾಳಾಗಿವೆ, ಅಲ್ಲದೆ ಕವಲೂರ ಗ್ರಾಮದ ಬಳಿಯ ಹಳ್ಳಕ್ಕೆ ಕಟ್ಟಲಾಗಿದ್ದ ಸಿಡಿಗಳು ಒಡೆದು ಹೋಗಿ ಎಷ್ಟೋ ವರ್ಷಗಳೇ ಕಳೆದಿದೆ ಆದರೂ ಯಾವ ಚುನಾಯಿತ ಪ್ರತಿನಿಧಿಗಳು ಗಮನಹರಿಸದೆ ಸಂಪೂರ್ಣ ನಿರ್ಲಕ್ಷಿಸಿದ್ದು ವಿಷಾದನೀಯ ಸಂಗತಿಯಾಗಿದೆ.

ಕೊಪ್ಪಳ ದಿಂದ ಒಳ ಸಂಪರ್ಕ ರಸ್ತೆ ವಾಯ ಹಂದ್ರಾಳ ಮೂಲಕ ಕವಲೂರಿಗೆ ಹೋದರೆ ಕೇವಲ ಇಪ್ಪತ್ತೈದು ಕಿಲೋಮೀಟರ್ ಅಂತರದ ದೂರವಿದೆ,ಆದರೆ ಕೊಪ್ಪಳ, ಹಲಗೇರಿ ವಾಯ ಬನ್ನಿಕೊಪ್ಪ ಮೂಲಕ ಕವಲೂರಿಗೆ ಹೋದರೆ ಸುಮಾರು 40ಕ್ಕೂ ಹೆಚ್ಚು ಕಿಲೋಮೀಟರ್ ದೂರವಾಗುತ್ತದೆ, ಅದೇರೀತಿ ಹಿರೇ ಸಿಂದೋಗಿ ವಾಯ ಅಳವಂಡಿ ಮೂಲಕ ಕವಲೂರಿಗೆ ಹೋದರೆ ಸುಮಾರು ಮೂವತ್ತೈದಕ್ಕೂ ಹೆಚ್ಚು ಕಿಲೋಮೀಟರ್ ದೂರವಾಗುತ್ತದೆ. ಇದೇ ಒಳ ಸಂಪರ್ಕ ಮಾರ್ಗದಲ್ಲಿ ಕೊಪ್ಪಳದಿಂದ ಕವಲೂರಿಗೆ ಬಸ್ ಸಹ ಸಂಚರಿಸುತ್ತಿತ್ತು,ರಸ್ತೆ ಮತ್ತು ಅಲ್ಲಲ್ಲಿ ಇರುವ ಸಿಡಿಗಳು ಹಾಳಾಗಿ ಹೊಗಿದ್ದರಿಂದ ನಾಲ್ಕು ಚಕ್ರದ ವಾಹನಗಳು ಸಂಚಾರ ಮಾಡಲು ಸಾಧ್ಯವಿಲ್ಲ, ದ್ವಿಚಕ್ರ ವಾಹನ ಸವಾರರು ಕೂಡ ಮೃತ್ಯುವಿನ ಭಯದಲ್ಲಿ ಸಾಗುತ್ತಿರುತ್ತವೆ, ಸ್ವಲ್ಪವೂ ಯಾಮಾರಿದರೂ ಹಳ್ಳಕ್ಕೆ ಬೀಳುವುದು ಖಚಿತ. ಅದೇ ಸಿಡಿ ಮೇಲೆ ಸಾಗುವಾಗ ಟ್ರ್ಯಾಕ್ಟರ್ ಒಂದು ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋದ ಉದಾಹರಣೆ ಇದೆ. ಇನ್ನೂ ಇಂತಹ ಎಷ್ಟು ದುರಂತದ ಘಟನೆಗಳು ನಡೆಯಬೇಕು, ಬಡ ಜನರ, ರೈತರ, ವಿದ್ಯಾರ್ಥಿಗಳ ಜೀವದ ಪ್ರಶ್ನೆ ಕಾಡುತ್ತಿದೆ, ಚುನಾಯಿತ ಪ್ರತಿನಿಧಿಗಳು ತಕ್ಷಣ ಎಚ್ಚೆತ್ತು ಒಳ ಸಂಪರ್ಕ ರಸ್ತೆ ದುರಸ್ತಿ ಮತ್ತು ಸಿಡಿಗಳ ಬದಲಿಗೆ ಸೇತುವೆಗಳನ್ನು ನಿರ್ಮಿಸಿ ಇದರಿಂದ ನಾಗರಿಕರ ಸಮಯ,ಹಣ ಹಾಗೂ ಜೀವಗಳು ಉಳಿಸಲು ಸಾಧ್ಯ , ಕವಲೂರಿನ ಜನರಿಗೆ, ರೋಗಿಗಳಿಗೆ,ವಿದ್ಯಾರ್ಥಿಗಳಿಗೆ ಜಿಲ್ಲಾ ಆಡಳಿತಕ್ಕೆ, ಜಿಲ್ಲಾ ಆಸ್ಪತ್ರೆಗೆ, ಉನ್ನತ ಶಿಕ್ಷಣಕ್ಕೆ ಬಂದು ಹೋಗಲು ಮೊದಲಿನಂತೆ ಬಸ್ ಸಂಚಾರ ವ್ಯವಸ್ಥೆ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು, ಕೊಪ್ಪಳ ವಿಧಾನ ಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶದ ಬಹುತೇಕ ರಸ್ತೆಗಳು ಹಾಳಾಗಿವೆ, ಮಳೆಗೆ ಕೊಪ್ಪಳ ಹಾಗೂ ಭಾಗ್ಯನಗರ ಅವಳಿ ನಗರಗಳ ಬಹುತೇಕ ಬಡಾವಣೆಗಳ ರಸ್ತೆಗಳು ಅಲ್ಲಲ್ಲಿ ತಗ್ಗುಗಳು ಬಿದ್ದಿದ್ದು, ತುರ್ತು ದುರಸ್ತಿ ಮಾಡಲು ಅಗತ್ಯ ಕ್ರಮ ವಹಿಸಬೇಕು,

ಕೆಲವು ರಸ್ತೆಗಳಲ್ಲಿ ಅಲ್ಲಲ್ಲಿ ಬಿದ್ದಿರುವ ಸಣ್ಣಪುಟ್ಟ ತಗ್ಗುಗಳನ್ನು ಮುಚ್ಚಿಸಿ, ವೇಗ ನಿಯಂತ್ರಣಕ್ಕೆ ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ಹಾಕಲಾದ ಉಬ್ಬು ತಗ್ಗು (ಸ್ಪೀಡ್ ಬ್ರೇಕರ್) ತೆರವುಗೊಳಿಸಿ,ವೈಜ್ಞಾನಿಕ ಪದ್ದತಿ ಅನುಸರಿಸಿ ಉಚ್ಚ ನ್ಯಾಯಾಲಯದ ಆಶಯದಂತೆ ಅಗತ್ಯವಿದ್ದಲ್ಲಿ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಲು ಶಾಸಕ ಕೆ.ರಾಘವೇಂದ್ರ ಬಿ.ಹಿಟ್ನಾಳ,ಸಂಸದ ರಾಜಶೇಖರ್ ಬಿ.ಹಿಟ್ನಾಳ ತಾವಿಬ್ಬರೂ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು,

ಮನವಿ ಸ್ವೀಕರಿಸಿದ ಶಾಸಕ ಕೆ,ರಾಘವೇಂದ್ರ ಬಿ,ಹಿಟ್ನಾಳ ಮಾತನಾಡಿ ಕೊಪ್ಪಳ ವಾಯ ಹಂದ್ರಾಳ ಕವಲೂರ ಒಳ ರಸ್ತೆ ಹಾಗೂ ಕೊಪ್ಪಳ ವಿಧಾನ ಸಭಾ ಕ್ಷೇತ್ರದ ಗ್ರಾಮೀಣ,ನಗರ ಪ್ರದೇಶದ ರಸ್ತೆಗಳನ್ನು ಶೀಘ್ರದಲ್ಲೇ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಆಶ್ವಾಸನೆ ನೀಡಿದರು.

ಈ ಸಂದರ್ಭದಲ್ಲಿ ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್, ಕೊಳಚೆ ನಿರ್ಮೂಲನಾ ವೇದಿಕೆಯ ಜಿಲ್ಲಾ ಸಂಚಾಲಕ ತುಕಾರಾಮ್ ಬಿ.ಪಾತ್ರೋಟಿ,ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ (ಎಐಟಿಯುಸಿ ಸಂಯೋಜಿತ) ತಾಲೂಕಾ ಉಪಾಧ್ಯಕ್ಷ ಮೌಲಾ ಹುಸೇನ್ ಹಣಗಿ. ಭಾಗ್ಯನಗರ ಘಟಕದ ಅಧ್ಯಕ್ಷ ಪ್ರಕಾಶ್ ದೇವರ ಮನಿ, ಓಜಿನಹಳ್ಳಿ ಗ್ರಾಮ ಘಟಕದ ಅಧ್ಯಕ್ಷ ಸುರೇಶ್ ಓಜನಹಳ್ಳಿ ಮುಂತಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button