ಕೊಪ್ಪಳದಲ್ಲಿ ಗವಿಸಿದ್ದಪ್ಪ ನಾಯಕ್ ಕೊ**ಲೆ ಪ್ರಕರಣ; ಆಗಸ್ಟ್ 11ರಂದು ಬೃಹತ್ ಪ್ರತಿಭಟನೆ

ಗವಿಸಿದ್ದಪ್ಪ ನಾಯಕ ಕೊ**ಲೆ ಪ್ರಕರಣ : ಆ.11ರಂದು ಪಕ್ಷಾತೀತ ಬೃಹತ್ ಪ್ರತಿಭಟನೆ
ಕೊಪ್ಪಳ: ಗವಿ ನಾಯಕ ಕೊಲೆ ಪ್ರಕರಣ ಖಂಡಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾ ಟಕ ಆ.11ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಜಾತಿ, ಪಕ್ಷ ಭೇದ ತೊರೆದು ಎಲ್ಲರೂ ಭಾಗಿಯಾಗಿ ಬೆಂಬಲಿಸುವಂತೆ ಮಹಾಸಭಾ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ಪಾಟೀಲ್ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಇದೊಂದು ವ್ಯವಸ್ಥಿತ ಕೊಲೆ. ಪ್ರಕರಣದ ಹಿಂದೆ ಯಾರೇ ಇರಲಿ. ಅವರಿಗೆ ಶಿಕ್ಷೆ ಆಗಬೇಕೆಂಬುದು ನಮ್ಮ ಉದ್ದೇಶ. ಹೀಗಾಗಿ ಆ.11ರಂದು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಯಾವುದೇ ಪಕ್ಷ, ಜಾತಿ, ಸಂಟನೆ ಇರಲಿ. ಎಲ್ಲರೂ ನ್ಯಾಯಕ್ಕಾಗಿ ನಮ್ಮೊಡನೆ ಕೈ ಜೋಡಿಸಿ. ಪಕ್ಷ, ಸಂಟನೆ ಬ್ಯಾನರ್ ಬೇಡ. ಕೊಲೆ ಮಾಡಿದವರಿಗೆ ಗಲ್ಲು ಶಿೆ ಆಗಬೇಕು. ಗಡಿಯಾರಕಂಬ ವೃತ್ತದಿಂದ ಅಶೋಕ ವೃತ್ತವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಸಾವಿರಾರು ಜನರು ಭಾಗಿಯಾಗುವರೆಂದು ಮಾಹಿತಿ ನೀಡಿದರು.
ಗವಿ ನಾಯಕ ತಂದೆ ನಿಂಗಜ್ಜ ಮಾತನಾಡಿ, ಬಾನು ಎಂಬ ಹುಡುಗಿಯಿಂದಲೇ ಕೊಲೆ ಆಗಿರುವುದು. ನಾವು ಎಷ್ಟು ತಿಳಿಸಿ ಹೇಳಿದರೂ ಕೇಳಿಲ್ಲ. ಕೊಲೆ ಆದ ದಿನ 19 ಬಾರಿ ನನ್ನ ಮಗನಿಗೆ ಕರೆ ಮಾಡಿದ್ದಾಳೆ. ಆಕೆಗೂ ಶಿೆಯಾಗಬೇಕು. ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕು. ಪ್ರತಿಭಟನೆಗೆ ನಮ್ಮ ಕುಟುಂಬದ ಬೆಂಬಲ ಇದೆ ಎಂದರು.
ವಾಲ್ಮೀಕಿ ನಾಯಕ ಸಮುದಾಯ ಪ್ರಮುಖರಾದ ಸುರೇಶ ಡೊಣ್ಣಿ, ಶರಣಪ್ಪ ನಾಯಕ, ನಾಗರಾಜ ಬಿಲ್ಗಾರ, ನಿಂಗಪ್ಪ ನಾಯಕ,. ರವಿಕುಮಾರ ಬನ್ನಿಕೊಪ್ಪ, ಶಾಂತಪ್ಪ ಪೂಜಾರ, ನಿಂಗಜ್ಜ ದದೇಗಲ್, ಡಾ.ಗೀತಾ ಮತ್ತಾಳ, ಗವಿನಾಯಕ ಕುಟುಂಬದವರು ಇದ್ದರು.