ದಿನಾಂಕ: 10 ರಂದು ಹಾಲುಮತ ಧರ್ಮ ಮತ್ತು ಪರಿಸರ ಜಾಗೃತಿಗಾಗಿ ಶ್ರಾವಣ ಯಾತ್ರೆ..!

ಕೊಪ್ಪಳ : ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠ ಕಲಬುರಗಿ ವಿಭಾಗದ ತಿಂತಿಣಿ ಬ್ರಿಡ್ಜ್ ಪೀಠಾದೀಶರಾದ ಪರಮ ಪೂಜ್ಯ ಶ್ರೀ ಸಿದ್ಧರಾಮನಂದ ಮಹಾಸ್ವಾಮಿಗಳು ಅವರು ಹಾಲುಮತ ಧರ್ಮ ಮತ್ತು ಪರಿಸರ ಜಾಗೃತಿಗಾಗಿ ಶ್ರಾವಣ ಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು. ಹಾಲುಮತ ಮಹಾಸಭಾ ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ಕೌದಿ ಗುರುವಾರ ರಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಶಿ ಮಾತನಾಡಿದ ಇವರು
ಸುಮಾರು 15 ವರ್ಷಗಳಿಂದ ದರ್ಮ ಮತ್ತು ಪರಿಸರ ಜಾಗೃತಿಗಾಗಿ ಶ್ರಾವಣ ಯಾತ್ರೆ ಕಾರ್ಯಕ್ರಮ ಮಾಡಲಾಗುತ್ತಿದೆ.
ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠ ಕಲಬುರಗಿ ವಿಭಾಗದ ತಿಂತಿಣಿ ಬ್ರಿಷ್ ಪೀಠಾದೀಶರಾದ ಪರಮ ಪೂಜ್ಯ ಶ್ರೀ ಸಿದ್ಧರಾಮನಂದ ಮಹಾಸ್ವಾಮಿಗಳು ಅವರು ಹಾಲುಮತ ಧರ್ಮ ಮತ್ತು ಪರಿಸರ ಜಾಗೃತಿಗಾಗಿ ಶ್ರಾವಣ ಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ದಿನಾಂಕ 10-08-2025 ರವಿವಾರ ಮದ್ಯಾಹ್ನ 1:00ಕ್ಕೆ ಕೊಪ್ಪಳ ನಗರಕ್ಕೆ, ಈ ಯಾತ್ರೆ ಆಗಮಿಸುತ್ತಿದ್ದು ನಗರದ ಮಧುಶ್ರೀಗಾರ್ಡನ್ ಕಲ್ಯಾಣ ಮಂಟಪದಲ್ಲಿ ಶ್ರಾವಣ ಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಎಂದು ಹೇಳಿದರು.
ನಂತರ ಮಾತನಾಡಿದ ಕನಕಗುರು ಪೀಠ ಸಮಿತಿ ತಾಲೂಕು ಅಧ್ಯಕ್ಷರಾದ ಮುದ್ದಪ ಜಿ ಬೇವಿನಹಳ್ಳಿ ಮಾತನಾಡಿ. ದಿನಾಂಕ:08 ರಂದು ಕುಕನೂರ ಮತ್ತು ಯಲಬುರ್ಗಾ ತಾಲೂಕಿನಲ್ಲಿ ಬೀರ್ಲಿಂಗೇಶ್ವರ ದೇವಸ್ಥಾನದಲ್ಲಿ ಆಯೋಜನೆ ಮಾಡಲಾಗಿದೆ. ಧರ್ಮ ಮತ್ತು ಪರಿಸರ ಜಾಗೃತಿ ಸಮಾವೇಶ ಪ್ರಯುಕ್ತ ಶ್ರೀ ಸಿದ್ದೇಶ್ವರ ಮಹಾ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಸಲಾಗುತ್ತಿದೆ.ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ದಿನಾಂಕ 10-08-2025 ರವಿವಾರ ಮದ್ಯಾಹ್ನ 1:00ಕ್ಕೆ ಕೊಪ್ಪಳ ನಗರಕ್ಕೆ, ಈ ಯಾತ್ರೆ ಆಗಮಿಸಳಲಿದ್ದು
ಡೊಳ್ಳು ವಾದ್ಯಗಳು, ಕುಂಭ ಕಳಸ ಸಮೇತ, ಮೆರವಣಿಗೆ ಇರುತ್ತದೆ. ಕಾರ್ಯಕ್ರಮಕ್ಕೆ ಬರುವ ಎಲ್ಲರಿಗೂ ಸಸಿ ಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ನಗರದ ಮಧುಶ್ರೀ ಗಾರ್ಡನ್ ಕಲ್ಯಾಣ ಮಂಟಪದಲ್ಲಿ ಶ್ರಾವಣ ಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಈ ಸಂಧರ್ಭದಲ್ಲಿ, ಜಿಲ್ಲಾ ಉಪಾಧ್ಯಕ್ಷರಾದ ಕುಮಾರ ಮಜ್ಜಿಗಿ,ನಗರ ಘಟಕ ಅಧ್ಯಕ್ಷ ವಿರಾಪಕ್ಷಪ್ಪ ಮೊರ್ನಾಳ, ಶಿವು ಯಲಬುರ್ಗಾ, ಅಂದಾನಸ್ವಾಮಿ, ಹನುಮಂತಪ್ಪ, ಇನ್ನಿತರರಿದ್ದರು.