ಕೊಪ್ಪಳಜಿಲ್ಲಾ ಸುದ್ದಿಗಳು

ಜನವರಿ 6 ರಂದು ಕೊಪ್ಪಳ ಸಂಪೂರ್ಣ ಬಂದ್: ಹನುಮೇಶ್ ಕಡೆಮನಿ

 

ಕೊಪ್ಪಳ: ಬಾಬಾ ಸಾಹೇಬ ಬಿ.ಆ‌ರ್. ಅಂಬೇಡ್ಕ‌ರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದನ್ನು ಖಂಡಿಸಿ ಜನವರಿ 6 ರಂದು ಕೊಪ್ಪಳ ಬಂದ್ ಗೆ ಕರೆ ನೀಡಲಾಗಿದೆ ಅಂದು ಸಾರಿಗೆ ಸಂಚಾರ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಎಂದು ಸಂವಿಧಾನ ಸಂರಕ್ಷಣಾ ಸಮಿತಿಯ ಜಿಲ್ಲಾ ಸಮಿತಿ ಮುಖಂಡರಾದ ಹನುಮೇಶ್ ಕಡೆಮನಿ ತಿಳಿಸಿದರು.

ಅವರು ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೇಂದ್ರ ಸಂಸತ್ತು ಅಧಿವೇಶನದಲ್ಲಿ ನಡೆದ ಚರ್ಚೆ ವೇಳೆ ಗೃಹ ಸಚಿವ ಅಮಿತ್ ಶಾ ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ. ಅವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡಿ ದೇಶದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ಜ.6 ರಂದು ಕೊಪ್ಪಳ ಬಂದ್ ಗೆ ಅಹಿಂದ, ಅಲ್ಪ ಸಂಖ್ಯಾತರ ಸಂಘಟನೆಗಳು ಹಾಗೂ ಬಿ.ಆ‌ರ್.ಅಂಬೇಡ್ಕ‌ರ್ ಅವರ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ. ಬಂದ್ ದಿನ ಸಾರಿಗೆ ಸಂಚಾರ ಹಾಗೂ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್‌ ಆಗಲಿದೆ, ಈಗಾಗಲೇ ವ್ಯಾಪಾರಸ್ಥರೊಂದಿಗೆ ಚರ್ಚಿಸಲಾಗಿದೆ ಬಂದ್ ಗೆ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದರು.

ಅಂದು ಬೆಳಿಗ್ಗೆ 7 ರಿಂದ 8:30ರ ವರೆಗೆ ಬೈಕ್ ರಾಲಿ ನಗರದ ತಾಲೂಕ ಕ್ರೀಡಾಂಗಣದಿಂದ ಅಂಬೇಡ್ಕರ್ ಸರ್ಕಲ್, ಗಡಿಯಾರ ಕಂಬದ ಮೂಲಕ ಅಶೋಕ ಸರ್ಕಲ್ ಗೆ ಪ್ರತಿಭಟನಾ ಮೆರವಣಿಗೆ ಆಗಮಿಸಿ ಬಹಿರಂಗ ಸಭೆ ನಡೆಯುತ್ತದೆ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು, ಅಂದು ಬಂದ್ ಗೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿಯ ಜಿಲ್ಲಾ ಮುಖಂಡರಾದ ಜಿ.ಎಂ ಬೆಲ್ಲದ್, ಸಾವಿತ್ರಿ ಮುಜಂದಾರ್, ರಾಮಣ್ಣ ಚೌಡಿಕಿ, ಯಮನೂರಪ್ಪ ನಾಯಕ್,ಕಾಶಪ್ಪ ಚಲವಾದಿ,ಪರಶುರಾಮ್ ಕೆರೆಹಳ್ಳಿ, ಸಲೀಂ ಅಳವಂಡಿ, ಮಾನ್ವಿ ಪಾಶ, ಸಂಜಯ್ ದಾಸ್, ಹುಲುಗಪ್ಪ ಹಾಟಿ, ಸೇರಿದಂತೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button