Blog

ಡಿ.29ರಿಂದ ಲಿಂಗಸುಗೂರಿನಲ್ಲಿ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನ:ಸಿಎಂ ಸಿದ್ಧರಾಮಯ್ಯ ಉದ್ಘಾಟನೆ

ಡಿ.29ರಿಂದ ಲಿಂಗಸುಗೂರಿನಲ್ಲಿ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನ:ಸಿಎಂ ಸಿದ್ಧರಾಮಯ್ಯ ಉದ್ಘಾಟನೆ

ಸಮರ್ಥವಾಣಿ ವಾರ್ತೆ
ಲಿಂಗಸುಗೂರು,ಡಿ.28:
ವೈಜ್ಞಾನಿಕ ಸಂಶೋಧನಾ ಪರಿಷತ್ ನಡೆಸುವ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನ ಈ ಭಾರಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್ ೨೯ ಮತ್ತು ೩೦ ರಂದು ಎರಡು ದಿನಕಾಲ ನಡೆಯುವ ಸಮ್ಮೇಳನಕ್ಕೆ ಸಿದ್ಧತೆ ಭರದಿಂದ ಸಾಗಿದೆ.
ರಾಷ್ಟ್ರಕವಿ ಕುವೆಂಪು ಅವರ ಜನ್ಮದಂದೇ ಕಳೆದ ಎರಡು ವರ್ಷ ಗಳಿಂದ ಈಗಾಗಲೇ ವೈಜ್ಞಾನಿಕ ಸಮ್ಮೇಳನ ನಡೆಸಲಾಗಿದೆ. ೩ನೇ ಸಮ್ಮೇಳನ ಪಟ್ಟಣದಲ್ಲಿ ನಡೆಸಲು ವೈಜ್ಞಾನಿಕ ಸಂಶೋಧನಾ ಪರಿಷತ್ ತಿರ್ಮಾನಿಸಿ ಅದಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ.
ಭವ್ಯ ವೇದಿಕೆ: ಪಟ್ಟಣದ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ಸಮ್ಮೇಳನಕ್ಕೆ ವೇದಿಕೆ ಸಿದ್ಧಗೊಂಡಿದೆ. ೮೦*೪೦ ಅಳತೆಯ ಸಮಾರಂಭದ ಮುಖ್ಯವೇದಿಕೆ, ೧೦ ಸಾವಿರ ಗಣ್ಯರು ಹಾಗೂ ಸಾರ್ವಜನಿಕರು ಕೂರಲು ಆಸನದ ವ್ಯವಸ್ಥೆ, ಊಟ ಹಾಗೂ ವಿವಿಧ ಮಳಿಗೆಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಮಾರಂಭಕ್ಕೆ ಬಂದವವರಿಗೆ ಎರಡು ದಿನಗಳ ಕಾಲ ವಿವಿಧ ರುಚಿಕರವಾದ ಊಟದ ವ್ಯವಸ್ಥೆ ತಯಾರಿ ಮಾಡಿಕೊ ಲಾಗಿದೆ.
ಸಿಎಂ ಸಿದ್ಧರಾಮಯ್ಯ ಚಾಲನೆ: ೩ನೇ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನ ವನ್ನು ಸಿಎಂ ಸಿದ್ಧರಾಮಯ್ಯ ಉದ್ಘಾಟಿಸುವವರು, ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಲಾಗಿದೆ. ಇದಲ್ಲದೆ ಸಮಾರಂಭ ದಲ್ಲಿ ವಿಜ್ಞಾನ ಮತ್ತು ಮಾಹಿತಿ ಖಾತೆ ಸಚಿವ ಎನ್.ಎಸ್.ಬೋಸ್‌ರಾಜ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಸಚಿವ ರಾದ ಪ್ರೀಯಾಂಕ್ ಖರ್ಗೆ, ಶಿವರಾಜ ತಂಗಡಗಿ, ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ಮಾನಪ್ಪ ವಜ್ಜಲ್, ಶರಣಗೌಡ ಬಯ್ಯಾಪುರ, ಮಾಜಿ ಶಾಸಕರಾದ ಅಮರೇಗೌಡ ಬಯ್ಯಾಪುರ, ಡಿ.ಎಸ್. ಹೂಲಗೇರಿ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸುವವರು.
ವೈಚಾರಿಕ ವಿಚಾರ ಗೋಷ್ಠಿ: ಸಮ್ಮೇಳನದ ಮೊದಲ ದಿನದಂದು ಮೊದಲನೇ ಗೋಷ್ಠಿ ನಮ್ಮ ಸಂವಿಧಾನ ನಮ್ಮ ಹಕ್ಕು, ಸಮ್ಮೇಳನಾಧ್ಯಕ್ಷರ ಸಾಧನೆ-ಸಂವೇದನೆ-ಸಂವಾದ ಮಹಿಳೆ ಮತ್ತು ವೈಚಾರಿಕತೆ-ಮನಸ್ಸು, ಎರಡನೇ ದಿನದಂದು ವಿಜ್ಞಾನದ ಮೇಲಿನ ದಾಳಿ ಮತ್ತು ಪ್ರತಿರೋಧಗಳು, ಯುವ ಜನತೆ ಮತ್ತು ವೈಜ್ಞಾನಿಕತೆ, ಆರೋಗ್ಯ ನಂಬಿಕೆ ಆಚರಣೆ, ರಾಯಚೂರು-ಸಂಸ್ಕೃತಿ-ವೈವಿಧ್ಯತೆ ವಿಷಯದ ಕುರಿತು ಗೋಷ್ಠಿಯಲ್ಲಿ ಚರ್ಚೆ ನಡೆಯಲಿದ್ದು, ಪ್ರತಿ ದಿನ ಸಂಜೆ ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಾಗೂ ನಾಟಕ ಪ್ರದರ್ಶನಗಳು ನಡೆಯಲಿವೆ.
ಜೀವಮಾನವ ಸಾಧನ ಪ್ರಶಸ್ತಿ: ಸಮ್ಮೇಳನದಲ್ಲಿ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಪ್ರಗತಿಪರ ಚಿಂತಕಿ ಬಿ.ಟಿ.ಲಲಿತಾ ನಾಯಕ್, ಅಂತರಾಷ್ಟ್ರೀಯ ಕೌಶಲ್ಯ ತರಬೇತು ದಾರ ಚೇತನ್‌ರಾಮ್, ಲೈಂಗಿಕ ಅಲ್ಪಸಂಖ್ಯಾತರ ಪರ ಹೋರಾಟ ಗಾರ್ತಿ ಅಕಾಯಿ ಪದ್ಮಸಾಲಿ, ಪ್ರಗತಿಪರ ಚಿಂತಕ ಆರ್.ಮಾನಸಯ್ಯ ಇವರಿಗೆ ಜೀವಮಾನ ಸಾಧನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ವಿಶಿಷ್ಟ ಸೇವಾ ಪ್ರಶಸ್ತಿಗೆ ಸಂತೆಕೆಲ್ಲೂರಿನ ಡಾ.ಸಿದ್ಧರಾಮಪ್ಪ ಸಾಹುಕಾರ, ಬೆಂಗಳೂರಿನ ಬಿ.ಸಿ.ಕಿರಣಕುಮಾರ್, ಕೂಡ್ಲಗಿ ಎನ್.ಲಕ್ಷ್ಮೀದೇವಿ, ಲಿಂಗಸುಗೂರಿನ ಬಸಮ್ಮ ತೆಗ್ಗಿನಮನಿ, ಚಿಕ್ಕನಾಯಕನಹಳ್ಳಿ ಜಗದೀಶ, ಹಾಸನದ ಜಯಪ್ರಸಾದ್, ಬಾಗಲಕೋಟಿಯ ರಕ್ಷಿತಾ ಭರತ್‌ಕುಮಾರ ಈಟಿ, ತುಮುಕೂರಿನ ಹೆಚ್.ಎಸ್.ನವೀನ್‌ಕುಮಾರ್, ಹಾಸನ ಗೋಪಾಲ್, ಸುಧಾ ಬೆಂಗಳೂರು, ಎಂ.ಮಂಜುನಾಥ, ಲಯನ್ ಮುನಿರಾಜು ಹಾಗೂ ವಿಶೇಷವಾಗಿ ವಿಜ್ಞಾನ ಗ್ರಾಮಕ್ಕೆ ೧೦ಎಕರೆ ಜಾಗವನ್ನು ದಾನವಾಗಿ ನೀಡಿರುವ ಆರ್.ರವಿ ಬಿಳಿಶಿವಾಲೆ ಆಯ್ಕೆ ಮಾಡಲಾಗಿದೆ. ರಾಜ್ಯದ ೩೭ ಶೈಕ್ಷಣಿಕ ಜಿಲ್ಲೆಗಳಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಜ್ಯಮಟ್ಟದ ಹೆಚ್.ಎನ್.ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
ವಿದ್ಯಾರ್ಥಿಗಳಿಗಾಗಿ ವಿವಿಧ ಪ್ರದರ್ಶನ: ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವೈಚಾರಿಕ ಜ್ಞಾನ ಬೆಳೆಸುವ ಉದ್ದೇಶದಿಂದ ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂ, ಇಸ್ರೋ ಸಂಸ್ಥೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಹಾಗೂ ಜವಾಹರಲಾಲ್ ನೆಹರು ತಾರಾಲಯ ವತಿಯಿಂದ ಸಮ್ಮೇಳನದಲ್ಲಿ ವಿಜ್ಞಾನ, ಖಗೋಳ, ತಂತ್ರಜ್ಞಾನ ಮತ್ತು ವಸ್ತು ಪ್ರದರ್ಶನ ಏರ್ಪಡಿಸಿದ್ದು ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಅರಿವುಹೊಂದಲು ಸುವರ್ಣಾವಕಾಶ ಒದಗಿಸಲಾಗಿದೆ.
ಸಮ್ಮೇಳನದ ಮೊದಲ ದಿನದಂದು ಬೆಳಗ್ಗೆ ೮ಗಂಟೆಗೆ ಲಿಂಗಸುಗೂರು ಸಹಾಯಕ ಆಯುಕ್ತರಾದ ಶಿಂಧೆ ಅವಿನಾಶ್ ಸಂಜೀವನ ರಾಷ ಧ್ವಜಾರೋಹಣ ಹಾಗೂ ಡಾ.ಹುಲಿಕಲ್ ನಟರಾಜ್ ಪರಿಷತ್ತಿನ ಧ್ವಜಾರೋಹಣವನ್ನು ನೆರವೇರಿಸುವರು.
ಧ್ವಜಾರೋಹಣದ ನಂತರ ವಿವಿಧ ಕಲಾತಂಡ ಗಳೊಂದಿಗೆ ಸಮ್ಮೇಳನಾಧ್ಯಕ್ಷ ಸಚಿವ ಸತೀಶ ಜಾರಕಿಹೊಳಿ ಅವರನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ವೇದಿಕೆ ಕರೆತರಲಾಗುವುದು.

Related Articles

Leave a Reply

Your email address will not be published. Required fields are marked *

Back to top button