Blog

ದೆಹಲಿ ರೈತರ ಪ್ರತಿಭಟನೆ:ಹರಿಪ್ರಕಾಶ ಕೊಣೆಮನೆ ಪ್ರತಿಕ್ರೀಯೆ.. ಚೀನಾ ಪ್ರೇರಿತ ಕಾಂಗ್ರೆಸ್ ಬೆಂಬಲಿತ ಹೋರಾಟ

ಗಂಗಾವತಿ.
ಪಂಜಾಬ್, ಹರಿಯಾಣ ಮತ್ತಿತರ ಭಾಗದಿಂದ ದೆಹಲಿ ಗಡಿಯಲ್ಲಿ ಹೋರಾಟ ಮಾಡಲು ಮುಂದಾಗಿರುವ ರೈತರು ನಿಜವಾದ ರೈತರಲ್ಲ. ಕೇಂದ್ರ ಸರಕಾರದ ವಿರುದ್ಧ ಅಪಪ್ರಚಾರ ಸೃಷ್ಟಿಸಿ ಧಂಗೆ ಎಬ್ಬಿಸಲು ಸಜ್ಜಾಗಿ ಬಂದಿರುವ ಚೀನಾ ಪ್ರೇರಿತ ಮತ್ತು ಕಾಂಗ್ರೆಸ್ ಬೆಂಬಲಿಗರು ಹೋರಾಟ ನಡೆಸುತ್ತಿದ್ದಾರೆ. ಅವರಲ್ಲಿ ನಿಜವಾದ ರೈತಪರ ಕಾಳಜಿ ಇಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣಿವನೆ ಹೇಳಿದರು.
ಖಾಸಗಿ ಕಾರ್ಯಕ್ರಮ ನಿಮಿತ್ಯ ಬುಧವಾರ ನಗರಕ್ಕೆ ಆಗಮಿಸಿದ್ದ ಅವರು ಕೇಂದ್ರ ಸರಕಾರದ ವಿರುದ್ಧ ದೆಹಲಿಯಲ್ಲಿ ಸಾವಿರಾರು ರೈತರು ಬೃಹತ್ ಆಂದೋಲನ ಪ್ರಾರಂಭಿಸಿದ್ದು, ಕೇಂದ್ರಕ್ಕೆ ಸಂಕಷ್ಟ ಎದುರಾಗುವ ಸನ್ನಿವೇಶ ಸೃಷ್ಟಿಯಾಗುತ್ತಿದೆಯಲ್ಲವೇ ಎಂಬ ಸುದ್ದಿಗಾರರ ಪ್ರಶ್ನೇಗೆ ಅವರು ಉತ್ತರಿಸಿ ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರೈತಪರ ಸರಕವಾಗಿ ಕೆಲಸ ಮಾಡುತ್ತಿದೆ. ದೇಶದ ಜನತೆ ಮೋದಿ ಅವರ ಆಡಳಿತವನ್ನು ಮೆಚ್ಚಿಕೊಂಡು ಮತ್ತೊಮ್ಮೆ ಅವರನ್ನು ಪ್ರಧಾನಿಯನ್ನಾಗಿ ಮಾಡುವ ಉತ್ಸಾಹದಲ್ಲಿ ಇದ್ದಾರೆ. ಇದನ್ನು ಸಹಿಸದ ಕಾಂಗ್ರೆಸ್ ಪಕ್ಷ ಚೀನಾ ದೇಶದ ಪ್ರೇರಣೆಯಿಂದ ರೈತರ ಹೆಸರಿನಲ್ಲಿ ಹಲವು ಉಗ್ರವಾದದ ಮನಸ್ಸಿನ ಜನರನ್ನು ಪ್ರತಿಭಟನೆ ಹೆಸರಿನಲ್ಲಿ ದೇಹಲಿಗೆ ನುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ದಿನದಿಂದ ಪ್ರಾರಂಭವಾಗಿರುವ ರೈತರ ಹೆಸರಿನಲ್ಲಿ ಹೋರಾಟಕ್ಕೆ ಹೊರಟವರ ಮನಸ್ಥಿತಿ ಹೇಗೆ ಇದೆ ಎಂಬುದು ದೇಶದ ಜನತೆ ಮಾಧ್ಯಮಗಳ ಮೂಲಕ ನೋಡುತ್ತಿದ್ದಾರೆ. ನಿಜವಾದ ರೈತರಾಗಿದ್ದರೆ ಶಾಂತರೀತಿಯಿಂದ ಪ್ರತಿಭಟನೆ ನಡೆಸಿ ತಮ್ಮ ಹಕ್ಕು ಮಂಡನೆ ಮಾಡುತ್ತಾರೆ. ಆದರೆ ದೇಹಲಿ ಹೋರಾಟದಲ್ಲಿ ಭಾಗವಹಿಸುತ್ತಿರುವ ಸಾವಿರಾರು ಜನರ ಗುಂಪು ಮುಂಚಿತವಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡು ಗಲಭೆ ಎಬ್ಬಿಸುವ ರೀತಿಯಲ್ಲಿ ನುಗ್ಗುವ ಯತ್ನ ಮಾಡುತ್ತಿದ್ದಾರೆ. ಟ್ರಾಕ್ಟರ್‌ನಲ್ಲಿ ಶಸ್ತ್ರಾಗಳೊಂದಿಗೆ ಯುದ್ಧಕ್ಕೆ ಹೊರಟ ರೀತಿ ಸಜ್ಜಾಗಿ ಬರುತ್ತಿದ್ದಾರೆ. ಆರು ತಿಂಗಳ ಕಾಲ ಹೋರಾಟ ನಡೆಸಬೇಕೆಂಬ ಮಾನಸಿಕತೆಯಿಂದ ಬರುತ್ತಿರುವ ಅವರೆಲ್ಲರೂ ಊಟ, ವಸತಿ ಸೇರಿದಂತೆ ಎಲ್ಲಾ ಸೌಕರ್ಯಗಳಿಂದ ಬಂದಿದ್ದಾರೆ. ರೂ.೫೦ ಲಕ್ಷ ಕಾರಿನಲ್ಲಿ ಬಂದು ಹೋರಾಟ ಮಾಡುವವರು ನಿಜವಾದ ರೈತರಲ್ಲ. ವಿದೇಶಿ ಕೈವಾಡವಿದೆ. ಪ್ರಧಾನಿ ನರೇಂದ್ರ ಮತ್ತು ಕೇಂದ್ರ ಸರಕಾರ ದೇಶದ ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಕೇಂದ್ರ ಸರಕಾರ ರೂ.೪೦ ಸಾವಿರ ಕೋಟಿ ಬಜೆಟ್‌ನಲ್ಲಿ ರೂ.೧೦ ಸಾವಿರ ಕೋಟಿ ಕೃಷಿಗೆ ಮಿಸಲಿಟ್ಟಿದೆ. ಪ್ರತಿ ವರ್ಷ ವಿಮೆ ಸೇರಿದಂತೆ ರೈತರ ಸಮಸ್ಯೆಗೆ ಸ್ಪಂದಿಸುತ್ತಿದೆ ಎಂದು ಸ್ಪಷ್ಟಪಡಿಸಿದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ೨೮ ಕ್ಷೇತ್ರಗಳಲ್ಲೂ ಬಿಜೆಪಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ. ರಾಜ್ಯದ ಕಾಂಗ್ರೆಸ್ ಸರಕಾರ ಗ್ಯಾರಂಟಿ ಹೆಸರಿನಲ್ಲಿ ಯಾವ ರೀತಿ ವಂಚನೆ ಮಾಡುತ್ತಿದೆ ಎಂಬುದು ಜನರಿಗೆ ಅರ್ಥವಾಗುತ್ತಿದೆ. ಕಾಂಗ್ರೆಸ್ ಪಕ್ಷದ ಬಗ್ಗೆ ಜನರಲ್ಲಿ ಭ್ರಮನಿರಸನ ಮೂಡಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಗ್ಯಾರಂಟಿಗಳು ಕೆಲಸ ಮಾಡುವುದಿಲ್ಲ. ದೇಶದ ಹಿತದೃಷ್ಟಿಯಿಂದ ಜನರು ಮೋದಿ ನೇತೃತ್ವದ ಎನ್‌ಡಿಎಗೆ ಮತ ಹಾಕುತ್ತಾರೆ. ದೇಶಕ್ಕೆ ಪ್ರಬಲ ನಾಯಕನಿದ್ದಾನೆ ಎಂಬ ನಂಬಿಕೆ ಜನರಲ್ಲಿ ಮೂಡಿದೆ. ವಿಧಾನಸಭೆ ಚುನಾವಣೆಗೂ ಮತ್ತು ಲೋಕಸಭೆ ಚುನಾವಣೆಗೂ ವ್ಯತ್ಯಾಸವಿರುತ್ತದೆ. ಕೆಲವು ಕ್ಷೇತ್ರಗಳಲ್ಲಿ ಹಾಲಿ ಸಂಸದರ ಬದಲಾಗಿ ಹೊಸಬರಿಗೆ ಟಿಕೆಟ್ ನೀಡಬಹುದು. ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ನಾನು ಆಕಾಂಕ್ಷಿಯಾಗಿದ್ದೇನೆ. ಆದರೆ ಪಕ್ಷ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಕ್ಕೆ ನಾವೆಲ್ಲರು ಬದ್ಧರಾಗಿದ್ದು, ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷದ ಸೈದ್ಧಾಂತಿಕ ನಿಲುವಿನಲ್ಲಿ ಕೆಲಸ ಮಾಡುತ್ತಾರೆ ಎಂದು ಕೊಣೆಮಣಿ ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಮುಖಂಡ ನೆಕ್ಕಂಟಿ ಸೂರಿಬಾಬು, ಶ್ರವಣಕುಮಾರ ರಾಯ್ಕರ್ ಮತ್ತಿತರು ಇದ್ದರು.
ಬಾಕ್ಸ್:
ಅನುದಾನ ಕೋತಾ: ಕಾಂಗ್ರೆಸ್ ಸುಳ್ಳಿನ ಕಂತೆ
ರಾಜ್ಯಕ್ಕೆ ಬರಬೇಕಾಗಿರುವ ತೆರಿಗೆ ಹಣ ಕೇಂದ್ರ ಸರಕಾರ ನೀಡುತ್ತಿಲ್ಲ ಎಂದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯಾದಿಯಾಗಿ ಕಾಂಗ್ರೆಸ್ ಸರಕಾರದ ಸಚಿವರು ಹೇಳುತ್ತಿರುವುದು ಸುಳ್ಳಿನ ಕಂತೆಯಾಗಿದೆ. ತೆರಿಗೆ ಹಣ ರಾಜ್ಯಕ್ಕೆ ಯಾವ ಯಾವ ಮೂಲದಿಂದ ಬರುತ್ತಿದೆ ಎಂಬುದು ಗೊತ್ತಿದ್ದರೂ ಮೋದಿ ಅವರ ಬಗ್ಗೆ ಅಪಪ್ರಚಾರ ಮಾಡುವ ಉದ್ದೇಶದಿಂದ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಕಾಂಗ್ರೆಸ್‌ನವರು ನಾಟಕ ಮಾಡುತ್ತಿದ್ದಾರೆ. ಕಾಂಗ್ರೆಸ್ ಮಾಡುತ್ತಿರುವ ಷಡ್ಯಂತರಗಳ ಬಗ್ಗೆ ರಾಜ್ಯದ ಜನತೆ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಜನ ಬುದ್ಧಿ ಕಲಿಸಲಿದ್ದಾರೆ. ಬೆಂಗಳೂರು ಗ್ರಾಮಾಂತರ ಸೇರಿ ೨೮ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ.
ಹರಿಪ್ರಸಾದ ಕೊಣೆಮನೆ, ರಾಜ್ಯ ವಕ್ತಾರರು, ಬಿಜೆಪಿ ಕರ್ನಾಟಕ.

Related Articles

Leave a Reply

Your email address will not be published. Required fields are marked *

Back to top button