ಸಚಿವರ ಮಹತ್ವ ಯೋಜನೆಗೆ ಮಸಿ ಬಳಿಯುವ ಕೆಲಸ…..! ಇಂದಿರಾ ಕ್ಯಾಂಟೀನ್ ನಿರ್ವಹಣೆಯಲ್ಲಿ ಲೋಪ, ಕಳಪೆ ಆಹಾರ ಪೂರೈಕೆ

ವರದಿ ಸುಂದರರಾಜ್ BA ಕಾರಟಗಿ
ಕಾರಟಗಿ ಅಕ್ಟೋಬರ್ 17,2025 ; ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಸಚಿವರಾದ ಶಿವರಾಜ್ ಎಸ್ ತಂಗಡಗಿ ಅವರು ಕಾರಟಗಿ ಪಟ್ಟಣಕ್ಕೆ ಇಂದಿರಾ ಕ್ಯಾಂಟೀನ್ ಅನುಮೋದನೆ ನೀಡಿ ಪಟ್ಟಣಕ್ಕೆ ಬರುವ ಬಡವರಿಗೆ ಕಡಿಮೆ ದರದಲ್ಲಿ ಉತ್ತಮ ಆಹಾರ ನೀಡಿ ಬಡವರ ಹಸಿವು ನೀಗಿಸಲು ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿದ್ದಾರೆ. ಕೇವಲ 05ರೂಪಾಯಿ ದರದಲ್ಲಿ ಬೆಳಗಿನ ಉಪಹಾರ 10ರೂಪಾಯಿಗೆ ಮಧ್ಯಾಹ್ನ ಮತ್ತು ರಾತ್ರಿ ಊಟದ ಸದುಪಯೋಗವನ್ನು ಇಂದಿರಾ ಕ್ಯಾಂಟೀನ್ ನಲ್ಲಿ ಅಳವಡಿಸಲಾಗಿದೆ. ಆದರೆ ಇಂದಿರಾ ಕ್ಯಾಂಟೀನ್ ಟೆಂಡರ್ ಪಡೆದ ಗುತ್ತಿಗೆದಾರರು ಸಾರ್ವಜನಿಕರಿಗೆ ಆಹಾರ ಪೂರೈಕೆಯಲ್ಲಿ ಲೋಪ ಎಸೆಗುತ್ತಿದ್ದಾರೆ. ಕಳಪೆ ಮಟ್ಟದ ಅಕ್ಕಿಯನ್ನು ಬಳಸಿ ಆಹಾರ ತಯಾರು ಮಾಡುತ್ತಿದ್ದಾರೆ. ಮೆನು ಪ್ರಕಾರ ಆಹಾರ ಪೂರೈಕೆ ಮಾಡುತ್ತಿಲ್ಲ, ಬೆಳಗ್ಗೆ ಮಾತ್ರ ಮೆನು ಪ್ರಕಾರ ಉಪಹಾರ ಪೂರೈಕೆ ಮಾಡುತ್ತಿದ್ದಾರೆ ಆದರೆ ಮಧ್ಯಾಹ್ನ ಮತ್ತು ರಾತ್ರಿ ಸಮಯದಲ್ಲಿ ಮೆನು ಪ್ರಕಾರ ಆಹಾರ ಪೂರೈಕೆ ಮಾಡುತ್ತಿಲ್ಲ ಇದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ
ಇದರಿಂದಾಗಿ ಇಂದಿರಾ ಕ್ಯಾಂಟೀನ್ ಸಾರ್ವಜನಿಕರೇ ಆಹಾರ ತಯಾರಿಗೆ ಬಳಸುವ ಅಕ್ಕಿ ಮತ್ತು ಇತರೆ ಸಾಮಗ್ರಿಗಳನ್ನು ನೇರವಾಗಿ ಪರಿಶೀಲನೆ ನಡೆಸಿದ್ದಾರೆ. ಆ ಸಮಯದಲ್ಲಿ ಕಳಪೆ ಮಟ್ಟದ ಅಕ್ಕಿಯನ್ನು ಬಳಸಿ ಆಹಾರ ತಯಾರಿ ಮಾಡುತ್ತಿರುವುದು ಬಹಿರಂಗಗೊಂಡಿದೆ. ಕ್ವಿಂಟಲ್ ಗಟ್ಟಲೆ 25 ಕೆಜಿ ಪ್ಯಾಕೆಟ್ ಇರುವ ಕಳಪೆ ಮಟ್ಟದ ಅಕ್ಕಿಯ ಮೂಟೆಗಳು ಇರುವುದು ಪತ್ತೆಯಾಗಿದೆ, ತಿನ್ನುವ ಆಹಾರ ಸರಿಯಾಗಿ ಇಲ್ಲದೇ ಇರುವುದರಿಂದ ಹಲವು ಸಾರ್ವಜನಿಕರು ಆಹಾರವನ್ನು ಪ್ಲೇಟ್ ನಲ್ಲಿಯೇ ಉಳಿಸಿ ಹೊರ ಹೊರಟಿದ್ದಾರೆ ಇವೆಲ್ಲವೂ ಸಾರ್ವಜನಿಕರು ಇಂದಿರಾ ಕ್ಯಾಂಟೀನ್ ಅವ್ಯವಹಾರದ ಬಗ್ಗೆ ಮತ್ತು ಸಾರ್ವಜನಿಕರಿಗೆ ಕಳಪೆ ಮಟ್ಟದ ಆಹಾರ ಪೂರೇಕೆ ಬಗ್ಗೆ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿ ವಿಡಿಯೋ ಮಾಡಿ ಹರಿ ಬಿಟ್ಟಿದ್ದಾರೆ.
ಇಂದಿರಾ ಕ್ಯಾಂಟೀನ್ ಮೇಲ್ವಿಚಾರಣೆ ನಡೆಸಬೇಕಾದ ಅಧಿಕಾರಿಗಳು ಕಂಡು ಕಾಣದಂತಿರುವುದು ಖಂಡನೆಯಾಗಿದೆ, ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿ ಕೇವಲ ಎರಡು ತಿಂಗಳಗಳ ಅವಧಿಯಲ್ಲಿಯೇ ಕಾರಟಗಿ ಇಂದಿರಾ ಕ್ಯಾಂಟೀನ್ ಗೆ ಕಪ್ಪು ಚುಕ್ಕೆ ತಂದು ಸರಕಾರದ ಮಹತ್ವಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ ಬಗ್ಗೆ ಸಾರ್ವಜನಿಕರಿಗೆ ಅಸಮಾಧಾನ ಉಂಟಾಗಿದೆ. ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಬಡವರ ಹಸಿವು ನೀಗಿಸಲು ಪ್ರಾರಂಭಿಸಿದ ಇಂದಿರಾ ಕ್ಯಾಂಟೀನ್ ಇದೀಗ ಅಧಿಕಾರಿಗಳಿಂದ ಮತ್ತು ಟೆಂಡರ್ ದಾರರಿಂದಾಗಿ ಕಳಂಕಿತಗೊಂಡಿದೆ, ಕೂಡಲೇ ಇಂದಿರಾ ಕ್ಯಾಂಟೀನ್ ಉತ್ತಮ ರೀತಿಯಲ್ಲಿ ನಿರ್ವಹಿಸಿ ಬಡವರಿಗೆ ಉತ್ತಮ ಆಹಾರ ಪೂರೈಕೆ ಮಾಡುವಂತೆ ಸಚಿವರಾದ ಶಿವರಾಜ್ ಎಸ್ ತಂಗಡಗಿ ಅವರು ಅಧಿಕಾರಿಗಳಿಗೆ ತಾಕೀತು ಮಾಡುವುದು ಅನಿವಾರ್ಯವಾಗಿದೆ
ಇಂದಿರಾ ಕ್ಯಾಂಟೀನ್ ನಂಬಿಕೊಂಡು ಊಟ ಮಾಡಲು ಬರುವ ಬಡವರಿಗೆ ಕಳಪೆ ಮಟ್ಟದ ಅಕ್ಕಿಯಿಂದ ಆಹಾರ ತಯಾರಿಸಲಾಗುತ್ತಿರುವುದು ಖಂಡನೀಯ ಈ ಕುರಿತು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು……
ಮೌನೇಶ್ ಭಜರಂಗಿ ದಲಿತ ಮುಖಂಡರು
ಸರಕಾರದ ಮಹತ್ವಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ ನಲ್ಲಿ ಮೆನು ಪ್ರಕಾರ ಆಹಾರ ನೀಡುತ್ತಿಲ್ಲ ಇದರಿಂದಾಗಿ ಸರ್ಕಾರದ ಹಣ ದುರುಪಯೋಗ ಆಗುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ…..
ಶರಣಪ್ಪ ಸಂಗಟಿ
ನಮ್ಮ ನಾಡು ರಕ್ಷಣಾ ವೇದಿಕೆ ಯುವ ಘಟಕ ರಾಜ್ಯಧ್ಯಕ್ಷರು



