ಸಾರ್ವಜನಿಕ ಶೌಚಾಲಯ ನಿರ್ವಹಣೆಯಲ್ಲಿ ಲೋಪ, ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಒತ್ತಾಯ

ಸಾರ್ವಜನಿಕ ಶೌಚಾಲಯ ನಿರ್ವಹಣೆಯಲ್ಲಿ ಲೋಪ, ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಒತ್ತಾಯ
ವರದಿ: ಸುಂದರರಾಜ್ BA ಕಾರಟಗಿ
ಕಾರಟಗಿ ; ಪುರಸಭೆ ವ್ಯಾಪ್ತಿಯ ನೂತನ ಬಸ್ ನಿಲ್ದಾಣದ ಬಳಿ ಇರುವ ಸಾರ್ವಜನಿಕ ಶೌಚಾಲಯ ಕುರಿತು ಇತ್ತೀಚಿಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು ಸಾರ್ವಜನಿಕ ಶೌಚಾಲಯವನ್ನು ಗುತ್ತಿಗೆ ಪಡೆದು ನಿರ್ವಹಣೆ ಮಾಡಲು ಇರುವಂತಹ ವ್ಯಕ್ತಿ ಶೌಚಾಲಯವನ್ನು ಸರಿಯಾದ ಕ್ರಮದಲ್ಲಿ ನಿರ್ವಹಣೆ ಮಾಡ್ತಾ ಇಲ್ಲ ಶೌಚಾಲಯಗಳನ್ನು ಸ್ವಚ್ಛವಾಗಿ ಇಡುತ್ತಿಲ್ಲ ಎಂದು ಪಟ್ಟಣದ ಸಾರ್ವಜನಿಕರಿಂದ ದೂರುಗಳು ಕೇಳಿಬಂದಿದ್ದವು ಈ ಕುರಿತು ಕಾರಟಗಿ ಪುರಸಭೆಯ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್ ಇವರು ಇಂದು ಬಸ್ಟ್ಯಾಂಡ್ ಹತ್ತಿರದ ಸಾರ್ವಜನಿಕ ಶೌಚಾಲಯ ನಿರ್ವಹಣೆ ಕುರಿತು ಪ್ರಾತ್ಯಕ್ಷಿತವಾಗಿ ಪರಿಶೀಲಿಸಲು ಬಂದಿದ್ದರು, ಆ ಸಂದರ್ಭದಲ್ಲಿ ಶೌಚಾಲಯಗಳ ನಿರ್ವಹಣೆಯಲ್ಲಿ ಲೋಪಗಳು ಕಂಡು ಬಂದಿದ್ದರಿಂದ
ಮುಖ್ಯಾಧಿಕಾರಿಗಳು ನಿರ್ವಹಣೆ ಮಾಡುವ ವ್ಯಕ್ತಿಗೆ ಶೌಚಾಲಯಗಳ ಸ್ವಚ್ಛತೆಗೆ ಹೆಚ್ಚಿನ ಪ್ರಶಸ್ತಿ ನೀಡಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವಂತೆ ಸೂಚನೆ ನೀಡಿದರು. ಸಾರ್ವಜನಿಕರು ಹಣಕೊಟ್ಟು ಶೌಚಾಲಯಕ್ಕೆ ಹೋದರು ಕೂಡ ಶೌಚಾಲಯಗಳ ನಿರ್ವಹಣೆಯನ್ನು ಸರಿಯಾದ ಕ್ರಮದಲ್ಲಿ ಮಾಡ್ತಾಯಿಲ್ಲ ಶೌಚಾಲಯ ಒಳಗಡೆ ಬೀಡಿ ಸಿಗರೇಟ್ ಗುಟ್ಕಾಂತಹ ವಸ್ತುಗಳು ತುಂಬಿವೆ ಇದರಿಂದ ಶೌಚಾಲಯಕ್ಕೆ ಹೋಗುವ ಜನರಿಗೆ ರೋಗ ಹರಡುವ ಭಯ ಎದುರಾಗಿದೆ ಕೇವಲ ಹಣ ವಸೂಲಿ ಮುಂದಾಗಿರುವ ಸಾರ್ವಜನಿಕ ಶೌಚಾಲಯ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿರುವ ಸಾರ್ವಜನಿಕರು ಒತ್ತಾಯಿಸಿದ್ದಾರೆ, ಬಸ್ ನಿಲ್ದಾಣಕ್ಕೆ ಆಗಮಿಸುವ ಜನರಿಗಾಗಿ ನಿರ್ಮಾಣಗೊಂಡಿರುವ ಶೌಚಾಲಯವನ್ನು ಸರಿಯಾದ ಕ್ರಮದಲ್ಲಿ ನಿರ್ವಹಣೆ ಮಾಡದೆ ನಿರ್ಲಕ್ಷ ವಹಿಸಿದ ವ್ಯಕ್ತಿಯ ಗುತ್ತಿಗೆ ಕರಾರನ್ನು ರದ್ದು ಮಾಡಿ ಸರಿಯಾಗಿ ನಿರ್ವಹಣೆ ಮಾಡುವವರಿಗೆ ಶೌಚಾಲಯ ಗುತ್ತಿಗೆ ನೀಡುವಂತೆ ಪಟ್ಟಣ ಜನತೆ ಆಗ್ರಹಿಸಿದ್ದಾರೆ,