ಬಳ್ಳಾರಿಯಲ್ಲಿ ಬಂದೂಕಿನ ನೆತ್ತರಿನ ಹಸಿ ಆರದ ಮುನ್ನವೆ ಹೊತ್ತಿ ಉರಿಯುತ್ತಿದೆ ರೆಡ್ದಿ ಮನದಂಗಳ !!!
ವರದಿ ಸುಂದರರಾಜ್ ಕಾರಟಗಿ BA

ಮೊನ್ನೆಯಷ್ಟೇ ರೆಡ್ಡಿ ಮನೆ ಮೇಲೆ ಬಂದುಕಿನ ಗುಂಡು ಇಂದು ರೆಡ್ಡಿ ಮನೆಗೆ ಬೆಂಕಿ !! ಗಣಿ ನಾಡಿನ ಬಂದೂಕಿನ ನೆತ್ತರು ಹಸಿ ಆರದ ಮುನ್ನವೇ ಹೊತ್ತಿ ಉರಿಯುತ್ತಿದೆ ರೆಡ್ದಿ ಮನದಂಗಳ !!!
ಇದು ಆಕಸ್ಮಿಕವೋ ? ಇಲ್ಲಾ ಕೈವಾಡವೋ ?
ಬಳ್ಳಾರಿ ಜನವರಿ 24 : ಬಳ್ಳಾರಿಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿಯ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಲಾಗಿದೆ ಇದು ಕಾಂಗ್ರೆಸ್‌ನವರ ಕೃತ್ಯ ಎಂದು ಗಾಲಿ ಜನಾರ್ದನ ರೆಡ್ಡಿ ಸಹೋದರ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಗಂಭೀರವಾಗಿ ಆರೋಪಿಸಿದ್ದಾರೆ.
ಇತ್ತೀಚಿಗಷ್ಟೇ ಬ್ಯಾನರ್ ಗಲಾಟೆಯಾದಾಗ ಬೆಂಕಿ ಹಚ್ಚುತ್ತೇನೆಂದು ಭರತ್ ರೆಡ್ಡಿ ಹೇಳಿದ್ದರು. ಆತನ ಮಾತಿಗೆ ಸಾಕ್ಷಿ ಎನ್ನುವಂತೆ ನಮ್ಮ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿದ್ದಾರೆ. ಇದರ ಹಿಂದೆ ಹಿಂದೆ ಕಾಂಗ್ರೆಸ್‌ನವರ ಕೈವಾಡ ಎಂದು ಸೋಮಶೇಖರ್ ರೆಡ್ಡಿ ಆರೋಪ ಮಾಡಿದ್ದಾರೆ.
ನೂರು ಎಕರೆ ಪ್ರದೇಶದಲ್ಲಿ ಲೇಔಟ್ ಮಾಡಲಾಗಿತ್ತು. ಇದರಲ್ಲಿ ಮನೆ ಖರೀದಿ ಮಾಡುವವರಿಗೆ ತೋರಿಸಲು ಮಾಡೆಲ್ ಹೌಸ್ ನಿರ್ಮಾಣ ಮಾಡಲಾಗಿತ್ತು. ಸಂಜೆ ಸುಮಾರು 6.ಘಂಟೆ ಹೊತ್ತಿಗೆ ಬೆಂಕಿ ಹೊತ್ತಿದೆ. ಇದನ್ನು ನೋಡಿದ ಕೆಲವರು ಬೆಂಕಿ ಹಚ್ಚಿದವರನ್ನು ಹಿಡಿಯಲು ಪ್ರಯತ್ನ ಪಟ್ಟಿದ್ದಾರೆ ಅವರೆಲ್ಲ ಓಡಿ ಹೋಗಿದ್ದಾರೆ.
ಇದು ಕಾಂಗ್ರೆಸ್‌ನವರ ಕೃತ್ಯ ಎಂದು ಸೋಮಶೇಖರ್ ರೆಡ್ಡಿ ನೇರವಾಗಿ ಗುಡುಗಿದ್ದಾರೆ.
ಇನ್ನು ಘಟನೆ ನಡೆದಾಗ ಮಾಡೆಲ್ ಹೌಸ್ ನ ಮಾಲಕ ಹಾಗೂ ಗಂಗಾವತಿಯ ಶಾಸಕ ಗಾಲಿ ಜನಾರ್ದನ ರೆಡ್ಡಿ ಬೆಂಗಳೂರಿನಲ್ಲಿದ್ದರು. ವಿಷಯ ತಿಳಿಯುತ್ತಿದ್ದಂತೆ ಬಳ್ಳಾರಿಯತ್ತ ದೌಡಾಯಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣ ನಷ್ಟ ಆಗಿರುವುದಿಲ್ಲ ಎಂದು ತಿಳಿದಿದ್ದು, ಸುಮಾರು 2 ರಿಂದ 3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮಾಡಲ್ ಹೌಸ್ ಸುಟ್ಟು ಹೋಗಿದೆ, ಈ ಘಟನೆ ಬಳ್ಳಾರಿ ಜನರು ಮತ್ತೊಮ್ಮೆ ಬೆಚ್ಚಿ ಬೀಳುವಂತೆ ಮಾಡಿದೆ,


