ಸತ್ಯವ ಮರೆಮಾಚಿ ಸುಳ್ಳಿನ ವೈಭವೀಕರಣ ! ಪೋಲೀಸರ ವಿರುದ್ದ ಅಪಪ್ರಚಾರ ಖಂಡನಾರ್ಹ……. ಸುಂದರರಾಜ್ ಸಾಮಾಜಿಕ ಹೋರಾಟಗಾರ

ಗಂಗಾವತಿ ಬಸ್ ನಿಲ್ದಾಣದ ಬಾಲಕನ ಪ್ರಕರಣ ಪೋಲೀಸರ ವಿರುದ್ದ ಅಪಪ್ರಚಾರ
ಗಂಗಾವತಿ ಜನವರಿ 22 : ಜನವರಿ 21 ತಡ ರಾತ್ರಿ ಗಂಗಾವತಿಯ ಬಸ್ ನಿಲ್ದಾಣದಲ್ಲಿ ನಡೆದ ಘಟನೆಯಲ್ಲಿ ಸತ್ಯ ಮರೆಮಾಚಿ ಸಾಮಾಜಿಕ ಮಾಧ್ಯಮಗಳು ಸುಳ್ಳಿನ ವೈಭವೀಕರಣ ಮಾಡುವ ಮೂಲಕ ಜನಸ್ನೇಹಿ ಪೋಲಿಸ್ ಇಲಾಖೆಯ ಗೌರವಕ್ಕೆ ಧಕ್ಕೆ ತರಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಸುಂದರರಾಜ್ ಜಿಬಿ ನ್ಯೂಸ್ ಕನ್ನಡ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಮಾತನಾಡಿದ ಅವರು ಅಂದು ರಾತ್ರಿ ಬಸ್ ನಿಲ್ದಾಣದಲ್ಲಿ ನಡೆದ ವಾಸ್ತವಾಂಶವನ್ನು ಅರಿಯದೆ ವಸ್ತು ನಿಷ್ಠೆ ವರದಿ ಬಿತ್ತರಿಸದೆ ಪೊಲೀಸರದ್ದೆ ತಪ್ಪು ಎನ್ನುವಂತೆ ಜಾಲ ತಾಣಗಳಲ್ಲಿ ಪ್ರಚಾರ ಮಾಡುವ ಮೂಲಕ ಪೊಲೀಸರ ಘನತೆಗೆ ಸಾರ್ವಜನಿಕವಾಗಿ ಚ್ಯುತಿ ತರಲಾಗಿದೆ.112 ಗೆ ಕರೆ ಮಾಡಿದ ವ್ಯಕ್ತಿ ಹೇಳಿಕೆ ಹಾಗೂ ಬಸ್ ನಿಲ್ದಾಣದ ಸಿಸಿ ಕ್ಯಾಮರಾದಲ್ಲಿನ ಮಗುವಿನ ಚಲನವಲನೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.112 ಪೊಲೀಸರು ಮಗುವನ್ನು ವಿಚಾರಣೆ ನಡೆಸುವ ಸಂದರ್ಭಲ್ಲಿ ಮಗು ವಿಳಾಸವನ್ನು ಬೇರೆ ಬೇರೆ ಹೇಳಿದ್ದಾನೆ ವಿಳಾಸ ಸರಿಯಾಗಿ ಹೇಳದ ಕಾರಣ ಒಬ್ಬಂಟಿ ಬಾಲಕನನ್ನು ರಾತ್ರಿ ಹೊತ್ತಲ್ಲಿ ಸ್ಟೇಷನ್ ಗೆ ಕರೆದುಕೊಂಡು ಹೋಗಿದ್ದು ಪೊಲೀಸರ ಕರ್ತವ್ಯ ಪ್ರಜ್ಞೆಯಾಗಿದೆ,
ಆದರೆ ಬಾಲಕನನ್ನು ಪೋಲಿಸ್ ಠಾಣೆ ಗೆ ಕರೆದುಕೊಂಡು ಹೋಗಿದ್ದು ಅಪರಾಧವೆಂದು ಬಿಂಬಿಸುವುದು ಖಂಡನಾರ್ಹ, ಬಾಲಕನನ್ನು ಠಾಣೆ ಗೆ ಕರೆದುಕೊಂಡು ಹೋದ ನಂತರ ಜೈಲಿಗೆ ಹಾಕೋಕೆ ಆಗುತ್ತಾ ? ಸರಿಯಾದ ವಿಳಾಸ ಹೇಳದ ಅನಾಮಿಕ ಬಾಲಕನನ್ನು ಮಕ್ಕಳ ರಕ್ಷಣಾ ಘಟಕಕ್ಕೆ ಒಪ್ಪಿಸುವ ಮೂಲಕ ಪೊಲೀಸರು ಕರ್ತವ್ಯ ನಿಭಾಯಿಸಿದ್ದಾರೆ. ಪೋಲೀಸರು ಬೂಟು ಕಾಲಿನಿಂದ ಬಾಲಕನ ಕಾಲು ತುಳಿದಿದ್ದಾರೆ ಎನ್ನುವ ಆರೋಪ ಕೇವಲ ಅದು ಆರೋಪ ಮಾತ್ರ, ಅದಕ್ಕೆ ಸಾಕ್ಷಿ ಎಲ್ಲಿ? ಅದನ್ನು ಮಾಧ್ಯಮಗಳು ಯಾಕೆ ಜನಗಳಿಗೆ ತೋರಿಸಿಲ್ಲ? ದಾಖಲೆ ಇಲ್ಲದೆ ಆರೋಪ ಮಾಡಿ ಸಾರ್ವಜನಿಕ ವಲಯದಲ್ಲಿ ಪೋಲಿಸ್ ಇಲಾಖೆಯ ವಿರುದ್ಧ ಅಪನಂಬಿಕೆ ಉಂಟುಮಾಡುವುದು ಅಪರಾಧವಾಗಿದೆ, ಯಾವ ಅಧಿಕಾರಿಯಾಗಲಿ ಮಕ್ಕಳ ಮೇಲೆ ದೌರ್ಜನ್ಯ ಮಾಡುವುದಿಲ್ಲ, ಮಕ್ಕಳ ಪ್ರಕರಣಗಳನ್ನು ಯಾವ ರೀತಿಯಲ್ಲಿ ನಿಭಾಯಿಸಬೇಕು , ಯಾವ ರೀತಿ ಅವರ ರಕ್ಷಣೆ ಮಾಡಬೇಕು ಎನ್ನುವ ಕುರಿತು ಎಂದು ಪೋಲೀಸರು ತರಬೇತಿ ಪಡೆದಿರುತ್ತಾರೆ. ಬಾಲಕನ ಮೇಲೆ ಪೋಲಿಸರ ದೌರ್ಜನ್ಯ ಎನ್ನುವುದು ಆಧಾರ ರಹಿತ ಆರೋಪ. ಇದು ಕೇವಲ ಸುಳ್ಳಿನ ವೈಭವೀಕರಣ ಅಷ್ಟೇ, ಪೋಲಿಸರ ವಿರುದ್ಧ ಸುಳ್ಳು ಆರೋಪ ಮಾಡುವ ಮೂಲಕ ಇಲಾಖೆಯ ತೇಜೋವಧೆಗೆ ಮುಂದಾಗುವ ಜಾಲ ತಾಣಗಳಿಗೆ ಗೃಹ ಇಲಾಖೆ ಕಾನೂನಾತ್ಮಕ ಕಡಿವಾಣ ಹಾಕುವುದು ಅನಿವಾರ್ಯವಾಗಿದೆ ಎಂದಿದ್ದಾರೆ.
ಬಾಲಕನ ಹಿನ್ನೆಲೆ : ಕುಷ್ಟಗಿ ತಾಲೂಕಿನ ತಾವರಗೇರಾ ಗ್ರಾಮದ ಬಾಲಕನಾಗಿದ್ದು ಜನವರಿ 15 ರಂದು ಗ್ರಾಮದಿಂದ ನಾಪತ್ತೆ ಆಗಿರುತ್ತಾನೆ. ಈ ಬಗ್ಗೆ ತಾವರಗೇರಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.ಕಳೆದ ಒಂದು ವಾರದಿಂದ ಬಾಲಕನ ಸುಳಿವು ಸಿಕ್ಕಿರುವುದಿಲ್ಲ , ಜನವರಿ 21ರಂದು ಗಂಗಾವತಿ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಬಾಲಕನಿಗೆ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಉತ್ತಮ ಶಿಕ್ಷಣ ನೀಡಿ ಉತ್ತಮ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸುಂದರರಾಜ್ ವಿನಂತಿಸಿಕೊಂಡಿದ್ದಾರೆ.




