ಗಂಗಾವತಿ
ವಿನಾಯಕ ಅನುದಾನಿತ ಕ.ಹಿ.ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಣ

ಗಂಗಾವತಿ: ನಗರದ ಹಿರೇಜಂತಕಲ್ ವಿನಾಯಕ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ
ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿ ಹಾಗೂ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ನಾಯ್ಡು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಮನೋಹರಸ್ವಾಮಿ ಹಿರೇಮಠ, ಸಂಸ್ಥೆಯ ಅಧ್ಯಕ್ಷ ಸಾವಿ ತಿಪ್ಪಣ್ಣ,ಕಾರ್ಯದರ್ಶಿ ಕೊಂಡಮಿ ವೀರೇಶ, ದೈಹಿಕ ಶಿಕ್ಷಕ ಉಜ್ಜನಗೌಡ,ಸಂಸ್ಥೆಯ ಸದಸ್ಯ ಬಸಪ್ಪ ರಾಮಸಾಗರ,ಯಾಸೀನ್,ಶಿಕ್ಷಕರಾದ ಚನ್ನಪ್ಪ ,ರಾಮನಗೌಡ,ಲಕ್ಷ್ಮಿ, ಯಶೋಧ,ರಜೀಯಾ,ಸುನಿತಾ,ಭಾಗ್ಯಮ್ಮ,
ಮತ್ತು ಇನ್ನಿತರರು ಧ್ವಜಾರೋಹಣದಲ್ಲಿ ಪಾಲ್ಗೊಂಡಿದ್ದರು.