ಡಾ. ವಿಷ್ಣುವರ್ಧನ್ ಸ್ಮಾರಕ ದ್ವಂಸ ಖಂಡಿಸಿ, ಮತ್ತು ನೂತನ ಸ್ಮಾರಕ ನಿರ್ಮಿಸಲು ಮುಖ್ಯಮಂತ್ರಿಗಳಿಗೆ ಮನವಿ

ಗಂಗಾವತಿ:11 ಡಾ.ವಿಷ್ಣುವರ್ಧನ್ ಅವರ ಸ್ಮಾರಕ ದ್ವಂಸ ಮಾಡಿದ್ದನ್ನು ಖಂಡಿಸಿ, ಮತ್ತು ನೂತನ ಸ್ಮಾರಕ ನಿರ್ಮಿಸಲು ಮಾನ್ಯ ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರಿಗೆ ಗಂಗಾವತಿ ವಿಷ್ಣುವರ್ಧನ್ ಅಭಿಮಾನಿಗಳ ಬಳಗದಿಂದ ತಹಸೀಲ್ದಾರ್ ಮೂಲಕ ಮನವಿ ಪತ್ರವನ್ನು ಸಲ್ಲಿಸಿದರು.
ಕನ್ನಡ ಚಲನಚಿತ್ರ ರಂಗದ ಮೇರು ನಟ ಹಾಗೂ ಕನ್ನಡಿಗರ ಮನೆ-ಮನೆಗಳಲ್ಲಿ ಮನೆ ಮಾಡಿರುವ ಅಭಿನಯ ಭಾರ್ಗವ ಕಲಿಯುಗದ ಕರ್ಣ ಡಾ. ವಿಷ್ಣುವರ್ಧನ್ ಅವರ ಸ್ಮಾರಕವನ್ನು ಅಭಿಮಾನಿ ಸ್ಟುಡಿಯೋದಲ್ಲಿ ಧ್ವಂಸ ಮಾಡಿರುವುದನ್ನು ಖಂಡಿಸಿ ಮತ್ತು ಬಾಲಣ್ಣ ಅವರ ಕುಟುಂಬವನ್ನು ಓಲೈಸುವ ಮೂಲಕ ಮತ್ತೊಮ್ಮೆ ನೂತನ ಸ್ಮಾರಕವನ್ನು ಅಲ್ಲೇ ನಿರ್ಮಾಣ ಮಾಡುವ ಕುರಿತು ಗಂಗಾವತಿಯ ಡಾ. ವಿಷ್ಣುವರ್ಧನ್ ಅಭಿಮಾನಿಗಳ ಬಳಗದವರು ಮನವಿ ಮಾಡಿಕೊಳ್ಳುವುದು ಏನೆಂದರೆ ನ್ಯಾಯಾಲಯ ಮತ್ತಿತರ ಕಾರಣಕ್ಕಾಗಿ ಅಭಿಮಾನ ಸ್ಟುಡಿಯೋದಲ್ಲಿದ್ದ ಡಾ. ವಿಷ್ಣುವರ್ಧನ್ ಅವರ ಸ್ಮಾರಕವನ್ನು ದ್ವಂಸ ಮಾಡಿ ನೆಲಸಮ ಮಾಡಲಾಗಿದೆ. ಡಾ. ವಿಷ್ಣುವರ್ಧನ್ ಕನ್ನಡಿಗರ ಅಭಿಮಾನದ ನಟರಾಗಿದ್ದು ನಾಡು, ನುಡಿ, ನೆಲ, ಜಲ, ವಿಷಯಗಳಲ್ಲಿ ಅವರು ತಮ್ಮದೇ ಆದಂತಹ ಕೊಡುಗೆ ನೀಡಿದ್ದಾರೆ. ಆದ್ದರಿಂದ ಸರ್ಕಾರ ಮಧ್ಯಪ್ರವೇಶ ಮಾಡಿ ಬಾಲಣ್ಣನವರ ಕುಟುಂಬವನ್ನು ಒಲೈಸುವ ಮೂಲಕ ಅದೇ ಸ್ಥಳದಲ್ಲಿ ಸ್ವಲ್ಪ ಜಾಗವನ್ನು ಪಡೆದು ಸುಂದರವಾದ ಸ್ಮಾರಕ ನಿರ್ಮಾಣ ಮಾಡುವಂತೆ ಈ ಮೂಲಕ ನಾವೆಲ್ಲರೂ ಮನವಿ ಮಾಡಿಕೊಳ್ಳುತ್ತೇವೆ ಎಂದರು. ಈ ಸಂದರ್ಭದಲ್ಲಿ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಬಳಗದ ಹಿರಿಯ ಪತ್ರಕರ್ತ ಕೆ.ನಿಂಗಜ್ಜ,ನಾಗರಾಜ ಮೇದಾರ್,ಕೆ.ರಂಗಪ್ಪ ನಾಯಕ,ಜೂನಿಯರ್ ವಿಷ್ಣುವರ್ಧನ್ ಮಹಾಬಲೇಶ,ಮಾರುತಿ ಐಲಿ,ರಮೇಶ ನೇತ್ರ,ಶರೀಫ್,ಅಜ್ಮೀರ ಮೇಡಿಕಲ್,ರಾಜು ಮೇದಾರ್,ದೇವರಾಜ,ವೀರೇಶ, ರಾಜಶೇಖರ ಮೇದಾರ್,ಕಿರಣ ಟಿ,ಹನುಮಂತಪ್ಪ, ಶ್ರೀನಿವಾಸ, ಮಲ್ಲಿಕಾರ್ಜುನ ಗೂಟೋರು ಪತ್ರಕರ್ತ, ಕೆ.ಎಂ.ಶರಣಯ್ಯಸ್ವಾಮಿ ಪತ್ರಕರ್ತ, ಮಂಜುನಾಥ, ಮೈಹಿಬೂಬ,ಕುಮಾರ್ ಕೊಪ್ಪಳ, ಸೇರಿದಂತೆ ಇತರರು ಇದ್ದರು